»   » ಚಿರು ಸರ್ಜಾ 'ಆಕೆ' ಬಗ್ಗೆ ಧ್ರುವ ಸರ್ಜಾ ಏನಂದ್ರು?

ಚಿರು ಸರ್ಜಾ 'ಆಕೆ' ಬಗ್ಗೆ ಧ್ರುವ ಸರ್ಜಾ ಏನಂದ್ರು?

Posted By:
Subscribe to Filmibeat Kannada

ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ 'ಆಕೆ' ಚಿತ್ರದ ಬಗ್ಗೆ ಚಿರು ಸಹೋದರ ಧ್ರುವ ಸರ್ಜಾ ಮಾತನಾಡಿದ್ದಾರೆ. ಈಗಾಗಲೇ ದರ್ಶನ್, ಸುದೀಪ್, ರಮ್ಯಾ, ಪುನೀತ್ ರಾಜ್ ಕುಮಾರ್, ಜಗ್ಗೇಶ್, ಸೇರಿದಂತೆ ಹಲವರು 'ಆಕೆ' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ನಾಳೆ (ಜೂನ್ 30) ರಾಜ್ಯಾದ್ಯಂತ 'ಆಕೆ' ಚಿತ್ರ ತೆರೆಕಾಣುತ್ತಿದ್ದು, ಅಣ್ಣನ ಸಿನಿಮಾಗೆ ತಮ್ಮ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಅಷ್ಟೇ ಅಲ್ಲದೇ, 'ಆಕೆ' ಟ್ರೈಲರ್ ನೋಡಿ ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

'ಆಕೆ' ಚಿತ್ರಕ್ಕೆ ಗುಡ್ ಲಕ್ ಎಂದು ವಿಶ್ ಮಾಡಿದ ಅಂಬರೀಶ್

Kannada Actor Dhruva Sarja Appreciates 'Aake' Trailer

''ಆಕೆ' ಟ್ರೈಲರ್ ಭರವಸೆಯಿಂದ ಕೂಡಿದೆ. ಕೆ.ಎಂ ಚೈತನ್ಯ ಅವರು ನಿರ್ದೇಶನ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಇದೊಂದು ಅದ್ಭುತ ಚಿತ್ರವಾಗಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ನಟಿ ಶರ್ಮಿಳಾ ಮಾಂಡ್ರೆ ಅವರಿಗೆ ಮತ್ತು ನನ್ನ ಅಣ್ಣ ಚಿರು ಸರ್ಜಾ ಅವರಿಗೆ ನನ್ನ ಕಡೆಯಿಂದ ಆಲ್ ದಿ ಬೆಸ್ಟ್'' ಎಂದಿದ್ದಾರೆ.

'ಆಕೆ' ಟ್ರೈಲರ್ ಗೆ ನವರಸ ನಾಯಕ ಜಗ್ಗೇಶ್ ಪ್ರಶಂಸೆ

ಇನ್ನು ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಆಕೆ' ಮಿಸ್ಟರಿ, ಸಸ್ಪೆನ್ಸ್ ಮತ್ತು ಹಾರರ್ ಚಿತ್ರವಾಗಿದೆ. ಕೆ.ಎಂ ಚೈತನ್ಯ ಆಕ್ಷನ್ ಕಟ್ ಹೇಳಿದ್ದು, 'ಇರೋಸ್ ಇಂಟರ್ ನ್ಯಾಷನಲ್' ಕೆ.ಎಸ್ ಡ್ರೀಮ್ಸ್ ಹಾಗೂ ನಕ್ಷತ್ರ ಸಂಸ್ಥೆ ಜೊತೆ ಜಂಟಿ ನಿರ್ಮಾಣ ಮಾಡಿದೆ. ವಿಶೇಷ ಅಂದ್ರೆ ಹಾಲಿವುಡ್ ತಂತ್ರಜ್ಞರು ಈ ಚಿತ್ರದ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಿದ್ದಾರೆ.

'ಆಕೆ'ಯ ಥ್ರಿಲ್ಲಿಂಗ್ ಟ್ರೈಲರ್ ನೋಡಿ ಥ್ರಿಲ್ ಆದ ಪವರ್ ಸ್ಟಾರ್

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
Kannada Actor Dhruva Sarja Appreciate to Kannada Movie 'Aake' trailer. The Movie Directed by KM Chaithanya.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada