For Quick Alerts
  ALLOW NOTIFICATIONS  
  For Daily Alerts

  ಹೊಸ ಅವತಾರ ಎತ್ತಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  By Suneetha
  |

  ಸಾಮಾನ್ಯವಾಗಿ ಪ್ರತೀ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದಂದು ಹೊಸ ಚಿತ್ರ ಸೆಟ್ಟೇರುವುದು ಒಂದು ಸಂಪ್ರದಾಯವೇ ಆಗಿತ್ತು. ಆದರೆ ಈ ಬಾರಿ ಮಾತ್ರ ಹಾಗಾಗದಂತೆ ನಟ ದರ್ಶನ್ ಅವರು ಎಚ್ಚರಿಕೆ ವಹಿಸಿದ್ದಾರೆ.

  ಹೌದು ಸದ್ಯಕ್ಕೆ ದರ್ಶನ್ ಅವರು ನಿರ್ದೇಶಕ ಕಮ್ ನಿರ್ಮಾಪಕ ರಾಘವೇಂದ್ರ ಹೆಗಡೆ ಅವರ ಆಕ್ಷನ್-ಕಟ್ ನಲ್ಲಿ ಮೂಡಿಬರುತ್ತಿರುವ 'ಜಗ್ಗುದಾದಾ' ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಹೊಸದಾಗಿ ನಿರ್ದೇಶಕ ಚಿಂತನ್ ಎ.ವಿ ಕಥೆ ಬರೆದು ನಿರ್ದೇಶನ ಮಾಡುತ್ತಿರುವ 'ಚಕ್ರವರ್ತಿ' ಸಿನಿಮಾದ ತಯಾರಿಯಲ್ಲಿ ತೊಡಗಿದ್ದಾರೆ.[ನಟ ದರ್ಶನ್ ಹುಟ್ಟುಹಬ್ಬದ ದಿನ ಎಂತಹ ದುರಂತ]

  ಈಗಾಗಲೇ 'ಚಕ್ರವರ್ತಿ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು. ದರ್ಶನ್ ಅವರು ಈ ಸಿನಿಮಾದಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ ಹೊಸ ಅವತಾರದಲ್ಲಿ ಮಿಂಚಿದ್ದಾರೆ.[ಬರ್ತ್ ಡೇ ಸ್ಪೆಷಲ್: ದರ್ಶನ್ ಅವರ ಮುಂಬರುವ ಚಿತ್ರಗಳ ಲಿಸ್ಟ್]

  ದರ್ಶನ್ ಅವರ 'ಚಕ್ರವರ್ತಿ' ಸಿನಿಮಾದ ಮೊದಲ ನೋಟ ಸುಮಾರು 80ರ ದಶಕದ ಚಿತ್ರವನ್ನು ನೆನಪಿಸುತ್ತದೆ. ಇದೂ ಭೂಗತ ಲೋಕದ ದೊರೆಯ ಕಥೆಯನ್ನಾಧರಿಸಿದ ಸಿನಿಮಾ ಆಗಿರಬಹುದು ಎಂಬ ಸುಳಿವನ್ನು ಈ ಫೋಸ್ಟರ್ ನೀಡುತ್ತಿದೆ.

  ಅಂದಹಾಗೆ ಈ ಸಿನಿಮಾದ ಬಗ್ಗೆ ಹೆಚ್ಚಿನ ಸೀಕ್ರೆಟ್ ಬಿಟ್ಟುಕೊಡದ ಚಿತ್ರತಂಡ, ಈ ಸಿನಿಮಾ ನೈಜ ಭೂಗತ ಲೋಕದ ಕಥೆ ಎಂದು ತಿಳಿಸಿದೆ. ಮಾರ್ಚ್ ಅಥವಾ ಎಪ್ರಿಲ್ ತಿಂಗಳಿನಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

  ನಿರ್ಮಾಪಕರಾದ ಕೆ.ವಿ ಸತ್ಯಪ್ರಕಾಶ್ ಮತ್ತು ಕೆ.ಎಸ್ ಸೂರಜ್ ಗೌಡ ನಿರ್ಮಾಣ ಮಾಡುತ್ತಿರುವ 'ಚಕ್ರವರ್ತಿ' ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಎಚ್.ಸಿ ವೇಣು ಅವರ ಕ್ಯಾಮರಾ ಕೈಚಳಕ ತೋರಲಿದ್ದು, ಕೆ.ಎಂ ಪ್ರಕಾಶ್ ಸಂಕಲನಕಾರರು.

  ಒಟ್ನಲ್ಲಿ 'Mr.ಐರಾವತ', ಮತ್ತು 'ವಿರಾಟ್' ಸಿನಿಮಾಗಳನ್ನು ಅಭಿಮಾನಿಗಳಿಗೆ ನೀಡಿದ ನಟ ದರ್ಶನ್ ಅವರು ಸದ್ಯಕ್ಕೆ ಹಲವಾರು ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಹಿಡಿದು ಗಾಂಧಿನಗರದ ತುಂಬಾ ಓಡಾಡುತ್ತಿದ್ದಾರೆ.

  English summary
  Actor Darshan, who celebrated his birthday on Tuesday, Feb 16th, did not plan for a muhurath of any of his films. He is staying focused on his current project Jaggu Dada, while diligently preparing for his upcoming film, Chakravarthy, a project to be helmed by Chintan A V, who has written the story, screenplay and dialogues for the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X