»   » ಬೆಂಗಳೂರಿನಲ್ಲಿ ಐಶ್ವರ್ಯ ಕೈ ಹಿಡಿದ ನಟ ಧರ್ಮ

ಬೆಂಗಳೂರಿನಲ್ಲಿ ಐಶ್ವರ್ಯ ಕೈ ಹಿಡಿದ ನಟ ಧರ್ಮ

Posted By:
Subscribe to Filmibeat Kannada
ಸರಿಸುಮಾರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಳನ್ನು ಪೋಷಿಸಿರುವ ನಟ ಧರ್ಮ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಖಳನಟನಾಗಿ, ಪೊಲೀಸ್ ಪಾತ್ರಗಳಿಗೆ ಜೀವತುಂಬುತ್ತಿದ್ದ ಧರ್ಮ ಅವರ ಮದುವೆ ಐಶ್ವರ್ಯ ಅವರೊಂದಿಗೆ ನಡೆಯಿತು. ಧರ್ಮ ಅವರು ರೆಬೆಲ್ ಸ್ಟಾರ್ ಅಂಬರೀಷ್ ಅವರ ಸಂಬಂಧಿಯೂ ಹೌದು.

ಬೆಂಗಳೂರು ಬಸವೇಶ್ವರನಗರದಲ್ಲಿರುವ ಗಂಗಮ್ಮ ತಿಮ್ಮಯ್ಯ ಕಲ್ಯಾಣಮಂಟದಲ್ಲಿ ಧರ್ಮ ಅವರ ಮದುವೆ ನೆರವೇರಿತು. ಚಿತ್ರರಂಗದ ಹಲವು ಗಣ್ಯರು ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಮದುವೆ ನೆರವೇರಿತು. ನಟಿ ಭಾವನಾ, ಹಿರಿಯ ನಟ ರಾಜೇಶ್ ಸೇರಿದಂತೆ ಸಾ.ರಾ.ಗೋವಿಂದು, ಭಾ.ಮಾ.ಹರೀಶ್, ಬಿ.ಆರ್.ಕೇಶವ ಮುಂತಾದವರು ಮದುವೆಗೆ ಸಾಕ್ಷಿಯಾದರು.

ಸುದೀಪ್ ಮುಖ್ಯಭೂಮಿಕೆಯಲ್ಲಿರುವ 'ಹುಚ್ಚ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಧರ್ಮ ಬಳಿಕ 'ಆ ದಿನಗಳು', 'ಸ್ಲಂ ಬಾಲ', 'ಮಂಡ್ಯ', 'ಮನೆ ಮಗಳು', 'ವೀರ ಮದಕರಿ' ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಧರ್ಮ ಹೆಸರು ನಟಿ ಯಜ್ಞಾಶೆಟ್ಟಿ ಜೊತೆಗೆ ಕೇಳಿಬಂದಿತ್ತು. (ಏಜೆನ್ಸೀಸ್)

English summary
Kannada films supporting actor Dharma tied the knot with Aishwarya in Bangalore. The made debut in Kannada from 'Huchcha'. He acted in films like Aa Dinagalu, Slum Bala, Mandya, Mane Magalu.
Please Wait while comments are loading...