For Quick Alerts
  ALLOW NOTIFICATIONS  
  For Daily Alerts

  ಮಧ್ಯರಾತ್ರಿ ಆರಾಧ್ಯ ದೈವನ ಹುಟ್ಟು ಹಬ್ಬ ಆಚರಿಸಿದ ವಿಜಿ 'ಸಲಗ' ಟೀಮ್

  |
  ರಜನಿಕಾಂತ್ ಅವರ ಬಿಗ್ ಫ್ಯಾನ್ ದುನಿಯಾ ವಿಜಯ್ | FILMIBEAT KANNADA

  ಸೂಪರ್ ಸ್ಟಾರ್ ರಜನಿಕಾಂತ್, ಸೂಪರ್ ಸ್ಟಾರ್ ಗಳ ರೋಲ್ ಮಾಡೆಲ್, ಸ್ಟೈಲ್ ಗೆ, ಸರಳತೆಗೆ, ಸ್ಫೂರ್ತಿಗೆ, ಸ್ಟಾರಿಸಂಗೆ ಮತ್ತೊಂದು ಹೆಸ್ರೇ ಸೂಪರ್ ಸ್ಟಾರ್ ತಲೈವರ್ ರಜನಿಕಾಂತ್. ಇಂತಹ ಅದ್ಭುತ ನಟನೊಬ್ಬ ಕನ್ನಡ ನಾಡಲ್ಲಿ ಹುಟ್ಟಿ, ಬೆಳೆದು ಕನ್ನಡಿಗನಾಗಿ ಕಲಾವಿದನಾಗಿ ಜಗತ್ತಿಗೆ ಮಾದರಿಯಾದ, ಜಗತ್ತಿಗೆ ಸೂಪರ್ ಸ್ಟಾರ್ ಆದ ಶಿವಾಜಿ ಗಾಯ್ಕವಾಡ್ ಅಲಿಯಾಸ್ ರಜಿನಿಕಾಂತ್ ಗೆ ಇವತ್ತು ಹುಟ್ಚುಹಬ್ಬದ ಸಂಭ್ರಮ.

  70ನೇ ವಸಂತಕ್ಕೆ ಕಾಲಿಟ್ಟಿರುವ ಈ ಚಿರ ಯುವಕ ಸ್ಟೈಲ್ ಕಿಂಗ್ ರಜನಿಕಾಂತ್ ಹುಟ್ಟುಹಬ್ಬವನ್ನ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಕೇವಲ ತಮಿಳು ನಾಡಿನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಅಭಿಮಾನಿಗಳು ಸೂಪರ್ ಸ್ಟಾರ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ವಿಶೇಷ ಅಂದರೆ ರಜನಿಕಾಂತ್ ಬಿಗ್ ಫ್ಯಾನ್ ದುನಿಯಾ ವಿಜಯ್ ಕೂಡ ತಲೈವಾ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

  10 ದಿನಗಳು ಮುಂಚಿತವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರಜನಿಕಾಂತ್10 ದಿನಗಳು ಮುಂಚಿತವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರಜನಿಕಾಂತ್

  ದುನಿಯಾ ವಿಜಯ್ ಅಭಿನಯದ ಮತ್ತು ನಿರ್ದೇಶನದ ಸಲಗ ಚಿತ್ರತಂಡ ಮಧ್ಯರಾತ್ರಿ ರಜನಿಕಾಂತ್ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಕೆ.ಆರ್ ಮಾರ್ಕೆಟ್ ರಜನಿಕಾಂತ್ ಫ್ಯಾನ್ಸ್ ಅಸೋಸಿಯೇಶನ್ ಜೊತೆಗೆ ಮಿಡ್ ನೈಟ್ ಕೇಕ್ ಕಟ್ ಮಾಡಿ ಸಂತಸಪಟ್ಟಿದ್ದಾರೆ.

  ರಜನಿಕಾಂತ್ ಫ್ಯಾನ್ ದುನಿಯಾ ವಿಜಯ್, ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಸಂಘ ಕೆ.ಆರ್ ಮಾರ್ಕೆಟ್ ಅವ್ರೊಟ್ಟಿಗೆ ಸೇರಿ, ತಮ್ಮ ಚೊಚ್ಚಲ ನಿರ್ದೇಶನದ 'ಸಲಗ' ಚಿತ್ರತಂಡದ ಜೊತೆ ಹುಟ್ಟುಹಬ್ಬ ಆಚರಿಸಿ ಸಂತಸಪಟ್ಟಿದ್ದಾರೆ. ತಲೈವಾ ರಜನಿಕಾಂತ್ ರನ್ನ ಸ್ಫೂರ್ತಿಯನ್ನಾಗಿಸಿಕೊಂಡೇ ಚಿತ್ರರಂಗಕ್ಕೆ ಬಂದವರಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು.

  'ದುನಿಯಾ' ಚಿತ್ರ ಬಂದಾಗ ಸೂಪರ್ ಸ್ಟಾರ್, ವಿಜಿಯವರನ್ನ ಕರೆಸಿಕೊಂಡು ಬೆನ್ನು ತಟ್ಟಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಅಂದ್ರೆ, ಇಂದಿಗೂ ಅದೇ ಅಭಿಮಾನ ಅದೇ ಪ್ರೀತಿಯನ್ನಿಟ್ಟುಕೊಂಡು ಸಾಯೋವರೆಗೂ ಅವ್ರನೇ ನನಗೆ ಸ್ಫೂರ್ತಿ ಎನ್ನುತ್ತಾರೆ ದುನಿಯಾ ವಿಜಯ್. ವಿಜಿ ಸಲಗ ಚಿತ್ರದೊಂದಿಗೆ ಡೈರೆಕ್ಟರ್ ಆಗಿ ಗೆಲ್ಲೋದ್ರೊಂದಿಗೆ, ಹೀರೋ ಆಗಿ ಸ್ಟ್ರಾಂಗ್ ಕಂಬ್ಯಾಕ್ ಮಾಡೋ ಭರವಸೆಯಲ್ಲಿದ್ದಾರೆ.

  ಈಗಾಗ್ಲೇ ಮೇಕಿಂಗ್ ವಿಡಿಯೋ ರಿಲೀಸ್ ಮಾಡೋದಕ್ಕೆ ಎಲ್ಲಾ ತಯಾರಿ ನಡೆಸಿಕೊಂಡಿರೋ 'ಸಲಗ' ಚಿತ್ರತಂಡ ಇದೇ 18ನೇ ತಾರೀಖು ಗ್ರ್ಯಾಂಡ್ ಆಗಿ ಮೇಕಿಂಗ್ ವಿಡಿಯೋನ್ನು ರಿಲೀಸ್ ಮಾಡುತ್ತಿದ್ದಾರೆ. ಕೆ.ಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರದಲ್ಲಿ ದುನಿಯಾ ವಿಜಯ್, ಡಾಲಿ ಧನಂಜಯ ಮುಖಾಮುಖಿಯಾಗಿದ್ದು, ಬಹುತೇಕ ಮೆಗಾ ಹಿಟ್ 'ಟಗರು' ಟೀಮ್ ಈ ಚಿತ್ರದಲ್ಲೂ ಕೆಲಸ ಮಾಡುತ್ತಿರುವುದು ಸಲಗ ಮೇಲೆ ದೊಡ್ಡ ನಿರೀಕ್ಷೆಯನ್ನ ಹುಟ್ಟಿಸಿದೆ.

  English summary
  Kannada actor Duniya Vijay celebrate Super star Rajinikanth birthday. Kannada actor Duniya Vijay very big fan of rajinikanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X