For Quick Alerts
  ALLOW NOTIFICATIONS  
  For Daily Alerts

  ರೈತರ ಶ್ರಮದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತು

  By Pavithra
  |
  ರೈತರ ಬಗ್ಗೆ ದರ್ಶನ್ ಹೇಳಿದ್ದೇನು..? | Darshan speaks about farmer..! | Filmibeat Kannada

  ಅನೇಕ ಸಿನಿಮಾ ಕಲಾವಿದರು ರೈತ ಕುಟುಂಬ ಹಿನ್ನಲೆಯಿಂದ ಬಂದವರಾಗಿದ್ದಾರೆ. ಇನ್ನು ಕೆಲವರು ರೈತ ಕುಟುಂಬದಿಂದ ಬಂದಿಲ್ಲವಾದರೂ ರೈತರ ಬಗ್ಗೆ ಒಳ್ಳೆಯ ಅಭಿಪ್ರಾಯ ಹಾಗೂ ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವ ಮನಸ್ಸು ಮಾಡುತ್ತಾರೆ.

  ಅವರುಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಸದಾ ರೈತರ ಬಗ್ಗೆ ಕಾಳಜಿ ಹೊಂದಿರುವ ಡಿ ಬಾಸ್ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ರೈತರ ಬಗ್ಗೆ ಮಾತನಾಡಿದ್ದಾರೆ. ಇಷ್ಟು ದಿನಗಳಲ್ಲಿ ಯಾರೋಬ್ಬರು ಯೋಚನೆ ಮಾಡದ ಹಾದಿಯಲ್ಲಿ ದಾಸ ಆಲೋಚನೆ ಮಾಡಿದ್ದಾರೆ.

  ಎಲ್ಲಿದ್ದಾರೆ? ಹೇಗಿದ್ದಾರೆ? 'ಸಾರಥಿ'ಯ ಸುಂದರಿ ದೀಪಾ ಸನ್ನಿಧಿಎಲ್ಲಿದ್ದಾರೆ? ಹೇಗಿದ್ದಾರೆ? 'ಸಾರಥಿ'ಯ ಸುಂದರಿ ದೀಪಾ ಸನ್ನಿಧಿ

  ಕಮರ್ಷಿಯಲ್ ಸಿನಿಮಾ ಬಗ್ಗೆ ಮಾತನಾಡಲು ಬಂದ ದಾಸ ದರ್ಶನ್ ರೈತರ ಬಗ್ಗೆ ಮಾತನಾಡಿದ್ದು ಏಕೆ? ವಿಭಿನ್ನವಾದ ಆಲೋಚನೆ ಡಿ ಬಾಸ್ ತಲೆಯಲ್ಲಿ ಹೇಗೆ ಬಂತು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

  ನಿರ್ಮಾಣಕ್ಕೂ ರೈತರಿಗೂ ಸಂಬಂಧ

  ನಿರ್ಮಾಣಕ್ಕೂ ರೈತರಿಗೂ ಸಂಬಂಧ

  ಒಂದು ಸಿನಿಮಾ ನಿರ್ಮಾಣ ಸಂಸ್ಥೆ ಆರಂಭ ಮಾಡುವಾಗ ಸಾಕಷ್ಟು ಕಷ್ಟಗಳಿರುತ್ತೆ. ಆದರೆ ನಿರ್ಮಾಣ ಸಂಸ್ಥೆಯಿಂದ ರೈತರಿಗೆ ಉಪಯೋಗ ಆಗುತ್ತೆ. ಸಿನಿಮಾ ಆರಂಭದಿಂದ ಹೊಲದಲ್ಲಿ ದುಡಿಯುವ ರೈತರಿಗೆ ಉಪಯೋಗ ಆಗುತ್ತೆ ಎನ್ನುವುದನ್ನು ದರ್ಶನ್ ತಿಳಿಸಿದ್ದಾರೆ.

  ಸಿನಿಮಾ ಸೆಟ್ ನಲ್ಲಿ ಸಾಕಷ್ಟು ಜನರಿಗೆ ಊಟ

  ಸಿನಿಮಾ ಸೆಟ್ ನಲ್ಲಿ ಸಾಕಷ್ಟು ಜನರಿಗೆ ಊಟ

  ಸಿನಿಮಾ ನಿರ್ಮಾಣ ಸಂಸ್ಥೆ ಆರಂಭ ಮಾಡಿದ್ರೆ ಪ್ರತಿ ಸಿನಿಮಾ ಶೂಟಿಂಗ್ ನಲ್ಲಿ ನೂರಾರು ಜನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಊಟ ಮಾಡುತ್ತಾರೆ. ಹೀಗಾಗಿ ರೈತರಿಗೂ ಪ್ರೋಡಕ್ಷನ್ ಕಂಪನಿಗೂ ಸಂಬಂಧ ಇದೆ. ಎನ್ನುವ ವಿಚಾರವನ್ನು ಜನರಿಗೆ ಮನವರಿಕೆ ಮಾಡಿದ್ದಾರೆ ದರ್ಶನ್.

  ಅನಿಶ್ ಗೆ ಶುಭ ಕೋರಿದ ದರ್ಶನ್

  ಅನಿಶ್ ಗೆ ಶುಭ ಕೋರಿದ ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಿಶ್ ತೇಜೇಶ್ವರ್ ಅಭಿನಯದ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಇದು ಅನಿಶ್ ನಿರ್ಮಾಣ ಸಂಸ್ಥೆಯಲ್ಲಿ ಆರಂಭ ಆಗುತ್ತಿರುವ ಮೊದಲ ಚಿತ್ರವಾಗಿದೆ ಆದ್ದರಿಂದ ಡಿ ಬಾಸ್ ಈ ಮಾತನ್ನು ಅಭಿಮಾನಿಗಳ ಮುಂದೆ ಹೇಳಿದರು.

  ದರ್ಶನ್ ಒಳಗೊಬ್ಬ ರೈತ

  ದರ್ಶನ್ ಒಳಗೊಬ್ಬ ರೈತ

  ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದರೂ ಕೂಡ ಅವರೊಳಗೆ ಒಬ್ಬ ರೈತನಿದ್ದಾನೆ. ಅದಕ್ಕಾಗಿಯೇ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಪ್ರಾಣಿಗಳ ಜೊತೆಗೆ ಸಾವಿರಾರು ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ.

  English summary
  Kannada actor Darshan spoke about farmers. Darshan talks about farmers at "Vasu Naan Pakka commercial" cinema program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X