»   » ಬ್ರೇಕಿಂಗ್ ನ್ಯೂಸ್ : ದುನಿಯಾ ವಿಜಯ್ ವಿರುದ್ಧ 'ಗೂಂಡಾಗಿರಿ' ಆರೋಪ.!?

ಬ್ರೇಕಿಂಗ್ ನ್ಯೂಸ್ : ದುನಿಯಾ ವಿಜಯ್ ವಿರುದ್ಧ 'ಗೂಂಡಾಗಿರಿ' ಆರೋಪ.!?

By: ಒನ್ಇಂಡಿಯಾ ಸಿಬ್ಬಂದಿ
Subscribe to Filmibeat Kannada

'ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ' ಎಂಬ ಗಾದೆ ಮಾತಿದೆ. 'ಗಂಡ-ಹಂಡತಿ ಇವತ್ತು ಕಿತ್ತಾಡ್ತಾರೆ, ನಾಳೆ ಒಂದಾಗ್ತಾರೆ ಬಿಡಿ' ಅಂತ ಸುಮ್ಮನಿರದೆ, ಇನ್ನೊಬ್ಬರ ಮನೆ ಗಲಾಟೆ ವಿಚಾರಕ್ಕೆ ನಟ ದುನಿಯಾ ವಿಜಯ್ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ, ನಟ ದುನಿಯಾ ವಿಜಯ್ 'ಗೂಂಡಾಗಿರಿ' ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕ ಸುಂದರ್.ಪಿ.ಗೌಡ ಅಣ್ಣನ ಫ್ಯಾಮಿಲಿ ಮ್ಯಾಟರ್ ಗೆ ಮೂಗು ತೂರಿಸಿ ಸದ್ಯ ದುನಿಯಾ ವಿಜಯ್ ಬಿಗ್ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ.

ಏನಿದು ಫ್ಯಾಮಿಲಿ ಗಲಾಟೆ ಮ್ಯಾಟರ್.?

'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕ ಸುಂದರ್.ಪಿ.ಗೌಡ ಅಣ್ಣ ಶಂಕರ್ ಗೌಡ ಮೂರು ತಿಂಗಳ ಹಿಂದೆ ಮಾನಸ ಎಂಬುವವರನ್ನ ವಿವಾಹವಾಗಿದ್ದರು. ಶಂಕರ್ ಗೌಡ-ಮಾನಸ ನಡುವೆ ಮನಸ್ತಾಪ ಮೂಡಿ ಬಂದ ಹಿನ್ನಲೆ ಇಂದು ಬೆಳಗ್ಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಿಂಭಾಗದಲ್ಲಿ ಇರುವ ಅವರ ನಿವಾಸದಲ್ಲಿ ದೊಡ್ಡ ರಂಪಾಟ ನಡೆದಿದೆ. [ಅರೆಸ್ಟ್ ಆದ್ರಾ ನಟ ದುನಿಯಾ ವಿಜಯ್.? ನಿನ್ನೆ ನಡೆದ ಸತ್ಯ ಸಂಗತಿ ಇದು.!]

ಇನ್ನೊಬ್ಬರ ಮನೆ ಜಗಳಕ್ಕೆ ಕಾಲಿಟ್ಟ ದುನಿಯಾ ವಿಜಯ್.!?

ಮಾನಸ ತಾಯಿ ಯಶೋಧಮ್ಮ 'ಪಬ್ಲಿಕ್ ಟಿವಿ'ಗೆ ನೀಡಿರುವ ಹೇಳಿಕೆ ಪ್ರಕಾರ, ಕಳೆದ ಮೂರು ತಿಂಗಳಿನಿಂದಲೂ, ತಮ್ಮ ಪುತ್ರಿ ಮಾನಸಗೆ ಶಂಕರ್ ಗೌಡ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು. [ನಿರ್ಮಾಪಕ ಸುಂದರ್.ಪಿ.ಗೌಡ ಅಮಾಯಕ ಎಂದ ನಟ ದುನಿಯಾ ವಿಜಯ್.!]

ಇಂದು ಏನಾಯ್ತು.?

ಅಳಿಯ (ಶಂಕರ್ ಗೌಡ) ದೌರ್ಜನ್ಯ ಪ್ರಶ್ನಿಸಲು ಇಂದು ಬೆಳಗ್ಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಿಂಭಾಗದಲ್ಲಿ ಇರುವ ನಿವಾಸಕ್ಕೆ ಮಾನಸ ಪೋಷಕರು (ಜಯರಾಮ್, ಯಶೋಧಮ್ಮ) ಬಂದಿದ್ದಾರೆ. ಆಗ ಮಾವ (ಜಯರಾಮ್) ಮತ್ತು ಅಳಿಯ (ಶಂಕರ್ ಗೌಡ) ನಡುವೆ ಮಾತಿನ ಚಕಮಕಿ ನಡೆದಿದೆ. [ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!]

ದುನಿಯಾ ವಿಜಯ್ ಮಧ್ಯ ಪ್ರವೇಶ

ಈ ವೇಳೆ ಶಂಕರ್ ಗೌಡ ಸಹಾಯಕ್ಕೆ ನಟ ದುನಿಯಾ ವಿಜಯ್ ಆಗಮಿಸಿದ್ದಾರೆ. ಮಗಳಿಗೆ (ಮಾನಸ) ಆಗಿರುವ ಅನ್ಯಾಯವನ್ನ ದುನಿಯಾ ವಿಜಯ್ ಮುಂದೆ ಪೋಷಕರು (ಜಯರಾಮ್, ಯಶೋಧಮ್ಮ) ತೋಡಿಕೊಂಡರೂ, ಅದಕ್ಕೆ ಸ್ಪಂದಿಸಿ, ನ್ಯಾಯ ಕೊಡಿಸುವ ಬದಲು ಜಯರಾಮ್ ಮೇಲೆ ದುನಿಯಾ ವಿಜಯ್ ಹಲ್ಲೆ ಮಾಡಿದ್ದಾರೆ ಅಂತ ಯಶೋಧಮ್ಮ ಆರೋಪಿಸಿದ್ದಾರೆ.

ಎದೆಗೆ ಒದ್ದರಂತೆ ದುನಿಯಾ ವಿಜಯ್.!

ಮಾನಸ ತಂದೆ ''ಜಯರಾಮ್ ಎದೆಗೆ ನಟ ದುನಿಯಾ ವಿಜಯ್ ಒದ್ದಿದ್ದಾರೆ'' ಅಂತ ಜಯರಾಮ್ ಪತ್ನಿ ಯಶೋಧಮ್ಮ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿರುವ ಜಯರಾಮ್ ರವರನ್ನ ಬುಲ್ ಟೆಂಪಲ್ ರಸ್ತೆಯಲ್ಲಿರುವ ಶೇಖರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎಲ್ಲ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್.!

ಘಟನೆ ನಡೆದ ಬಳಿಕ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಇದೇ ವಿಚಾರ ಬ್ರೇಕಿಂಗ್ ನ್ಯೂಸ್ ಆಯ್ತು.

ಮಾನಸ ಗೌಡ 'ಉಲ್ಟಾ' ಹೇಳಿಕೆ

ಇಷ್ಟೆಲ್ಲ ಬೆಳವಣಿಗೆ ಆದ ಬಳಿಕ ''ನಟ ದುನಿಯಾ ವಿಜಯ್ ಯಾರಿಗೂ ಹಲ್ಲೆ ಮಾಡಿಲ್ಲ. ನಮ್ಮ ತಂದೆ ಮೇಲೆ ಅವರು ಹಲ್ಲೆ ನಡೆಸಿಲ್ಲ. ನಮ್ಮ ತಂದೆ ಕೊಟ್ಟಿರುವ ದೂರನ್ನ ವಾಪಸ್ ತೆಗೆದುಕೊಳ್ಳುತ್ತೇವೆ'' ಅಂತ ಪಬ್ಲಿಕ್ ಟಿವಿಗೆ ಮಾನಸ ಹೇಳಿಕೆ ನೀಡಿದರು.

ಯಾರ ಹೇಳಿಕೆ ಸರಿ.?

ಅಮ್ಮ ಯಶೋಧಮ್ಮ, ಮಗಳು ಮಾನಸ ನೀಡಿರುವ ಹೇಳಿಕೆಗಳು ಸಂಪೂರ್ಣ ತದ್ವಿರುದ್ಧ. ಇಬ್ಬರ ಹೇಳಿಕೆಗಳ ಪೈಕಿ ಯಾವುದು ಸತ್ಯ.? ತನಿಖೆ ಮೂಲಕವೇ ಬಯಲಾಗಬೇಕು.

English summary
Kannada Actor Duniya Vijay gets into another controversy by interfering in Family dispute of 'Maasti Gudi' Producer Sundar.P.Gowda's brother Shankar Gowda and Manasa. Manasa's mother Yashodamma has alleged that Duniya Vijay has assaulted her husband Jayaram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada