Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸರಿಯಾದ ಪಾತ್ರ ಕೊಟ್ಟರೆ ತಪ್ಪದೆ ಬಾಲ್ ಬೌಂಡರಿಗೆ ತಲುಪಿಸುವೆ: ನಟ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತ, ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿರುವ ಜಗ್ಗೇಶ್ ಈಗ ಮತ್ತೊಂದು ಬಹು ನಿರೀಕ್ಷೆಯ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.
ಸ್ಯಾಂಡಲ್ ವುಡ್ ನ ಹಿಟ್ ಕಾಂಬಿನೇಷನ್ ನಲ್ಲಿ ಒಂದಾಗಿರುವ ನವರಸನಾಯಕ ಜಗ್ಗೇಶ್ ಮತ್ತು ಗುರುಪ್ರಸಾದ್ ಜೋಡಿಯ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಇಬ್ಬರು ಮುನಿಸು ಮರೆತು ಒಂದಾಗಿದ್ದು ಮಾತ್ರವಲ್ಲದೆ ಸಿನಿಮಾ ಕೂಡ ಶುರು ಮಾಡಿದ್ದಾರೆ.
ಪೈರಸಿ
ವೆಬ್
ಸೈಟ್
ಕುರಿತು
ಆಘಾತಕಾರಿ
ವಿಷಯ
ಬಹಿರಂಗಪಡಿಸಿದ
ಜಗ್ಗೇಶ್
ಮಠ, ಎದ್ದೇಳು ಮಂಜುನಾಥ ಅಂತಹ ಸೂಪರ್ ಹಿಟ್ ಕಾಮಿಡಿ ಸಿನಿಮಾಗಳನ್ನು ನೀಡಿರುವ ಈ ಜೋಡಿ ಈಗ ರಂಗನಾಯಕ ಮೂಲಕ ಮತ್ತೆ ವಾಪಸ್ ಆಗಿರುವುದು ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಜಗ್ಗೇಶ್ ಮತ್ತು ಗುರುಪ್ರಾಸಾದ್ ಸಿನಿಮಾಗೆ ರಂಗನಾಯಕ ಅಂತ ಟೈಟಲ್ ಫಿಕ್ಸ್ ಮಾಡಲಾಗಿದೆ. ಬಗ್ಗೆ ನವರಸ ನಾಯಕ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಸರಿಯಾದ ಪಾತ್ರ ಕೊಟ್ಟರೆ ಸಕ್ಸಸ್ ಖಂಡಿತಾ ಎಂದು ಹೇಳಿದ್ದಾರೆ.
"ನವರಸನಾಯಕನ ರಂಗನಾಯಕ ಮಾಡಲು ಹೊರಟ ಗುರುಪ್ರಸಾದ್. ಸರಿಯಾದ ಪಾತ್ರ ಕೊಟ್ಟರೆ ತಪ್ಪದೆ ಬಾಲ್ ಬೌಂಡರಿಗೆ ತಲುಪಿಸುವೆ. ಹತ್ತು ಹೆರುವುದಕ್ಕಿಂತ ಮುತ್ತಿನಂತ ಒಂದು ಹೆರುವಂತೆ. ನನಗೆ ನೂರಾರು ಚಿತ್ರಕ್ಕಿಂತ ಮುತ್ತಿನಂತ ಕೆಲ ಚಿತ್ರ ಸಾಕು ಕನ್ನಡಿಗರ ಖುಷಿಪಡಿಸಲು. ಧನ್ಯವಾದಗಳು" ಎಂದು ರಂಗನಾಯಕ ಚಿತ್ರದ ಬಗ್ಗೆ ಮತ್ತು ನಿರ್ದೇಶಕರ ಬಗ್ಗೆ ಹೇಳಿಕೊಂಡಿದ್ದಾರೆ.
ಅಂದ್ಹಾಗೆ ಇಬ್ಬರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿತ್ತು ನಿರ್ಮಾಪಕ ವಿಖ್ಯಾತ್. ಸದ್ಯ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಟ್ಟಿಲ್ಲ. ಅಲ್ಲದೆ ಕಲಾವಿದರ ಬಗ್ಗೆ ಬಹಿರಂಗ ಪಡಿಸಿಲ್ಲ ಚಿತ್ರತಂಡ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.