Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಧನಂಜಯ್ ಅಜ್ಜಿಯ ಕೋರಿಕೆಯನ್ನು ಈಡೇರಿಸಿದ ರಾಜ್ ಕುಮಾರ್!
Recommended Video

ನಟ ಧನಂಜಯ್ ಇಂದು ದೊಡ್ಡ ಸ್ಟಾರ್ ಆಗಿದ್ದಾರೆ. 'ಟಗರು' ಎಂಬ ಒಂದು ಸಿನಿಮಾ, 'ಡಾಲಿ' ಎಂಬ ಒಂದು ಪಾತ್ರ ಅವರನ್ನು ಎತ್ತರಕ್ಕೆ ಕರೆದುಕೊಂಡು ಹೋಗಿದೆ. ಈ ಚಿತ್ರದ ನಂತರ ಅವರ ಲೆವೆಲ್ ಬದಲಾಗಿದೆ. ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ಚಿತ್ರರಂಗಕ್ಕೆ ಡಾಲಿ ಜಿಗಿದಿದ್ದಾರೆ.
ಆದರೆ, ಧನಂಜಯ್ ಅವರ ಈ ಎಲ್ಲ ಯಶಸ್ಸಿನ ಹಿಂದೆ ಒಂದು ಕುತೂಹಲಕಾರಿ ಸಂಗತಿ ಅಡಗಿದೆ. ಅದನ್ನು ಇತ್ತೀಚಿಗಷ್ಟೆ ಧನಂಜಯ್ ಹಂಚಿಕೊಂಡಿದ್ದಾರೆ. 'ಟಗರು' ಚಿತ್ರದ ಶತಕ ಸಂಭ್ರಮದಲ್ಲಿ ಮಾತನಾಡಿದ ಅವರು ತಮ್ಮ ಅಜ್ಜಿ ಹೇಳಿದ ಒಂದು ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಆ ಕಥೆ ಹೇಳಿದರೆ ರಾಜ್ ಆಶೀರ್ವಾದ ಧನಂಜಯ್ ಮೇಲೆ ಇದೆ ಅನಿಸುತ್ತದೆ. ಮುಂದೆ ಓದಿ...

ಧನಂಜಯ್ ಕುಟುಂಬದವರು ಅಣ್ಣಾವ್ರ ಅಭಿಮಾನಿಗಳು
ನಟ ಧನಂಜಯ್ ಅವರ ಇಡೀ ಕುಟುಂಬ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳು. ಅವರ ಮನೆಯ ಪ್ರತಿಯೊಬ್ಬರಿಗೂ ರಾಜ್ ಕುಮಾರ್ ಕಂಡರೆ ಬಲು ಇಷ್ಟ. ಧನಂಜಯ್ ಕೂಡ ರಾಜ್ ಸಿನಿಮಾಗಳನ್ನು ನೋಡಿ ಬೆಳೆದವರು. ಅದರಲ್ಲಿಯೂ ಧನಂಜಯ್ ಅವರ ಅಜ್ಜಿ ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ ಆಗಿದ್ದರಂತೆ.

ಬೆಂಗಳೂರಿಗೆ ಬಂದಿದ್ದ ಡಾಲಿ ಅಜ್ಜಿ
ಆರು ವರ್ಷದ ಹಿಂದೆ ಹೀಗೆ ಒಮ್ಮೆ ಧನಂಜಯ್ ಅವರ ಅಜ್ಜಿ ಬೆಂಗಳೂರಿಗೆ ಬಂದಿದ್ದರಂತೆ. ಆಸ್ಪತ್ರೆಯಲ್ಲಿ ಸಣ್ಣ ಚಿಕಿತ್ಸೆಗಾಗಿ ಬಂದಿದ್ದ ಅವರು ಹೇಗೋ ಬೆಂಗಳೂರಿಗೆ ಬಂದಿದ್ದೇನೆ ರಾಜ್ ಕುಮಾರ್ ಅವರ ಮನೆಗೆ ಹೋಗಬೇಕು ಎಂದು ತೀರ್ಮಾನ ಮಾಡಿದರಂತೆ. ಆದರೆ, ಅದೇ ದಿನ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆ ಇದೆ ಎಂದು ತಿಳಿದ ಅವರು ರಾಜ್ ಸ್ಮಾರಕದ ಬಳಿ ಹೋದರಂತೆ.
ಡಾಲಿಯ
'ಭೈರವ'
ಲುಕ್
ಗೆ
ಥ್ರಿಲ್
ಆದ
ಸುದೀಪ್
ಹೇಳಿದ್ದೇನು.?

ಮೊಮ್ಮಗನಿಗಾಗಿ ಪ್ರಾರ್ಥನೆ
ಕಂಠೀರವ ಸ್ಟೂಡಿಯೊದಲ್ಲಿರುವ ರಾಜ್ ಸ್ಮಾರಕಕ್ಕೆ ಬಂದ ಧನಂಜಯ್ ಅಜ್ಜಿ ನೂರಾರು ಜನರನ್ನು ನೋಡಿ ಬೆರಗಾಗಿ ನಿಂತಿದ್ದರಂತೆ. ಜನರ ನಡುವೆ ಹಿಂದೆ ನಿಂತಿದ್ದ ಅಜ್ಜಿಯನ್ನು ಅಲ್ಲೆ ಇದ್ದವರು ಕರೆದು ರಾಜ್ ಕುಮಾರ್ ಸಮಾಧಿಗೆ ನಮಸ್ಕಾರ ಮಾಡಲು ಸಹಾಯ ಮಾಡಿದರಂತೆ. ರಾಜ್ ಕುಮಾರ್ ಗೆ ನಮಿಸಿದ ಅಜ್ಜಿ ''ನನ್ನ ಮೊಮ್ಮಗ ಧನಂಜಯ ಸಿನಿಮಾ ಬಗ್ಗೆ ಕನಸು ಇಟ್ಟುಕೊಂಡಿದ್ದಾನೆ. ಅವನು ಕೂಡ ನಿಮ್ಮ ರೀತಿ ಸಿನಿಮಾ ನಟನಾಗಬೇಕು'' ಎಂದು ಪ್ರಾರ್ಥನೆ ಮಾಡಿ ಬಂದರಂತೆ.

ಅಜ್ಜಿಯ ಪ್ರಾರ್ಥನೆ ಪಲಿಸಿತು
ಈ ರೀತಿ ರಾಜ್ ಕುಮಾರ್ ಬಳಿ ಪ್ರಾರ್ಥನೆ ಮಾಡಿದ್ದ ಅಜ್ಜಿಯ ಆಸೆ ಈಗ ಈಡೇರಿದೆ. ನಟ ಧನಂಜಯ್ ಇಂದು ದೊಡ್ಡ ನಟನಾಗಿದ್ದಾರೆ. ಜೊತೆಗೆ ದೊಡ್ಮೆನೆಯ ದೊಡ್ಡ ಮಗ ಶಿವಣ್ಣನ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. 'ಟಗರು' ಸಿನಿಮಾ ಧನಂಜಯಗೆ ದೊಡ್ಡ ಹೆಸರು ತಂದು ಕೊಟ್ಟಿದೆ.