»   » 'ನಾನೀಗ ಫ್ಲಾಪ್ ಸ್ಟಾರ್' ಅಂತ ದರ್ಶನ್ ಯಾಕಂದ್ರು?

'ನಾನೀಗ ಫ್ಲಾಪ್ ಸ್ಟಾರ್' ಅಂತ ದರ್ಶನ್ ಯಾಕಂದ್ರು?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ನಟ ಸುದೀಪ್ ಅವರನ್ನು ಆರಡಿ ಕಟೌಟ್ ಅಂತಾನೇ ಕರಿಯೋದು ವಾಡಿಕೆ. ಇದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಹೊರತಾಗಿಲ್ಲ. ಯಾಕೆಂದರೆ ಅವರ ಹೈಟ್ ಗೆ ತಕ್ಕಂತೆ ನಾಯಕಿಯರನ್ನು ಹುಡುಕಲು ಚಿತ್ರತಂಡದವರು ಬಹಳ ಕಷ್ಟಪಡುತ್ತಾರೆ.

ಅಂದಹಾಗೆ ಈ ಹೈಟ್ ವಿಚಾರ ಇಲ್ಯಾಕೆ ಬಂತಪ್ಪ ಅಂದ್ರೆ, ಜೂನ್ 7 ಮಂಗಳವಾರದಂದು ಮೈಸೂರಿನಲ್ಲಿ 'ಜಗ್ಗುದಾದಾ' ಚಿತ್ರದ ಪ್ರೆಸ್ ಮೀಟ್ ನಡೆದಿದ್ದು, ಅಲ್ಲಿ ಪತ್ರಕರ್ತರೊಬ್ಬರು ದರ್ಶನ್ ಅವರ ಹೈಟ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.[ದರ್ಶನ್ ಜಗ್ಗು'ದಾದಾಗಿರಿ' ಹೇಗಿದೆ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ.!]


'ನಮ್ಮ ಮನೆಯಲ್ಲಿ ಜಾಸ್ತಿ ಗೊಬ್ಬರ ಹಾಕಿ ಬೆಳೆಸಿದ್ದಾರೆ. ಅದಕ್ಕೆ ಕನ್ನಡದಲ್ಲಿ ನನ್ನ ಹೈಟ್ ಗೆ ತಕ್ಕ ನಟಿಯರು ಸಿಗದಿದ್ದರೆ ನಾನು ಏನು ಮಾಡಲಿ' ಎಂದು ದರ್ಶನ್ ಅವರು ಪತ್ರಕರ್ತರ ಪ್ರಶ್ನೆಗೆ ಬಹಳ ಹಾಸ್ಯಮಿಶ್ರಿತವಾಗಿ ಉತ್ತರ ನೀಡಿದ್ದಾರೆ.['ಕನ್ನಡಕ್ಕೆ ನಾನು ಹೊಸಬಳು ಅನ್ನೋ ಭಾವನೆ ಮೂಡಲಿಲ್ಲ': ದೀಕ್ಷಾ]


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಗಳವಾರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 'ಜಗ್ಗುದಾದಾ' ಚಿತ್ರದ ಪತ್ರೀಕಾಗೋಷ್ಠಿಯಲ್ಲಿ ಪತ್ರಕರ್ತರ ಜೊತೆ ತುಂಬಾ ಹಾಸ್ಯ ಚಟಾಕಿ ಹಾರಿಸಿಕೊಂಡು ಉತ್ತರ ನೀಡಿದ್ದಾರೆ. ಮುಂದೆ ಓದಿ....


ಪತ್ರಕರ್ತರ ಸಹವಾಸ ಬೇಡ: ದರ್ಶನ್

ಪ್ರತಿ ಸಿನಿಮಾದಲ್ಲಿ ನಟಿಯರನ್ನು ಬದಲಾಯಿಸುತ್ತಿದ್ದೀರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್ ಅವರು 'ಒಬ್ಬರ ಜೊತೆ 4 ಸಿನಿಮಾ ಮಾಡಿದರೆ ಸಂಬಂಧ ಕಲ್ಪಿಸುತ್ತೀರಾ. ಅದಕ್ಕೆ ಅದರ ಸಹವಾಸವೇ ಬೇಡ ಅಂತ' ಎಂದು ನಗು-ನಗುತ್ತಾ ದರ್ಶನ್ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.[ಟ್ರೈಲರ್: ಸಿಂಹದಂತೆ ಘರ್ಜಿಸಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್]


ಸೃಜನ್ ಲೋಕೇಶ್ ಹೀರೋನಾ?

ಇತ್ತೀಚೆಗೆ ನಿಮ್ಮ ಸಿನಿಮಾಗಳು ಅಷ್ಟೊಂದು ಯಶಸ್ವಿ ಆಗಿಲ್ಲ ಅದಕ್ಕಾಗಿ 'ಜಗ್ಗುದಾದಾ' ಚಿತ್ರದಲ್ಲಿ ಸೃಜನ್ ಲೋಕೇಶ್ ಅವರನ್ನು ಹಾಕಿಕೊಂಡಿದ್ದೀರಾ ಅನ್ನೋ ಪ್ರಶ್ನೆಗೆ ದರ್ಶನ್ ಅವರು 'ಹೌದು ನಿಜ, ಆದರೆ ಸಿನಿಮಾ ಎಷ್ಟೇ ಫ್ಲಾಪ್ ಆದರೂ ನನಗೆ ಬೇಜಾರಿಲ್ಲ, ನಾನೀಗ ಫ್ಲಾಪ್ ಸ್ಟಾರ್ ಅದಕ್ಕೆ ನಾನು ಸೃಜನ್ ಲೋಕೇಶ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿದ್ದೇನೆ'.['ಜಗ್ಗುದಾದಾ' ಚಿತ್ರಕ್ಕೆ ಹೀರೋ ಯಾರು ದರ್ಶನ್/ಸೃಜನ್ ಲೋಕೇಶ್?]


ಟಾಂಗ್ ಕೊಟ್ಟ 'ಜಗ್ಗುದಾದಾ'

'ಸೋಲು-ಗೆಲುವು ಎರಡನ್ನು ನಾನು ತಲೆಗೆ ಏರಿಸಿಕೊಳ್ಳುವವನಲ್ಲ, ನನ್ನ ಸಿನಿಮಾಗಳು ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾಗುತ್ತದೆ. ವಿದೇಶದಲ್ಲಿ ಅಷ್ಟೇನು ಮಾರ್ಕೆಟ್ ಇಲ್ಲ' ಎಂದು ದರ್ಶನ್ ಅವರು ಪತ್ರಕರ್ತರಿಗೆ ಟಾಂಗ್ ನೀಡಿದ್ದಾರೆ.


ಹಾಸ್ಯ ಮಾಡಿದ ದರ್ಶನ್

ಬರೀ ನನ್ನ ಚಿತ್ರಗಳೇ ಚಿತ್ರಮಂದಿರದಲ್ಲಿ ಇದ್ದರೆ ಹೇಗೆ?, ಬೇರೆ ನಿರ್ಮಾಪಕರಿಗೆ ಬೇಸರ ಆಗಲ್ವಾ?. ಅಂತ ದರ್ಶನ್ ಅವರು ನಗೆ ಚಟಾಕಿ ಹಾರಿಸಿದ್ದಾರೆ.


ಸೃಜನ್ ಮಾತುಗಳು

'ಜಗ್ಗುದಾದಾ' ಚಿತ್ರವನ್ನು ದೊಡ್ಡ ಉದ್ದೇಶ ಇಟ್ಟುಕೊಂಡು ತಯಾರಿಸಿದ್ದೇವೆ. ಹಾಗೆಯೇ ದರ್ಶನ್ ಅಭಿನಯದ ಉತ್ತಮ ಚಿತ್ರ ಇದಾಗಿದೆ. ದರ್ಶನ್ ಕಡಿಮೆ ಮಾತಾಡಿರೋ ಮೊದಲನೇ ಚಿತ್ರ ಇದು. ಚಿತ್ರದಲ್ಲಿ ದರ್ಶನ್ ಅವರ ಆರ್ಭಟ ಇರೋದಿಲ್ಲ, ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರವಾಗಲಿದೆ ಎಂದು ಸೃಜನ್ ಲೋಕೇಶ್ ಅವರು ನುಡಿದಿದ್ದಾರೆ.


ದರ್ಶನ್ ಏನಂತಾರೆ?

'ಒಬ್ಬ ಅಭಿಮಾನಿಯಾಗಿ ನೋಡೋದಕ್ಕಿಂತ, ಸಾಮಾನ್ಯ ವ್ಯಕ್ತಿಯಾಗಿ 'ಜಗ್ಗುದಾದಾ' ಸಿನಿಮಾ ನೋಡಬಹುದು. ಚಿತ್ರದಲ್ಲಿ ಕಾಮಿಡಿ, ಫೈಟ್ಸ್, ಡೈಲಾಗ್ಸ್ ಎಲ್ಲವೂ ಸೀಮಿತವಾಗಿಯೇ ಇದೆ. ಇಡೀ ಕುಟುಂಬ ಕುಳಿತು ನೋಡಬಹುದಾದಾ ಚಿತ್ರ 'ಜಗ್ಗುದಾದಾ'. ಟೈಟಲ್ ಮಾಸ್ ಇದೆ ಅಂತ ತಪ್ಪಾಗಿ ತಿಳಿಯಬೇಡಿ, ಒಬ್ಬ ರೌಡಿ ಮದುವೆಯಾಗಲು ಪಡುವ ಪ್ರಯತ್ನವೇ 'ಜಗ್ಗುದಾದಾ'. ಎಲ್ಲರೂ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ' ಎಂದು ದರ್ಶನ್ ಮನವಿ ಮಾಡಿದ್ದಾರೆ.


English summary
Kannada Movie 'Jaggu Dada' press meet: Kannada Actor Darshan Spoke about sandalwood and his film 'Jaggu Dada'. Kannada movie 'Jaggu Dada' all set to releasing on June 10th. The movie is directed by Raghavendra Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada