»   » 'ಸ್ನೇಹಾಂಜಲಿ' ನಟ ಧ್ರುವ್ ಶರ್ಮ ನಿಧನ

'ಸ್ನೇಹಾಂಜಲಿ' ನಟ ಧ್ರುವ್ ಶರ್ಮ ನಿಧನ

Posted By:
Subscribe to Filmibeat Kannada

ಕಿವಿ ಕೇಳದೆ ಇದ್ದರೂ, ಮಾತು ಬಾರದೆ ಇದ್ದರೂ... ಎಲ್ಲರಂತೆ ನಟನೆ ಮಾಡಿ ಭೇಷ್ ಎನಿಸಿಕೊಂಡಿದ್ದ ಬಹುಮುಖ ಪ್ರತಿಭೆ ಧ್ರುವ್ ಶರ್ಮ ಕೊನೆಯುಸಿರೆಳೆದಿದ್ದಾರೆ.

ಬಹು ಅಂಗಾಗ ವೈಫಲ್ಯದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಟ ಧ್ರುವ್ ಶರ್ಮ ಮೃತಪಟ್ಟಿದ್ದಾರೆ.

kannada-actor-dhruv-sharma-is-no-more

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಧ್ರುವ್ ಶರ್ಮ ಬಿಸಿನೆಸ್ ಮೆನ್ ಹಾಗೂ ನಟ ಸುರೇಶ್ ಶರ್ಮ ರವರ ಪುತ್ರ. ಅಪ್ಪನಂತೆ ನಟನೆಯಲ್ಲಿ ಆಸಕ್ತಿ ತೋರಿದ ಧ್ರುವ್ ಶರ್ಮ, 'ಸ್ನೇಹಾಂಜಲಿ', 'ತಿಪ್ಪಜ್ಜಿ ಸರ್ಕಲ್' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು.

ಕಿವುಡು ಹಾಗೂ ಮೂಗ ಸಮಸ್ಯೆ ಇದ್ದರೂ, ಲಿಪ್ ಸಿಂಕ್ ಮೂಲಕ ಅಭಿನಯಿಸುತ್ತಿದ್ದರು ಧ್ರುವ್ ಶರ್ಮ. ಸಿನಿಮಾಗಳಲ್ಲಿ ಧ್ರುವ್ ಶರ್ಮ ರವರ ಅಭಿನಯ ಕಂಡು ಚಿತ್ರರಂಗದ ಗಣ್ಯಾತಿಗಣ್ಯರೇ ನಿಬ್ಬೆರಗಾಗಿದ್ದರು.

ನಟನೆ ಜೊತೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲೂ ತನ್ನದೇ ಛಾಪು ಮೂಡಿಸಿದ್ದ ಧ್ರುವ್ ಶರ್ಮ ಇಂದು ಮುಂಜಾನೆ ಹಠಾತ್ ನಿಧನರಾಗಿದ್ದಾರೆ.

ಧ್ರುವ್ ಶರ್ಮ ರವರ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.

Kannada Actor Dhruv Sharma No More | Filmibeat Kannada
English summary
Kannada Actor Dhruv Sharma is no more
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada