For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ರಿಯಲ್ ಹೀರೋ' ಅನ್ನೋದು ಇದಕ್ಕೆ!

  By Harshitha
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗಂತೆ...ಹೀಗಂತೆ... ಅಂತ ಯಾರು ಎಷ್ಟೇ ಗಾಸಿಪ್ ಹಬ್ಬಿಸಿದರೂ ದರ್ಶನ್ ಹೃದಯವಂತ ಅನ್ನೋದು ಅವರ ಆಪ್ತರಿಗಷ್ಟೇ ಗೊತ್ತು.

  ಯಾರೇ ಕಷ್ಟದಲ್ಲಿದ್ದರೂ ಸಹಾಯಕ್ಕೆ ಮುಂದಾಗುವ ಸ್ನೇಹಜೀವಿ. ಹಾಗಂತ ಮಾಡಿದ ಸಹಾಯಕ್ಕೆ ಪಬ್ಲಿಸಿಟಿ ತೆಗೆದುಕೊಳ್ಳುವ ಜಾಯಮಾನ ಅವರದ್ದಲ್ಲ. ಬಹುಶಃ ಇದೇ ಕಾರಣಕ್ಕೆ ದರ್ಶನ್ ರವರ ಚಿನ್ನದಂಥ ಗುಣ ಅನೇಕರಿಗೆ ಗೊತ್ತಿಲ್ಲ. [ಪುಟ್ಟ ಅಭಿಮಾನಿಯ ಸಂತಸವನ್ನು ಇಮ್ಮಡಿಗೊಳಿಸಿದ ದರ್ಶನ್]

  ಗೆಳೆಯ ಬುಲೆಟ್ ಪ್ರಕಾಶ್ ಸೇರಿದಂತೆ ಅನೇಕರ ಕಷ್ಟಕಾಲದಲ್ಲಿ ಆಪತ್ಭಾಂಧವರಾಗಿರುವ ದರ್ಶನ್ ಸ್ವಾರ್ಥಿ ಅಲ್ಲ. ಎಲ್ಲಾ ಕನ್ನಡ ಚಿತ್ರಗಳಿಗೂ ಪ್ರೋತ್ಸಾಹ ನೀಡುವ ಉದಾರಿ ಅನ್ನೋದಕ್ಕೆ ಇಲ್ಲಿದೆ ಸ್ಪಷ್ಟ ನಿದರ್ಶನ. ಮುಂದೆ ಓದಿ....

  'ವಿರಾಟ್' ಬಿಡುಗಡೆ ಮುಂದಕ್ಕೆ ಹೋಗ್ಬೇಕು!

  'ವಿರಾಟ್' ಬಿಡುಗಡೆ ಮುಂದಕ್ಕೆ ಹೋಗ್ಬೇಕು!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ವಿರಾಟ್' ಸಿನಿಮಾ ಕಳೆದ ಎರಡು ವರ್ಷಗಳಿಂದ ರೆಡಿಯಾಗುತ್ತಲೇ ಇದೆ. ಮೊನ್ನೆಮೊನ್ನೆಯಷ್ಟೆ ಚಿತ್ರದ ಆಡಿಯೋ ರಿಲೀಸ್ ಆಯ್ತು. ಅಂದೇ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿಬಿಟ್ರು ನಿರ್ಮಾಪಕ ಸಿ.ಕಲ್ಯಾಣ್. [ದರ್ಶನ್ ಅಭಿಮಾನಿಗಳೇ ಸಂಕ್ರಾಂತಿಯಂದು ಉದಯ ಟಿವಿ ತಪ್ಪದೆ ನೋಡಿ]

  'ವಿರಾಟ್' ಬಿಡುಗಡೆ ಯಾವಾಗ?

  'ವಿರಾಟ್' ಬಿಡುಗಡೆ ಯಾವಾಗ?

  ನಿರ್ಮಾಪಕ ಸಿ.ಕಲ್ಯಾಣ್ ಹೇಳುವ ಪ್ರಕಾರ, 'ವಿರಾಟ್' ಜನವರಿ 22 ರಂದು ಬಿಡುಗಡೆ ಆಗಲಿದೆ. ಆದ್ರೆ, ಇದಕ್ಕೆ ದರ್ಶನ್ ರವರ ಸಮ್ಮತಿ ಇಲ್ಲ. [ದಾಖಲೆ ಮೊತ್ತಕ್ಕೆ 'ವಿರಾಟ್' ಆಡಿಯೋ ರೈಟ್ಸ್ ಸೇಲ್!]

  ಕಾರಣ ಏನು?

  ಕಾರಣ ಏನು?

  ಏಕಾಏಕಿ 'ವಿರಾಟ್' ಬಿಡುಗಡೆ ದಿನಾಂಕ ಘೋಷಣೆ ಮಾಡಿರುವುದರಿಂದ ದರ್ಶನ್ ಗೆ ಬೇಸರವಾಗಿದೆ. ಅವರ ಬೇಸರಕ್ಕೆ ಕಾರಣ ಈಗಾಗಲೇ ಬಿಡುಗಡೆಗೆ ಕ್ಯೂ ನಲ್ಲಿರುವ ಕನ್ನಡ ಚಿತ್ರಗಳು. 'ವಿರಾಟ್' ಚಿತ್ರ ಜನವರಿ 22 ರಂದು ರಿಲೀಸ್ ಆದ್ರೆ, ಅಂದು ರಿಲೀಸ್ ಆಗಲಿರುವ ಇತರೆ ಕನ್ನಡ ಚಿತ್ರಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ 'ವಿರಾಟ್' ಬಿಡುಗಡೆ ಮುಂದಕ್ಕೆ ಹೋಗ್ಬೇಕು ಅನ್ನೋದು ದರ್ಶನ್ ರವರ ಅಭಿಲಾಷೆ.

  ಫೇಸ್ ಬುಕ್ ನಲ್ಲಿ ದರ್ಶನ್ ಮನದಾಳ

  ಫೇಸ್ ಬುಕ್ ನಲ್ಲಿ ದರ್ಶನ್ ಮನದಾಳ

  ''ನನ್ನ ಚಿತ್ರದಿಂದ ಇತರೆ ಕನ್ನಡ ಚಿತ್ರಗಳಿಗೆ ತೊಂದರೆ ಆಗುವುದು ನನಗೆ ಇಷ್ಟವಿಲ್ಲ. ಏಕಾಏಕಿ 'ವಿರಾಟ್' ಸಿನಿಮಾ ಬಿಡುಗಡೆ ಆಗುವುದನ್ನ ನಾನು ನಿರೀಕ್ಷಿಸಿರಲಿಲ್ಲ. ಇತರೆ ಕನ್ನಡ ಚಿತ್ರಗಳ ಹಿತಾಸಕ್ತಿಯಿಂದ, 'ವಿರಾಟ್' ಜನವರಿ 29 ರ ನಂತರ ಬಿಡುಗಡೆ ಆಗಬೇಕೆನ್ನುವುದು ನನ್ನ ಇಚ್ಛೆ. ಆದ್ರೆ, ಹೊರರಾಜ್ಯದ ನಿರ್ಮಾಪಕ ಸಿ.ಕಲ್ಯಾಣ್ ಜನವರಿ 22 ರಂದೇ 'ವಿರಾಟ್' ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಅದು 3 ದಿನಗಳ ಹಾಡಿನ ಚಿತ್ರೀಕರಣ ಇನ್ನೂ ಬಾಕಿ ಇರುವಾಗಲೇ. ಎರಡು ವರ್ಷಗಳೇ ಡಿಲೇ ಆಗಿರುವಾಗ ಇನ್ನೊಂದು ವಾರ ಪೋಸ್ಟ್ ಪೋನ್ ಆದರೆ ಸಮಸ್ಯೆ ಇಲ್ಲ. ಕನ್ನಡ ಚಿತ್ರ ನಿರ್ಮಾಪಕರು ಮತ್ತು ಕನ್ನಡ ಚಿತ್ರಗಳನ್ನ ಸಪೋರ್ಟ್ ಮಾಡಿ'' ಅಂತ ತಮ್ಮ ಫೇಸ್ ಬುಕ್ ನಲ್ಲಿ ದರ್ಶನ್ ಸುದೀರ್ಘ ಸ್ಟೇಟಸ್ ಹಾಕಿದ್ದಾರೆ.

  'ವಿರಾಟ್' ಬಿಡುಗಡೆ ಮುಂದಕ್ಕೆ?

  'ವಿರಾಟ್' ಬಿಡುಗಡೆ ಮುಂದಕ್ಕೆ?

  ದರ್ಶನ್ ರವರ ಈ ಮಾತುಗಳಿಗೆ ಬೆಲೆ ಕೊಟ್ಟು ನಿರ್ಮಾಪಕ ಸಿ.ಕಲ್ಯಾಣ್ 'ವಿರಾಟ್' ಚಿತ್ರ ಬಿಡುಗಡೆಯನ್ನ ಮುಂದಕ್ಕೆ ತಳ್ಳುತ್ತಾರಾ? ಅನ್ನೋದಿನ್ನೂ ಪಕ್ಕಾ ಆಗಿಲ್ಲ. ಸದ್ಯಕ್ಕೆ ಎಲ್ಲವೂ ಇನ್ನೂ ಮಾತುಕತೆ ಹಂತದಲ್ಲಿದೆ.

  ಜನವರಿ 22 ರಂದು 'ರಿಕ್ಕಿ'

  ಜನವರಿ 22 ರಂದು 'ರಿಕ್ಕಿ'

  ಈ ನಡುವೆ ಜನವರಿ 22 ರಂದು ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ನಟನೆಯ 'ರಿಕ್ಕಿ' ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

  ಉದಾರಿ ದರ್ಶನ್!

  ಉದಾರಿ ದರ್ಶನ್!

  'ಊರವರ ಉಸಾಬರಿ ನಮಗ್ಯಾಕೆ? ನಮ್ದನ್ನ ನಾವು ನೋಡಿಕೊಳ್ಳೋಣ' ಅನ್ನುವ ಈಗಿನ ಕಾಲದಲ್ಲಿ ಇತರೆ ಕನ್ನಡ ಚಿತ್ರಗಳನ್ನ ಗಮನದಲ್ಲಿಟ್ಟುಕೊಂಡು ತಮ್ಮ ಚಿತ್ರವನ್ನ ಮುಂದೂಡುತ್ತಿರುವ ದರ್ಶನ್ ರವರ ಉದಾರ ಮನೋಭಾವಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ..?

  English summary
  Kannada Actor Darshan starrer 'Viraat' is slated to release on January 22nd. Meanwhile, Darshan has taken his facebook account to express his opinion on release of his movie and support for Kannada Producers and Kannada Movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X