For Quick Alerts
  ALLOW NOTIFICATIONS  
  For Daily Alerts

  'ಡಾಲಿ' ಧನಂಜಯ್ ನಟಿಸುತ್ತಿರುವ 9 ಹೊಸ ಸಿನಿಮಾಗಳು

  |

  ಇಂಜಿನಿಯರಿಂಗ್ ಮುಗಿಸಿ ವೃತ್ತಿಪರ ಕೆಲಸ ಮಾಡಬೇಕಿದ್ದ ಧನಂಜಯ್, ಸಿನಿಮಾ ಇಂಡಸ್ಟ್ರಿ ಪ್ರವೇಶಿಸಿ ಅಭಿಮಾನಿಗಳಿಂದ 'ಡಾಲಿ' ಎಂದು ಕರೆಸಿಕೊಳ್ಳುತ್ತಿದ್ದಾರೆ. 'ಟಗರು' ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದ ಧನಂಜಯ್ ಈಗ ಪ್ಯಾನ್ ಇಂಡಿಯಾ ನಟ. ಕನ್ನಡದಲ್ಲಿ ಮಾತ್ರವಲ್ಲ ಪರಭಾಷೆಗಳಲ್ಲಿಯೂ ಬೇಡಿಕೆ ಹೊಂದಿರುವ ಕಲಾವಿದ. ಧನಂಜಯ್ ಒಬ್ಬ ಅದ್ಭುತ ನಟ ಎನ್ನುವುದು ಹಲವು ಚಿತ್ರಗಳಲ್ಲಿ ಸಾಬೀತಾಗಿದೆ.

  ಬಹಳಷ್ಟು ಜನರಿಗೆ ತಿಳಿಯದ ವಿಚಾರ ಏನಪ್ಪಾ ಅಂದ್ರೆ ಧನಂಜಯ್ ಹಾಡುಗಳನ್ನು ಸಹ ಬರೆದಿದ್ದಾರೆ. ಹರಿಪ್ರಿಯಾ-ಸುಮಲತಾ ನಟಿಸಿದ್ದ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರದಲ್ಲಿ ಧನಂಜಯ್ ಹಾಡೊಂದಕ್ಕೆ ಸಾಹಿತ್ಯ ರಚಿಸಿದ್ದರು. ರಘು ದೀಕ್ಷಿತ್ ಸಂಗೀತ ನಿರ್ದೇಶನದ 'ಆರ್ಕೆಸ್ಟ್ರಾ' ಸಿನಿಮಾದಲ್ಲಿ ಒಂಬತ್ತು ಹಾಡಿಗೆ ಧನಂಜಯ್ ಗೀತೆರಚನೆ ಮಾಡಲಿದ್ದಾರೆ.

  ಅಲ್ಲು ಅರ್ಜುನ್ ಜೊತೆ ಡಾಲಿ ಧನಂಜಯ್ ಸಿನಿಮಾ: ಅವಕಾಶ ಸಿಕ್ಕಿದ್ದು ಹೇಗೆ?ಅಲ್ಲು ಅರ್ಜುನ್ ಜೊತೆ ಡಾಲಿ ಧನಂಜಯ್ ಸಿನಿಮಾ: ಅವಕಾಶ ಸಿಕ್ಕಿದ್ದು ಹೇಗೆ?

  ನಟನೆ, ಗೀತೆ ರಚನೆಯಲ್ಲಿ ಪ್ರತಿಭೆ ಪ್ರದರ್ಶಿಸಿದ ಧನಂಜಯ್ ಈಗ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. 'ಹೆಡ್‌ಬುಷ್' ಚಿತ್ರ ನಿರ್ಮಿಸುತ್ತಿದ್ದಾರೆ. ಜೊತೆಗೆ 'ಬಡವ ರಾಸ್ಕಲ್' ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ. ಈ ನಡುವೆ ಖುದ್ದು ಧನಂಜಯ್ ಅವರೇ ಗಾಯಕರಾಗಿಯೂ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಕಾಡುತ್ತಿದೆ. 'ಬಡವ ರಾಸ್ಕಲ್' ಸಿನಿಮಾದಲ್ಲಿ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಹೀಗೆ, ಸಕಲಕಲಾವಲ್ಲಭನಂತೆ ಮಿಂಚುತ್ತಿರುವ ಧನಂಜಯ್ ಸುಮಾರು 9 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಯಾವುದು ಆ ಸಿನಿಮಾಗಳು? ಮುಂದೆ ಓದಿ...

  ಅಲ್ಲು ಅರ್ಜುನ್ ಜೊತೆ 'ಪುಷ್ಪ'

  ಅಲ್ಲು ಅರ್ಜುನ್ ಜೊತೆ 'ಪುಷ್ಪ'

  'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಸಿನಿಮಾದಲ್ಲಿ ಧನಂಜಯ್ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಸುಕುಮಾರ್ ಈ ಚಿತ್ರ ನಿರ್ದೇಶಿಸಿದ್ದು, ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಧನಂಜಯ್ ಇದ್ದರೆ ಎಂಬ ಕಾರಣಕ್ಕಾಗಿ ಕನ್ನಡ ಪ್ರೇಕ್ಷಕರು ಈ ಚಿತ್ರ ಎದುರುನೋಡುತ್ತಿದ್ದಾರೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ ತಿಂಗಳಲ್ಲಿ 'ಪುಷ್ಪ ಭಾಗ-1' ರಿಲೀಸ್ ಆಗುತ್ತಿದೆ.

  'ಸಲಗ' ಚಿತ್ರದಲ್ಲಿ ಪೊಲೀಸ್

  'ಸಲಗ' ಚಿತ್ರದಲ್ಲಿ ಪೊಲೀಸ್

  ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶಿಸಿರುವ 'ಸಲಗ' ಚಿತ್ರದಲ್ಲಿ ಧನಂಜಯ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ತೆರೆಮೇಲೆ ದುನಿಯಾ ವಿಜಯ್ ವರ್ಸಸ್ ಧನಂಜಯ್ ಕಾಂಬಿನೇಷನ್ ನೋಡಲು ಕನ್ನಡ ಪ್ರೇಕ್ಷಕರು ಕಾದು ಕುಂತಿದ್ದಾರೆ. ಆಗಸ್ಟ್ 20 ರಂದು ಸಿನಿಮಾ ಚಿತ್ರಮಂದಿರಕ್ಕೆ ಬರಲಿದೆ.

  ನಟ ಧನಂಜಯ್ ಹೆಸರಲ್ಲಿ ಮೋಸಕ್ಕೆ ಯತ್ನ: ಎಚ್ಚರವಾಗಿರಿ ಎಂದ ನಟನಟ ಧನಂಜಯ್ ಹೆಸರಲ್ಲಿ ಮೋಸಕ್ಕೆ ಯತ್ನ: ಎಚ್ಚರವಾಗಿರಿ ಎಂದ ನಟ

  ರತ್ನನ್ ಪ್ರಪಂಚ

  ರತ್ನನ್ ಪ್ರಪಂಚ

  ರೋಹಿತ್ ಪದಕಿ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ರತ್ನನ್ ಪ್ರಪಂಚ' ಚಿತ್ರದಲ್ಲಿ ಧನಂಜಯ್ ನಾಯಕನಟನಾಗಿ ಅಭಿನಯಿಸಿದ್ದಾರೆ. 'ಪ್ರೀಮಿಯರ್ ಪದ್ಮಿನಿ' ಖ್ಯಾತಿಯ ನಟ ಪ್ರಮೋದ್ ಸಹ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್, ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ಒದಗಿಸಿದ್ದಾರೆ.

  ಜೈರಾಜ್ ಕಥೆ 'ಹೆಡ್ ಬುಷ್'

  ಜೈರಾಜ್ ಕಥೆ 'ಹೆಡ್ ಬುಷ್'

  ಮಾಜಿ ಅಂಡರ್‌ವರ್ಲ್ಡ್ ಜೈರಾಜ್ ಅವರ ಜೀವನ ಆಧರಿಸಿ ತಯಾರಾಗುತ್ತಿರುವ ಬಯೋಪಿಕ್ ಸಿನಿಮಾ 'ಹೆಡ್‌ಬುಷ್'. ಅಗ್ನಿಶ್ರೀಧರ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟನೆಯ ಜೊತೆಗೆ ನಿರ್ಮಾಣದಲ್ಲಿಯೂ ಧನಂಜಯ್ ಕೈ ಜೋಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ.

  ಶಿವಣ್ಣನ ಚಿತ್ರ 'ಬೈರಾಗಿ'

  ಶಿವಣ್ಣನ ಚಿತ್ರ 'ಬೈರಾಗಿ'

  ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಶಿವರಾಜ್ ಕುಮಾರ್ 'ಭೈರಾಗಿ'ಯಲ್ಲೂ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶಿವಣ್ಣನ 123ನೇ ಸಿನಿಮಾ ಇದಾಗಿದೆ. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳು ನಟಿ ಅಂಜಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  ಬಡವ ರಾಸ್ಕಲ್

  ಬಡವ ರಾಸ್ಕಲ್

  ಡಾಲಿ ಧನಂಜಯ್ ನಟಿಸಿ, ನಿರ್ಮಾಣ ಮಾಡುತ್ತಿರುವ ಮತ್ತೊಂದು ಸಿನಿಮಾ 'ಬಡವ ರಾಸ್ಕಲ್'. ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗುತ್ತಿದೆ. ಸೆಪ್ಟೆಂಬರ್ 24 ರಂದು ಈ ಚಿತ್ರ ರಿಲೀಸ್ ಆಗಲಿದೆ. ಶಂಕರ್ ಗುರು ಈ ಚಿತ್ರ ನಿರ್ದೇಶನ ಮಾಡಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಜಗ್ಗೇಶ್ 'ತೋತಾಪುರಿ'

  ಜಗ್ಗೇಶ್ 'ತೋತಾಪುರಿ'

  ನೀರ್‌ದೋಸೆ ನಿರ್ದೇಶಕ ವಿಜಯ್ ಪ್ರಸಾದ್ ಡೈರೆಕ್ಟ್ ಮಾಡಿರುವ ಚಿತ್ರ 'ತೋತಾಪುರಿ'. ಜಗ್ಗೇಶ್ ನಾಯಕನಾಗಿ ಅಭಿಯಿಸಿರುವ ಈ ಚಿತ್ರದಲ್ಲಿ ಧನಂಜಯ್ ಸಹ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರವೂ ಶೀಘ್ರದಲ್ಲಿ ಥಿಯೇಟರ್‌ಗೆ ಬರಲಿದೆ.

  'ಡಾಲಿ' ಹೆಸರಿನಲ್ಲಿ ಸಿನಿಮಾ

  'ಡಾಲಿ' ಹೆಸರಿನಲ್ಲಿ ಸಿನಿಮಾ

  ಟಗರು ಸಿನಿಮಾದಲ್ಲಿ ಡಾಲಿ ಪಾತ್ರ ದೊಡ್ಡ ಹಿಟ್ ಆಗಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರವೂ ತಯಾರಾಗುತ್ತಿದೆ. ಯೋಗೇಶ್ ನಾರಾಯಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಆರ್ಕೆಸ್ಟ್ರಾ ಮೈಸೂರು

  ಆರ್ಕೆಸ್ಟ್ರಾ ಮೈಸೂರು

  ಇಷ್ಟು ಸಿನಿಮಾಗಳ ಜೊತೆ 'ಆರ್ಕೆಸ್ಟ್ರಾ ಮೈಸೂರು' ಎನ್ನುವ ಚಿತ್ರದಲ್ಲೂ ಧನಂಜಯ್ ನಟಿಸುತ್ತಿದ್ದಾರೆ. ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಧನಂಜಯ್ ಒಂಬತ್ತು ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಸುನೀಲ್ ಮೈಸೂರು ನಿರ್ದೇಶಿಸಿರುವ ಈ ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರ ಹಾಗೂ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Kannada Actor Dhananjay starrer 9 Movies ready to Release in Coming days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X