For Quick Alerts
  ALLOW NOTIFICATIONS  
  For Daily Alerts

  'ಕರ್ವ' ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಗೆ ಏನು ಕೆಲಸ?

  By Harshitha
  |

  ಡೈನಾಮಿಕ್ ಸ್ಟಾರ್ ದೇವರಾಜ್ ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ, ಕೆಲವೇ ಕೆಲವು ವರ್ಷಗಳು ಹಿಂದಕ್ಕೆ ಹೋದ್ರೆ, ನಟ ದೇವರಾಜ್ ಸೈಕೋಪಾತ್ ಪಾತ್ರಗಳಿಗೇ ಫೇಮಸ್ಸು.

  ಈಗ ಈ ಮ್ಯಾಟರ್ ಗೆ ನಾವು ಬರಲು ಕಾರಣ 'ಕರ್ವ' ಸಿನಿಮಾ. '6-5=2' ಚಿತ್ರದ ನಿರ್ಮಾಪಕ ಕೃಷ್ಣಚೈತನ್ಯ ನಿರ್ಮಿಸುತ್ತಿರುವ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವೇ 'ಕರ್ವ'. [ಮೀಟರ್ ಇರುವವರಿಗೆ ಮತ್ತೊಂದು ಕೊಡುಗೆ 'ಕರ್ವ'.!]

  ಈ ಚಿತ್ರದಲ್ಲಿ ನಟ ತಿಲಕ್, ಆರ್.ಜೆ.ರೋಹಿತ್ ಜೊತೆ ನಟ ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. 'ಕರ್ವ' ಚಿತ್ರತಂಡದಿಂದ ಬಿಡುಗಡೆ ಆಗಿರುವ ದೇವರಾಜ್ ರವರ ಫೋಟೋಗಳು ನೋಡ್ತಿದ್ರೆ, ಸಿನಿಮಾದಲ್ಲಿ ಅವರು ಶ್ರೀಮಂತ ಉದ್ಯಮಿ ಅನ್ನೋದು ಕನ್ಫರ್ಮ್.

  ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು, ನಿರ್ದೇಶಕ ನವನೀತ್ ರನ್ನ ಸಂಪರ್ಕಿಸಿದಾಗ, ''ತಿಲಕ್ ತಂದೆ ಪಾತ್ರ ನಿರ್ವಹಿಸುತ್ತಿದ್ದಾರೆ ನಟ ದೇವರಾಜ್'' ಅಂತ ಹೇಳಿದ್ರೇ ಹೊರತು, ಚಿತ್ರಕಥೆಯಲ್ಲಿ ದೇವರಾಜ್ ರವರಿಗೆ ಏನು ಕೆಲಸ ಅನ್ನೋದನ್ನ ಹೇಳ್ಲಿಲ್ಲ. ಕೇಳಿದ್ರೇ, ''ಅದೇ ಸಸ್ಪೆನ್ಸ್'' ಎನ್ನುತ್ತಾರೆ. [ಬರೋಬ್ಬರಿ 83 ಕಥೆ ರಿಜೆಕ್ಟ್ ಮಾಡಿದ ಆ ಖ್ಯಾತ ನಿರ್ಮಾಪಕ ಯಾರು?]

  ಹಾಗಾದ್ರೆ, ಇಡೀ ಚಿತ್ರಕ್ಕೆ ಟ್ವಿಸ್ಟ್ ಕೊಡುವ ಪಾತ್ರದಲ್ಲಿ ನಟ ದೇವರಾಜ್ ಕಾಣಿಸಿಕೊಳ್ಳುತ್ತಿದ್ದಾರಾ? ಇಲ್ಲಾ, ಮರಳಿ ಸೈಕೋಪಾತ್ ಪಾತ್ರಕ್ಕೆ ನಟ ದೇವರಾಜ್ ಬಣ್ಣ ಹಚ್ಚಿದ್ದಾರಾ?

  ಈ ಪ್ರಶ್ನೆಗಳಿಗೆ ಉತ್ತರ ಸಿಗ್ಬೇಕು ಅಂದ್ರೆ, ಈ ತಿಂಗಳ ಅಂತ್ಯದವರೆಗೂ ಕಾಯಲೇಬೇಕು. ಯಾಕಂದ್ರೆ, 'ಕರ್ವ' ಬಿಡುಗಡೆ ಆಗುವುದು ಆಗಲೇ.

  English summary
  'Karva', Another horror-thriller film from the makers of '6-5=2'. 'Karva' features Kannada Actor Devaraj in the prominent role. The movie is directed by Navneeth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X