»   » 'ಶಾರ್ಪ್ ಶೂಟರ್' ದಿಗಂತ್ ಗೆ ಶುಕ್ರದೆಸೆ ಶುರು

'ಶಾರ್ಪ್ ಶೂಟರ್' ದಿಗಂತ್ ಗೆ ಶುಕ್ರದೆಸೆ ಶುರು

Posted By:
Subscribe to Filmibeat Kannada

'ಬಾಲಿವುಡ್' ಕನಸು ಕಂಡು ಇಲ್ಲಿಂದ ನೇರವಾಗಿ ಮುಂಬೈಗೆ ಹಾರಿದ್ದ ದೂದ್ ಪೇಡ ದಿಗಂತ್ ಗೆ ಕಳೆದ ಎರಡು ವರ್ಷಗಳಿಂದ ಟೈಮ್ ನೆಟ್ಟಗಿರಲಿಲ್ಲ. 'ಬರ್ಫಿ' ಸಿನಿಮಾ ನಂತರ ಬೆಳ್ಳಿತೆರೆ ಮೇಲೆ ಮಾಯವಾಗಿ ಹೋಗಿದ್ದ ದಿಗಂತ್ ಈ ವರ್ಷ ಹಿಂದಿ ಸಿನಿಮಾ 'ವೆಡ್ಡಿಂಗ್ ಪುಲಾವ್' ಮೂಲಕ ಖಾತೆ ತೆರೆದ್ರು.

ಬಾಲಿವುಡ್ ನಲ್ಲಿ 'ವೆಡ್ಡಿಂಗ್ ಪುಲಾವ್' ಸೌಂಡ್ ಮಾಡಿದ ಕಾರಣ ದಿಗಂತ್ ಕೈಗೆ 'ಟಿಕೆಟ್ ಟು ಬಾಲಿವುಡ್' ಸಿನಿಮಾ ಸಿಕ್ಕಿದೆ. ಜೊತೆಗೆ ಸ್ಯಾಂಡಲ್ ವುಡ್ ನಲ್ಲೂ ಡಿಸೆಂಬರ್ ತಿಂಗಳು ಫುಲ್ ದಿಗಂತ್ ಮಯ.

Kannada Actor Diganth's three movies to release in December

ಯಾಕಂದ್ರೆ, ದಿಗಂತ್ ಅಭಿನಯದ 'ಶಾರ್ಪ್ ಶೂಟರ್' ಚಿತ್ರ ಡಿಸೆಂಬರ್ 11 ರಂದು ರಿಲೀಸ್ ಆಗುತ್ತಿದೆ. ಲಾಂಗ್ ಗ್ಯಾಪ್ ನಂತರ ದಿಗಂತ್ ಜೊತೆ ಐಂದ್ರಿತಾ ರೇ ಈ ಚಿತ್ರದಲ್ಲಿ ಹೆಜ್ಜೆ ಹಾಕಿದ್ದಾರೆ. ಚಿತ್ರ ಸಾಹಿತಿ ಗೌಸ್ ಪೀರ್ ಆಕ್ಷನ್ ಕಟ್ ಹೇಳಿದ್ದಾರೆ.['ಬಿಗ್ ಬಾಸ್' ವೇದಿಕೆಯಲ್ಲಿ ದಿಗಂತ್-ಐಂದ್ರಿತಾ 'ಶಾರ್ಪ್ ಶೂಟರ್']

ಇನ್ನೂ ಡಿಸೆಂಬರ್ 4 ರಂದು ದಿಗಂತ್-ಕೃತಿ ಖರಬಂಧ ಅಭಿನಯದ 'ಮಿಂಚಾಗಿ ನೀನು ಬರಲು' ಸಿನಿಮಾ ತೆರೆ ಕಾಣುತ್ತಿದೆ. ಈ ಎರಡು ಚಿತ್ರಗಳ ನಂತರ ಡಿಸೆಂಬರ್ ಕೊನೆಯ ವಾರದ ಹೊತ್ತಿಗೆ ದಿಗಂತ್-ರಾಗಿಣಿ ಅಭಿನಯದ 'ಪರಪಂಚ' ರಿಲೀಸ್ ಆಗುವ ಸಾಧ್ಯತೆ ಇದೆ.

'ಶಾರ್ಪ್ ಶೂಟರ್' ಮತ್ತು 'ಪರಪಂಚ' ಚಿತ್ರಗಳ ಬಗ್ಗೆ ಗಾಂಧಿನಗರದಲ್ಲಿ ಭಾರಿ ನಿರೀಕ್ಷೆ ಇದೆ. ದಿಗಂತ್ ಮರಳಿ ಫಾರ್ಮ್ ಗೆ ಬಂದಿರುವುದರಿಂದ ಹೊಸ ಹೊಸ ಪ್ರಾಜೆಕ್ಟ್ ಗಳಿಗೆ ಸಹಿ ಹಾಕಿದ್ದಾರಂತೆ. ಇನ್ಮೇಲಿಂದನಾದರೂ, ದಿಗ್ಗಿಗೆ ಶುಕ್ರದೆಸೆ ಶುರುವಾಗುತ್ತಾ, ನೋಡೋಣ.

English summary
Kannada Actor Diganth starrer 'Sharp Shooter', 'Minchagi Neenu Baralu' and 'Parapancha' is all set to release in December.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada