For Quick Alerts
  ALLOW NOTIFICATIONS  
  For Daily Alerts

  ಗೆಳೆಯನ ಮಗುವಿನ ನಾಮಕರಣ ಸಂಭ್ರಮದಲ್ಲಿ ಡಿ ಬಾಸ್ ದರ್ಶನ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ನೇಹಕ್ಕೆ ತುಂಬ ಬೆಲೆ ಕೊಡುತ್ತಾರೆ. ಜೊತೆಗಿರುವ ಸ್ನೇಹಿತರನ್ನು ದರ್ಶನ್ ಯಾವತ್ತು ಬಿಟ್ಟುಕೊಡುವುದಿಲ್ಲ. ಸ್ನೇಹಿತರ ಜೊತೆ ಇದ್ದಾಗ ಸ್ಟಾರ್ ಎನ್ನುವುದನ್ನು ಮರೆತು ಅವರ ಜೊತೆ ಬೆರೆತು ಎಂಜಾಯ್ ಮಾಡುತ್ತಾರೆ. ಸ್ನೇಹಿತರ ಮನೆಯಲ್ಲಿ ಯವುದೆ ಕಾರ್ಯಕ್ರಮ ಇದ್ದರು ದರ್ಶನ್ ಮಿಸ್ ಮಾಡದೆ ಹಾಜರಾಗುತ್ತಾರೆ.

  ಇತ್ತೀಚಿಗೆ ದರ್ಶನ್ ಗೆಳೆಯನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈಗ ಮತ್ತೋರ್ವ ಗೆಳೆಯನ ಮಗುವಿನ ನಾಮಕರಣ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ರಾಬರ್ಟ್ ಚಿತ್ರದ ಬ್ಯುಸಿಯ ನಡುವೆಯೂ ದರ್ಶನ್ ಗೆಳೆಯನ ಮನೆಯ ಸಂಭ್ರಮಕ್ಕೆ ಹಾಜರಾಗಿದ್ದಾರೆ.

  ಗೆಳೆಯ ಮಗುವನ್ನು ಮುದ್ದಾಡಿದ ದರ್ಶನ್

  ಗೆಳೆಯ ಮಗುವನ್ನು ಮುದ್ದಾಡಿದ ದರ್ಶನ್

  ಇಂದು ದರ್ಶನ್ ತನ್ನ ಆತ್ಮೀಯ ಸ್ನೇಹಿತನ ಮಗುವಿನ ನಾಮಕರಣದಲ್ಲಿ ಭಾಗಿಯಾಗಿದ್ದಾರೆ. ಗೆಳೆಯನ ಮಗುವನ್ನು ಎತ್ತಿ ಮುದ್ದಾಡಿದ್ದಾರೆ. ದರ್ಶನ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಂತೆ ಅಭಿಮಾನಿಗಳು ಮತ್ತಿಕೊಂಡಿದ್ದಾರೆ. ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ. ಗೆಳೆಯನ ಮನೆಯ ಸಂಭ್ರಮದಲ್ಲಿ ಭಾಗಿಯಾಗಿ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ದರ್ಶನ್ ಕಾರ್ಯಕ್ರಮದಲ್ಲಿ ಭಾಗಿಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ವರ್ಷದ ಮೊದಲ ಸೆಲ್ಫಿ ಶೇರ್ ಮಾಡಿದ ದರ್ಶನ್

  ವರ್ಷದ ಮೊದಲ ಸೆಲ್ಫಿ ಶೇರ್ ಮಾಡಿದ ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ವರ್ಷದ ಮೊದಲ ಸೆಲ್ಫಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಹಾಗೂ ನಿರ್ಮಾಪಕಿ ಶೈಲಜಾ ನಾಗ್ ಮತ್ತು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸೆಲ್ಫಿಯಲ್ಲಿ ಸೆರೆಯಾಗಿದೆ.

  ಹೊಸ ವರ್ಷಕ್ಕೆ ದರ್ಶನ್, ಯಶ್ ಕುಟುಂಬ ಹಂಚಿಕೊಂಡ ಮೊದಲ ಪೋಟೋಹೊಸ ವರ್ಷಕ್ಕೆ ದರ್ಶನ್, ಯಶ್ ಕುಟುಂಬ ಹಂಚಿಕೊಂಡ ಮೊದಲ ಪೋಟೋ

  ರಾಬರ್ಟ್ ಡಬ್ಬಿಂಗ್ ನಲ್ಲಿ ಡಿ ಬಾಸ್

  ರಾಬರ್ಟ್ ಡಬ್ಬಿಂಗ್ ನಲ್ಲಿ ಡಿ ಬಾಸ್

  ಸದ್ಯ ದರ್ಶನ್ ಬಹುನಿರೀಕ್ಷೆಯ ರಾಬರ್ಟ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ವರ್ಷದ ಪ್ರಯುಕ್ತ ಇಂದಿನಿಂದ ದರ್ಶನ್ ರಾಬರ್ಟ್ ಚಿತ್ರದ ಡಬ್ಬಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಡಬ್ಬಿಂಗ್ ಗೆ ಹಾಜರಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವರ್ಷದ ಮೊದಲ ದಿನವೆ ಡಬ್ಬಿಂಗ್ ಮಾಡಿ ಕಾಯಕವೆ ಕೈಲಾಸ ಎಂದು ಎಂದಿದ್ದಾರೆ.

  ಅರ್ಥಪೂರ್ಣ ಸಂದೇಶದೊಂದಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್ಅರ್ಥಪೂರ್ಣ ಸಂದೇಶದೊಂದಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್

  ಸಮ್ಮರ್ ಗೆ ರಾಬರ್ಟ್ ರಿಲೀಸ್ ಸಾಧ್ಯತೆ

  ಸಮ್ಮರ್ ಗೆ ರಾಬರ್ಟ್ ರಿಲೀಸ್ ಸಾಧ್ಯತೆ

  ಸದ್ಯ ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿರುವ ರಾಬರ್ಟ್ ಚಿತ್ರತಂಡ ಈ ವರ್ಷ ಸಮ್ಮರ್ ಗೆ ಚಿತ್ರವನ್ನು ಬಿಡುಗಡೆ ಮಾಡುವ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ರಾಬರ್ಟ್ ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ನಿರ್ಮಾಪಕ ಉಮಾಪತಿ ಬಂಡವಾಳ ಹೂಡಿದ್ದಾರೆ. ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ.

  English summary
  Kannada actor Darshan visited his fried baby naming ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X