Just In
Don't Miss!
- Sports
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ, ಸಂಪೂರ್ಣ ಮಾಹಿತಿ
- Automobiles
ಪ್ರೀಮಿಯಂ ಹ್ಯಾಚ್ಬ್ಯಾಕ್ ಸೆಗ್'ಮೆಂಟಿನಲ್ಲಿ ಮುಂದುವರೆದ ಬಲೆನೊ ಕಾರಿನ ಅಧಿಪತ್ಯ
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
1 ವಾರದಲ್ಲಿ 27 ಬಿಲಿಯನ್ ಡಾಲರ್ ಕಳೆದುಕೊಂಡ ಎಲೋನ್ ಮಸ್ಕ್
- News
ಸತೀಶ್ ಜಾರಕಿಹೊಳಿ ಅಂದು ಹೇಳಿದ್ದ ಆ ಒಂದು 'ವಸ್ತು' ಇದೇ ಏನು?
- Lifestyle
ಈ ವಿಚಾರ ಕೇಳಿದ್ರೆ ಮುಂದೆಂದೂ ನೀವು ಪಪ್ಪಾಯ ಬೀಜವನ್ನು ಬಿಸಾಡಲಾರರಿ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವೆನಿಲ್ಲಾ ಚಿತ್ರಕ್ಕೆ ದರ್ಶನ್ ಬೆಂಬಲ ನೀಡಿರುವ ಹಿಂದಿದೆ ಬಿಗ್ ಸೀಕ್ರೆಟ್
ದರ್ಶನ್ ಹೊಸ ಕಲಾವಿದರಿಗೆ ಸಪೋರ್ಟ್ ಮಾಡುತ್ತಾರೆ. ಅವರ ಸಿನಿಮಾಗಳ ಸಮಾರಂಭಕ್ಕೆ ಹೋಗಿ ಚಿತ್ರದ ಆಡಿಯೋ, ಟ್ರೇಲರ್, ಟೀಸರ್ ಗಳನ್ನ ಬಿಡುಗಡೆ ಮಾಡಿಕೊಡುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೆ ದರ್ಶನ್ ನಿರ್ದೇಶಕ ಜಯತೀರ್ಥ ಅವರ ಸಿನಿಮಾಗೆ ಸಪೋರ್ಟ್ ಮಾಡಲು ಕಾರಣವೇನು? ಕಳೆದ ಬಾರಿಯ ಬ್ಯೂಟಿಫುಲ್ ಮನಸ್ಸುಗಳು ಚಿತ್ರದ ಆಡಿಯೋವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಬಿಡುಗಡೆ ಮಾಡಿದ್ದರು. ಈಗ ವೆನ್ನಿಲ್ಲಾ ಚಿತ್ರಕ್ಕೂ ಡಿ ಬಾಸ್ ಕೈ ಜೋಡಿಸಿದ್ದಾರೆ.
ದರ್ಶನ್ ಮನೆಗೆ ಸುಗ್ಗಿ ಹಬ್ಬಕ್ಕೆ ಬಂದ ವಿಶೇಷ ಅತಿಥಿ
ನಿರ್ದೇಶಕ ಜಯತೀರ್ಥ ಅವರ ಚಿತ್ರಗಳಿಗೆ ಬೆಂಬಲವಾಗಿ ದರ್ಶನ್ ನಿಲ್ಲಲು ಕಾರಣ ಆ ಚಿತ್ರದ ಹೀರೋಗಳಂತೆ. ಹೀರೋಗಳು ಹೊಸಬರು ದರ್ಶನ್ ಅವರಿಗೂ ನಾಯಕ ನಟರಿಗೂ ಏನು ಸಂಬಂಧ ಅನ್ನೋ ಪ್ರಶ್ನೆ ಹುಟ್ಟಿದರು ಕೂಡ ಅಸಲಿ ಕಾರಣ ಇದೆ. ಹೊಸ ಹೀರೋಗಳು ಅಂತದ್ದೇನು ಮಾಡುತ್ತಿದ್ದಾರೆ ಅಂತೀರಾ. ಮುಂದೆ ಓದಿ

ಗುರು ದಕ್ಷಿಣೆ ನೀಡುತ್ತಿರುವ ನಟ
ನಟ ದರ್ಶನ್ ಅವರಿಗೆ ರಂಗಭೂಮಿ ಕಲಾವಿದರ ಮೇಲೆ ಅಪಾರವಾದ ಅಭಿಮಾನವಿದೆ. ಇದೇ ಕಾರಣಕ್ಕೆ ನಾಟಕದಿಂದ ಚಿತ್ರರಂಗಕ್ಕೆ ಬರುವ ಕಲಾವಿದರ ಸಹಾಯಕ್ಕಾಗಿ ದರ್ಶನ್ ತಯಾರಾಗಿರುತ್ತಾರೆ.

ದರ್ಶನ್ ನೀನಾಸಂ ನಲ್ಲೇ ಕಲಿತವರು
ಬ್ಯೂಟಿಫುಲ್ ಮನಸ್ಸುಗಳು ನೀನಾಸಂ ಸತೀಶ್ ಅಭಿನಯದ ಚಿತ್ರ. ಸತೀಶ್ ನೀನಾಸಂ ನ ವಿದ್ಯಾರ್ಥಿ, ದರ್ಶನ್ ಕೂಡ ಅಲ್ಲಿಯೇ ಅಭಿನಯವನ್ನು ಕಲಿತು ಬಂದವರು. ಇದೇ ಕಾರಣದಿಂದ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಆಡಿಯೋ ಬಿಡುಗಡೆ ಮಾಡಿಕೊಟ್ಟಿದ್ದರು ಡಿ ಬಾಸ್

ನಟನಾ ಸಂಸ್ಥೆಯಿಂದ ಬಂದ ವೆನಿಲ್ಲಾ ನಾಯಕ
ದರ್ಶನ್ ನೀನಾಸಂ ನಲ್ಲಿ ಮಾತ್ರವಲ್ಲದೆ ಮಂಡ್ಯ ರಮೇಶ್ ಅವರ ಬಳಿಯೂ ಸಾಕಷ್ಟು ವರ್ಷಗಳು ಅಭಿನಯವನ್ನ ಕಲಿತಿದ್ದಾರೆ. ವೆನಿಲ್ಲಾ ಚಿತ್ರದ ನಾಯಕ ಅವಿನಾಶ್ ಕೂಡ ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆಯ ವಿದ್ಯಾರ್ಥಿ. ಆದ್ದರಿಂದ ದರ್ಶನ್ ವೆನಿಲ್ಲಾ ಚಿತ್ರದ ಆಡಿಯೋ ರಿಲೀಸ್ ಮಾಡಿಕೊಟ್ಟಿದ್ದಾರೆ.

ಇಂಪ್ರೆಸಿವ್ ಆಗಿದೆ ವೆನಿಲ್ಲಾ ಟ್ರೇಲರ್
ವೆನಿಲ್ಲಾ ಚಿತ್ರವನ್ನ ಜಯತೀರ್ಥ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅವಿನಾಶ್ ಹಾಗೂ ಸ್ವಾತಿ ಕೊಂಡೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಜಯರಾಜ್ ಚಿತ್ರವನ್ನ ನಿರ್ಮಾಣ ಮಾಡಿದ್ದು ಬಿ ಜೆ ಭರತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಟ್ರೇಲರ್ ಸಿನಿಮಾದ ಬಗ್ಗೆ ನಿರೀಕ್ಷೆಯನ್ನ ಹುಟ್ಟುಹಾಕುತ್ತಿದೆ.