For Quick Alerts
  ALLOW NOTIFICATIONS  
  For Daily Alerts

  ಗೂಂಡಗಿರಿ ಪ್ರಕರಣ: ದುನಿಯಾ ವಿಜಯ್ ಬಂಧನ, ಬೇಲ್ ಮೇಲೆ ರಿಲೀಸ್

  By Bharath Kumar
  |

  ನಿರ್ಮಾಪಕ ಸುಂದರ್ ಪಿ ಗೌಡ ಅವರ ಸಂಬಂಧಿಕ ಜಯರಾಮ್ ಅವರ ಮೇಲೆ ದುನಿಯಾ ವಿಜಯ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪದಡಿ ಬಂಧಿಸಲಾಗಿತ್ತು. ಜಯರಾಮ್ ಅವರ ಪತ್ನಿ ಯಶೋಧಮ್ಮ ನೀಡಿದ್ದ ದೂರಿನ ಅನ್ವಯ, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ವಿಜಯ್ ವಿರುದ್ಧ 323, 341, 506, 504 ಸೆಕ್ಷನ್ ಅಡಿ ಕೇಸ್ ದಾಖಲಿಸಿಕೊಂಡಿದ್ದರು.

  ತದ ನಂತರ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯರಾಮ್ ಅವರ ಹೇಳಿಕೆಯನ್ನ ಆಧರಿಸಿ ವಿಜಿ ಅವರನ್ನ ಬಂಧಿಸಲಾಗಿತ್ತು. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಸ್ಟೇಷನ್ ನಲ್ಲಿ ವಿಚಾರಣೆ ನಡೆಸಿದ ಠಾಣಾ ಅಧಿಕಾರಿ ಇನ್ಸ್ ಪೆಕ್ಟರ್ ಸದಾಶಿವಯ್ಯ ಅವರು, ವಿಜಯ್ ಅವರ ಬಳಿ ಹೇಳಿಕೆಯನ್ನ ಪಡೆದು, ಸ್ಟೇಷನ್ ಬೇಲ್ ಆಧಾರದ ಮೇಲೆ ರಿಲೀಸ್ ಮಾಡಿದ್ದಾರೆ.[ಬ್ರೇಕಿಂಗ್ ನ್ಯೂಸ್ : ದುನಿಯಾ ವಿಜಯ್ ವಿರುದ್ಧ 'ಗೂಂಡಾಗಿರಿ' ಆರೋಪ.!?]

  ಸ್ಟೇಷನ್ ಬೇಲ್ ಪಡೆದ ವಿಜಯ್ ಗೆ ಷರತ್ತು ವಿಧಿಸಿ ರಿಲೀಸ್ ಮಾಡಲಾಗಿದೆ. ದುನಿಯಾ ವಿಜಯ್ ಅವರ ಆಪ್ತ ಚಂದ್ರಶೇಖರ್ ಅವರ ವಿಜಯ್ ಗೆ ಶ್ಯೂರಿಟಿ ನೀಡಿದ್ದು, ದೂರುದಾರ ಹಾಗೂ ಸಂಬಂಧಿಕರ ಮೇಲೆ ಒತ್ತಡ ಹೇರಬಾರದು, ಕರೆದಾಗ ಪೊಲೀಸ್ ಸ್ಟೇಷನ್ ಬರಬೇಕು ಎಂದು ಬುದ್ದಿವಾದ ಹೇಳಿ ವಿಜಿ ಅವರನ್ನ ಬಿಡುಗಡೆ ಮಾಡಿದ್ದಾರೆ.[ಗೂಂಡಾಗಿರಿ, ಹಲ್ಲೆ ಆರೋಪ: ನಟ ದುನಿಯಾ ವಿಜಯ್ ಕೊಟ್ಟ ಕ್ಲಾರಿಟಿ]

  Kannada Actor Duniya Vijay Arrested And Release

  ಘಟನೆ ಏನಾಗಿತ್ತು?

  ಅಳಿಯನ (ಶಂಕರ್ ಗೌಡ) ದೌರ್ಜನ್ಯ ಪ್ರಶ್ನಿಸಲು ಇಂದು ಬೆಳಗ್ಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಿಂಭಾಗದಲ್ಲಿ ಇರುವ ನಿವಾಸಕ್ಕೆ ಮಾನಸ ಪೋಷಕರು (ಜಯರಾಮ್, ಯಶೋಧಮ್ಮ) ಬಂದಿದ್ದಾರೆ. ಆಗ ಮಾವ (ಜಯರಾಮ್) ಮತ್ತು ಅಳಿಯ (ಶಂಕರ್ ಗೌಡ) ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶಂಕರ್ ಗೌಡ ಸಹಾಯಕ್ಕೆ ನಟ ದುನಿಯಾ ವಿಜಯ್ ಆಗಮಿಸಿದ್ದಾರೆ. ಮಗಳಿಗೆ (ಮಾನಸ) ಆಗಿರುವ ಅನ್ಯಾಯವನ್ನ ದುನಿಯಾ ವಿಜಯ್ ಮುಂದೆ ಪೋಷಕರು (ಜಯರಾಮ್, ಯಶೋಧಮ್ಮ) ತೋಡಿಕೊಂಡರೂ, ಅದಕ್ಕೆ ಸ್ಪಂದಿಸಿ, ನ್ಯಾಯ ಕೊಡಿಸುವ ಬದಲು ಜಯರಾಮ್ ಮೇಲೆ ದುನಿಯಾ ವಿಜಯ್ ಹಲ್ಲೆ ಮಾಡಿದ್ದಾರೆ ಅಂತ ಯಶೋಧಮ್ಮ ಆರೋಪಿಸಿದ್ದರು.

  English summary
  Kannada Actor Duniya Vijay was arrested by the Chennammanakere Achukattu police and was released after inquiry in an assault case. Vijay gets into another controversy by interfering in Family dispute of 'Maasti Gudi' Producer Sundar.P.Gowda's brother Shankar Gowda and Manasa. Manasa's mother Yashodamma has alleged that Duniya Vijay has assaulted her husband Jayaram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X