For Quick Alerts
  ALLOW NOTIFICATIONS  
  For Daily Alerts

  ಮಗ ಪ್ರಜ್ವಲ್ ಮದುವೆಗೆ ಅಪ್ಪನ 'ಅದ್ದೂರಿ' ಉಡುಗೊರೆ

  By Harshitha
  |

  ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇಂದು ತಮ್ಮ ಹೃದಯ ಗೆದ್ದ ಗೆಳತಿ ರಾಗಿಣಿ ಚಂದ್ರನ್ ಜೊತೆ ಹಸೆಮಣೆ ಏರಿದ್ದಾರೆ. ಗುರು ಹಿರಿಯರ ಆಶೀರ್ವಾದ ಪಡೆದು ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ.

  ಮಗನ ಪ್ರೀತಿಗೆ ಸಮ್ಮತಿ ಕೊಟ್ಟು ಅದ್ದೂರಿ ಮದುವೆಗೆ ನಾಂದಿ ಹಾಡಿದ ಡೈನಾಮಿಕ್ ಸ್ಟಾರ್ ದೇವರಾಜ್ ತಮ್ಮ ಸುಪುತ್ರ ಪ್ರಜ್ವಲ್ ಗೆ BMW 520D ಸೀರೀಸ್ ಕಾರ್ ನ ಉಡುಗೊರೆಯಾಗಿ ನೀಡಿದ್ದಾರೆ. [ಚಿತ್ರಗಳು : ಪ್ರಜ್ವಲ್ ದೇವರಾಜ್ ಮದುವೆ ತಯಾರಿ ಸಂಭ್ರಮ]

  ಅರ್ಧ ಕೋಟಿ ಬೆಲೆ ಬಾಳುವ ಬಿ.ಎಂ.ಡಬ್ಲ್ಯೂ 520 ಡಿ ಸೀರೀಸ್ ಕಾರ್ ನೋಡಿ ಪ್ರಜ್ವಲ್ ದೇವರಾಜ್ ಫುಲ್ ಖುಷ್ ಆಗಿದ್ದಾರೆ. ಕಾರ್ ಗಾಗಿ ಸ್ಪೆಷಲ್ ಫ್ಲವರ್ ಡೆಕೊರೇಷನ್ ಮಾಡಿಸಲಾಗಿದ್ದು, ಇದೇ ಕಾರ್ ನಲ್ಲಿ ಮದುವೆ ಮಂಟಪಕ್ಕೆ ಪ್ರಜ್ವಲ್ ದೇವರಾಜ್ ಆಗಮಿಸಿದರು. ['ರೀಲ್' ಹೀರೋ ಪ್ರಜ್ವಲ್ ದೇವರಾಜ್ 'ರಿಯಲ್' ಪ್ರೇಮ್ ಕಹಾನಿ]

  ಇಂದು ಬೆಳಗ್ಗೆ 10.30 ರಿಂದ 12 ಗಂಟೆ ವರೆಗೆ ಇದ್ದ ಶುಭ ಧನುರ್ ಲಗ್ನದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ವಿವಾಹವಾದರು. ಸಂಜೆ 7 ಗಂಟೆಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ 'ದಿ ಗ್ರ್ಯಾಂಡ್ ಕೆಸಲ್'ನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

  English summary
  Kannada Actor Devaraj has gifted BMW Car for his son Prajwal Devaraj. Prajwal Devaraj has tied knot with his long-time girlfriend Ragini Chandran today (October 25th) in Palace Grounds, Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X