»   » ಟ್ವಿಟ್ಟರ್ ನಲ್ಲಿ ಒಪ್ಪಂದ ಮಾಡಿಕೊಂಡ ಜಗ್ಗೇಶ್-ಅನೂಪ್

ಟ್ವಿಟ್ಟರ್ ನಲ್ಲಿ ಒಪ್ಪಂದ ಮಾಡಿಕೊಂಡ ಜಗ್ಗೇಶ್-ಅನೂಪ್

Posted By:
Subscribe to Filmibeat Kannada

'ಉಪ್ಪಿ 2' ಚಿತ್ರದ ಹಾಡಿನ ಬಗ್ಗೆ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಉಪ್ಪಿ ಅಭಿಮಾನಿಗಳು ಹಾಗೂ ಜಗ್ಗೇಶ್ ನಡುವೆ ಟ್ವೀಟ್ ವಾರ್ ಆಗ್ತಾ ಇರೋ ವಿಷ್ಯಾ ನಿಮಗೆ ಗೊತ್ತೇಯಿದೆ.

ಇದೇ ಗ್ಯಾಪ್ ನಲ್ಲಿ ಗಾಂಧಿನಗರದಲ್ಲಿ ಸಖತ್ ಸುದ್ದಿ ಮಾಡಿ, ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿರುವ ಹೊಸಬರ ಚಿತ್ರ 'ರಂಗಿತರಂಗ' ಚಿತ್ರವನ್ನ ನೋಡಿ, ಟ್ವಿಟ್ಟರ್ ನಲ್ಲಿ ಜಗ್ಗೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

Kannada Actor Jaggesh accepts Director Anup Bhandari's offer

'ರಂಗಿತರಂಗ' ನೋಡಿದೆ. ಡೈರೆಕ್ಟರ್ ಬರೆದ ಸಾಹಿತ್ಯ ''ಕ'' ಅಕ್ಷರದ್ದು ಆತನ ನಿರ್ದೇಶನದಷ್ಷೇ ಅದ್ಭುತವಾಗಿದೆ. ಮೊದಲ ನಿರ್ದೇಶನದಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಗುಡ್ ಮೂವಿ' ಅಂತ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ನೋಡಿ ಜಗ್ಗೇಶ್ ಅವರಿಗೆ ಥ್ಯಾಂಕ್ಸ್ ಹೇಳುವ ನೆಪದಲ್ಲೇ ನಿರ್ದೇಶಕ ಅನೂಪ್ ಭಂಡಾರಿ, ನವರಸ ನಾಯಕನಿಗೆ ತಮ್ಮ ಹೊಸ ಚಿತ್ರದಲ್ಲಿ ನಟಿಸುವಂತೆ ಕಾಲ್ ಶೀಟ್ ಕೇಳಿದ್ದಾರೆ.[ಸುದೀಪ್ ಸಾಧನೆ ಕಂಡು ಜಗ್ಗೇಶ್ ಹೇಳಿದ್ದೇನು?]

'ಸರ್, ನನ್ನ ತುಂಬು ಹೃದಯದ ಧನ್ಯವಾದಗಳು. ನಿಮ್ಮನ್ನು ಒಂದು ವಿಭಿನ್ನ ಹಾಗೂ ಇದುವರೆಗೂ ಮಾಡಿರದಂತಹ ಪಾತ್ರ ಮಾಡಿಸಬೇಕು ಅನ್ನೋ ಆಸೆ ಇದೆ' ಅಂತ 'ರಂಗಿತರಂಗ' ನಿರ್ದೇಶಕ ಅನೂಪ್ ಭಂಡಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೆ ಜಗ್ಗೇಶ್ ನೀಡಿದ ಉತ್ತರ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ. 'ಸದಾ ನನ್ನ ಹೃದಯ, ಮನೆ ಬಾಗಿಲು ನಿಮ್ಮಂತ ಪ್ರತಿಭಾನ್ವಿತರಿಗೆ ತೆರೆದಿರುತ್ತದೆ..ಸ್ವಾಗತ' ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.[ಉಪೇಂದ್ರ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಜಗ್ಗೇಶ್]

ಅಲ್ಲಿಗೆ, ಅನೂಪ್ ಭಂಡಾರಿ ಅವರ ಮುಂದಿನ ಚಿತ್ರದಲ್ಲಿ ಜಗ್ಗೇಶ್ ನಟಿಸುವುದು ಖಚಿತವಾದ್ಹಾಗೆ.

English summary
Kannada Actor Jaggesh had taken his twitter account to praise Kannada movie 'RangiTaranga'. Looking at Jaggesh tweets, Director Anup Bhandari has offered to cast the Actor in his next movie. Openly Jaggesh accepted the offer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada