For Quick Alerts
  ALLOW NOTIFICATIONS  
  For Daily Alerts

  'ಭರ್ಜರಿ'ಗಾಗಿ 25 ಕೆಜಿ ತೂಕ ಕಳೆದುಕೊಂಡ ಧ್ರುವ ಸರ್ಜಾ

  By Suneetha
  |

  'ಅದ್ಧೂರಿ', 'ಬಹದ್ದೂರ್' ಸಿನಿಮಾಗಳನ್ನು ಮಾಡಿ ಸ್ಯಾಂಡಲ್ ವುಡ್ ನಲ್ಲಿ ಹಿಟ್ ಹೀರೋ ಎನಿಸಿಕೊಂಡ ನಟ ಧ್ರುವ ಸರ್ಜಾ ಅವರು ಇದೀಗ 'ಭರ್ಜರಿ' ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

  'ಬಹದ್ದೂರ್' ಚಿತ್ರಕ್ಕೆ ಅಕ್ಷನ್-ಕಟ್ ಹೇಳಿದ್ದ ನಿರ್ದೇಶಕ ಚೇತನ್ ಕುಮಾರ್ ಅವರು ನಿರ್ದೇಶನ ಮಾಡುತ್ತಿರುವ 'ಭರ್ಜರಿ' ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಫಸ್ಟ್ ಶೆಡ್ಯೂಲ್ ನ ಶೂಟಿಂಗ್ ಈಗಾಗಲೇ ಮುಗಿದು, ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಫೆಬ್ರವರಿ 1 ರಿಂದ ಆರಂಭವಾಗಿದೆ.

  ನಿಂತೇ ಹೋಗಿತ್ತು ಎನ್ನಲಾಗಿದ್ದ 'ಭರ್ಜರಿ' ಸಿನಿಮಾದ ಶೂಟಿಂಗ್ ಮತ್ತೆ ಟೇಕಾಫ್ ಆಗಿ ಇದೀಗ ಭರ ಭರನೇ ನಡೆಯುತ್ತಿದೆ. ಚಿತ್ರದಲ್ಲಿ ಧ್ರುವ ಅವರಿಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕಾಣಿಸಿಕೊಂಡಿದ್ದಾರೆ.[ಚಿತ್ರಗಳು: 'ಭರ್ಜರಿ' ಸೆಟ್ ನಲ್ಲಿ, 'ಭರ್ಜರಿ' ಶೂಟಿಂಗ್ ಶುರುವಾಯ್ತು ನೋಡಿ..!]

  ಅಂದಹಾಗೆ ನಟ ಧ್ರುವ ಸರ್ಜಾ ಅವರು ಈ ಚಿತ್ರಕ್ಕಾಗಿ ಸುಮಾರು 25 ಕೆ.ಜಿ ತೂಕ ಕಳೆದುಕೊಂಡು ತೆಳ್ಳಗಾಗಿದ್ದಾರೆ. ಚಿತ್ರದಲ್ಲಿ ಧ್ರುವ ಅವರು 20 ರಿಂದ 21 ವರ್ಷ ವಯಸ್ಸಿನ ಹುಡುಗನ ಪಾತ್ರದಲ್ಲಿ ಮಿಂಚಲಿರುವುದರಿಂದ 25 ಕೆಜಿ ತೂಕ ಇಳಿಸಿಕೊಂಡಿದ್ದಾರೆ.[ಧ್ರುವ ಸರ್ಜಾ 'ಭರ್ಜರಿ' ಚಿತ್ರದ ಶೂಟಿಂಗ್ ಡೇಟ್ ಫಿಕ್ಸ್]

  ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿದಿದ್ದು, ನಟಿ ತಾರಾ ಮತ್ತು ಧ್ರುವ ಅವರ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದೆ. 'ಭರ್ಜರಿ' ಶೂಟಿಂಗ್ ಸೆಟ್ ನಲ್ಲಿ ಚಿತ್ರತಂಡದ ಮೋಜು-ಮಸ್ತಿ ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...

  ನಟ ಧ್ರುವ ಸರ್ಜಾ

  ನಟ ಧ್ರುವ ಸರ್ಜಾ

  ಜಿಮ್ ಬಾಡಿ ಬೆಳೆಸಿಕೊಂಡು ದಪ್ಪಗಾಗಿದ್ದ ನಟ ಧ್ರುವ ಸರ್ಜಾ ಅವರು 'ಭರ್ಜರಿ' ಚಿತ್ರದ ಸೆಕೆಂಡ್ ಶೆಡ್ಯೂಲ್ ಗಾಗಿ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸೆಕೆಂಡ್ ಶೆಡ್ಯೂಲ್ ನಲ್ಲಿ ಸುಮಾರು 30 ಕೆಜಿ ತೂಕ ಇರುವ ಹುಡುಗನ ಪಾತ್ರದಲ್ಲಿ ಮಿಂಚಲಿರುವುದರಿಂದ ಧ್ರುವ ಅವರು ತೂಕ ಇಳಿಸಿಕೊಳ್ಳುವ ಕಠಿಣ ಸಾಹಸ ಮಾಡಲೇಬೇಕಾಗಿದೆ.[ಹದಿನೆಂಟು ಬಾರಿ ಸ್ಕ್ರಿಪ್ಟ್ ಬದಲಾಯಿಸಿದ ಧ್ರುವ 'ಭರ್ಜರಿ']

  ತಾಳ್ಮೆಯಿಂದ ಕಾಯುತ್ತಿರುವ ನಿರ್ದೇಶಕ

  ತಾಳ್ಮೆಯಿಂದ ಕಾಯುತ್ತಿರುವ ನಿರ್ದೇಶಕ

  ಸದ್ಯಕ್ಕೆ ನಟ ಧ್ರುವ ಅವರು ಕೇವಲ 60 ದಿನಗಳಲ್ಲಿ ಸುಮಾರು 25 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಇವರು ಸಂಪೂರ್ಣ ತೂಕ ಇಳಿಸಿಕೊಂಡು ಶೂಟಿಂಗ್ ಸೆಟ್ ಗೆ ಬರುವವರೆಗೆ ನಿರ್ದೇಶಕ ಚೇತನ್ ಕುಮಾರ್ ಮತ್ತು ಇಡೀ ಚಿತ್ರತಂಡದವರು ತಾಳ್ಮೆಯಿಂದ ಕಾಯುತ್ತಿದ್ದಾರಂತೆ.

  ಸೆಟ್‌ ನಲ್ಲಿ ತಾರಾ

  ಸೆಟ್‌ ನಲ್ಲಿ ತಾರಾ

  ಶೂಟಿಂಗ್ ಸೆಟ್ ನಲ್ಲಿ ನಟಿ ತಾರಾ ಅವರಿಗೆ ದೃಶ್ಯಗಳನ್ನು ವಿವರಿಸುತ್ತಿರುವ ನಿರ್ದೇಶಕ ಚೇತನ್ ಕುಮಾರ್. ಚಿತ್ರದಲ್ಲಿ ಕ್ಯಾಮರಾ ಮೆನ್, ನಿರ್ದೇಶಕರು, ನಟಿ ತಾರಾ ಮತ್ತು ನಿರ್ಮಾಪಕರು.

  ಟಚ್ ಅಪ್

  ಟಚ್ ಅಪ್

  ಮುಂದಿನ ಸೀನ್ ಗೆ ರೆಡಿ ಆಗುತ್ತಿರುವ ನಟಿ ತಾರಾ ಅವರಿಗೆ ಮೇಕಪ್ಪ್ ಮ್ಯಾನ್ ಫೈನಲ್ ಟಚ್ ಅಪ್ ನೀಡಿದರು. ಕೆಂಪು ಬಣ್ಣದ ಜರತಾರಿ ಸೀರೆಯಲ್ಲಿ ತಾರಾ ಅವರು ಕಂಗೊಳಿಸುತ್ತಿದ್ದರು.

  ಆಕ್ಷನ್ ಗೆ ವೈಟಿಂಗ್

  ಆಕ್ಷನ್ ಗೆ ವೈಟಿಂಗ್

  ಮೇಕಪ್ಪ್ ಮಾಡಿಕೊಂಡು ರೆಡಿ ಆಗಿ ನಟಿ ತಾರಾ ಅವರು ನಿರ್ದೇಶಕ ಚೇತನ್ ಕುಮಾರ್ ಅವರು ಆಕ್ಷನ್ ಎಂದು ಹೇಳುವುದಕ್ಕಾಗಿ ಕಾಯುತ್ತಿರುವ ದೃಶ್ಯ.

  ಅಬ್ಬಾ.! ಸುಸ್ತು

  ಅಬ್ಬಾ.! ಸುಸ್ತು

  ಶಾಟ್ ಮುಗಿಸಿ ಸುಸ್ತಾದ ತಾರಾ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಸಮಯ. ಮದುವೆಯ ಕಾರ್ಯಕ್ರಮದ ದೃಶ್ಯವನ್ನು ಶೂಟಿಂಗ್ ಮುಗಿಸಿ ತಾರಾ ಅವರು ಸುಸ್ತಾಗಿ ಫೋನ್ ಕೈಗೆ ತೆಗೆದುಕೊಂಡಿದ್ದು.

  ಚಿತ್ರತಂಡದೊಂದಿಗೆ ಸೆಲ್ಪಿ

  ಚಿತ್ರತಂಡದೊಂದಿಗೆ ಸೆಲ್ಪಿ

  ಶೂಟಿಂಗ್ ಮುಗಿಸಿದ ನಂತರ ಇಡೀ ಚಿತ್ರತಂಡ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಮ ಪಟ್ಟ ಪರಿ ಹೇಗಿದೆ ನೋಡಿ. ಚಿತ್ರದಲ್ಲಿ ತಾರಾ, ಧ್ರುವ ಸರ್ಜಾ, ಟಿವಿ ಸ್ಟಾರ್ ಗಿರಿ ಮತ್ತು 'ಖುಷಿ' ಸೀರಿಯಲ್ ಖ್ಯಾತಿಯ ನಟಿ ಶ್ರುತಿ.

  ಭರ್ಜರಿ ಫ್ಯಾಮಿಲಿ

  ಭರ್ಜರಿ ಫ್ಯಾಮಿಲಿ

  ನಿರ್ದೇಶಕ ಚೇತನ್ ಕುಮಾರ್, ನಟ ಧ್ರುವ ಸರ್ಜಾ, ನಟಿ ರಚಿತಾ ರಾಮ್, ನಟ ಜೈ ಜಗದೀಶ್, ತಾರಾ, ಮತ್ತು ನಟಿ ಶ್ರುತಿ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಹೀಗೆ.

  ಭರ್ಜರಿ ಸೆಲ್ಫಿ

  ಭರ್ಜರಿ ಸೆಲ್ಫಿ

  ಚಿತ್ರದ ನಾಯಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನಾಯಕಿ ರಚಿತಾ ರಾಮ್ ಅವರು ಶೂಟಿಂಗ್ ಸೆಟ್ ನಲ್ಲಿ ಭರ್ಜರಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು. ಚಿತ್ರದಲ್ಲಿ ಧ್ರುವ ಮತ್ತು ರಚಿತಾ ಅವರು ಸೂರ್ಯ ಮತ್ತು ಗೌರಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

  ಪಕ್ಕಾ ಫ್ಯಾಮಿಲಿ ಎಂರ್ಟಟೈನ್ ಮೆಂಟ್

  ಪಕ್ಕಾ ಫ್ಯಾಮಿಲಿ ಎಂರ್ಟಟೈನ್ ಮೆಂಟ್

  ಫ್ಯಾಮಿಲಿಗಾಗಿ ಮಸ್ತ್ ಮನರಂಜನೆ ನೀಡಲಿರುವ 'ಭರ್ಜರಿ' ಸಿನಿಮಾದಲ್ಲಿ ನಟಿ ರಚಿತಾ ರಾಮ್ ಅವರ ಡಿಂಪಲ್ ತುಂಬಾ ಹೈಲೈಟ್ ಅಂತೆ. 'ಚಕ್ರವ್ಯೂಹ' ಚಿತ್ರದ ಶೂಟಿಂಗ್ ಮುಗಿಸಿ 'ಭರ್ಜರಿ' ಸೆಟ್ ನಲ್ಲಿ ಹಾಜರಾಗಿರುವ ನಟಿ ರಚಿತಾ ಅವರು 'ಭರ್ಜರಿ' ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ.

  English summary
  Kannada Movie 'Bharjari' has successfully completely the first schedule and kick-started with the second schedule February 1. But, before that, hero Dhruva should get rid off 25 kgs for his lean look in the second half of the movie. The movie is directed by Bahadhur fame Chethan Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X