»   » 'ಆಕೆ' ಟ್ರೈಲರ್ ಗೆ ನವರಸ ನಾಯಕ ಜಗ್ಗೇಶ್ ಪ್ರಶಂಸೆ

'ಆಕೆ' ಟ್ರೈಲರ್ ಗೆ ನವರಸ ನಾಯಕ ಜಗ್ಗೇಶ್ ಪ್ರಶಂಸೆ

Posted By:
Subscribe to Filmibeat Kannada

ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ 'ಆಕೆ' ಚಿತ್ರದ ಬಗ್ಗೆ ಈಗಾಗಲೇ ಸ್ಯಾಂಡಲ್ ವುಡ್ ನಟ-ನಟಿಯರಾದ ದರ್ಶನ್, ಸುದೀಪ್, ರಮ್ಯಾ, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ನವರಸ ನಾಯಕ ಜಗ್ಗೇಶ್ ಅವರು ಕೂಡ 'ಆಕೆ' ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

''ಪರಭಾಷೆಗಳಲ್ಲಿ ಬರುವ ಚಿತ್ರಗಳಂತೆ, ಕನ್ನಡದಲ್ಲೂ ಬರಬೇಕು ಎಂದು ಕನ್ನಡಿಗರು ಬಯಸುವಾಗೆ 'ಆಕೆ' ಚಿತ್ರ ಮೂಡಿ ಬಂದಿದೆ. ಹಾಲಿವುಡ್ ತಂತ್ರಜ್ಞರು ಸೇರಿ ಮಾಡಿರುವ ಸಿನಿಮಾ ಇದು. ಕನ್ನಡ ಪ್ರೇಕ್ಷಕರಾಗಿ ಒಂದೊಳ್ಳೆ ಸಿನಿಮಾ ನೋಡಬೇಕು, ಚಿರಂಜೀವಿ ಸರ್ಜಾ ಅಭಿನಯದ 'ಆಕೆ' ಚಿತ್ರ ಕರ್ನಾಟಕದಲ್ಲಿ ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತೇನೆ'' ಎಂದು ಜಗ್ಗೇಶ್ ಹೇಳಿದ್ದಾರೆ.

ದರ್ಶನ್ ಆಯ್ತು, ರಮ್ಯಾ ಮುಗೀತು.. ಈಗ ಸುದೀಪ್ ಗೆ 'ಆಕೆ' ಮೇಲೆ ಕಣ್ಣು.!

Kannada Actor Jaggesh Appreciates 'Aake' Trailer

ಈ ಚಿತ್ರದ ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಹಾಲಿವುಡ್ ತಂತ್ರಜ್ಞರು ಹೆಚ್ಚು ಕೆಲಸ ಮಾಡಿದ್ದಾರೆ. ಕಾರ್ಲ್ ಆಸ್ಟಿನ್ ಎಂಬುವವರು ಚೈತನ್ಯ ಜೊತೆಗೆ ಚಿತ್ರಕಥೆ ಬರೆದಿದ್ದಾರಂತೆ. ಪಾಲ್ ಬನ್ರ್ಸ್ ಎನ್ನುವವರು ಪ್ರೊಡಕ್ಷನ್ ಡಿಸೈನರ್ ಆಗಿದ್ದಾರಂತೆ. ಹ್ಯಾರಿ ಪಾಟರ್' ಚಿತ್ರಕ್ಕೆ ಕ್ಯಾಮರಾಮ್ಯಾನ್ ಆಗಿದ್ದ ಇಯಾನ್ ಹೌಸ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

'ಆಕೆ'ಯ ಥ್ರಿಲ್ಲಿಂಗ್ ಟ್ರೈಲರ್ ನೋಡಿ ಥ್ರಿಲ್ ಆದ ಪವರ್ ಸ್ಟಾರ್

ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಆಕೆ' ಮಿಸ್ಟರಿ, ಸಸ್ಪೆನ್ಸ್ ಮತ್ತು ಹಾರರ್ ಚಿತ್ರವಾಗಿದ್ದು, ಇದೇ ತಿಂಗಳು 30 ರಂದು ತೆರೆಗೆ ಬರಲಿದೆ. ಕೆ.ಎಂ ಚೈತನ್ಯ ಆಕ್ಷನ್ ಕಟ್ ಹೇಳಿದ್ದು, 'ಇರೋಸ್ ಇಂಟರ್ ನ್ಯಾಷನಲ್' ಕೆ.ಎಸ್ ಡ್ರೀಮ್ಸ್ ಹಾಗೂ ನಕ್ಷತ್ರ ಸಂಸ್ಥೆ ಜೊತೆ ಜಂಟಿ ನಿರ್ಮಾಣ ಮಾಡಿದೆ.

ಚಿರಂಜೀವಿ 'ಆಕೆ' ಪ್ರೋಮೋ ನೋಡಿ ದಾಸ ದರ್ಶನ್ ಏನಂದ್ರು ನೋಡಿ..!

English summary
Kannada Actor Jaggesh appreciate to Kannada Movie 'Aake' trailer. The Movie Directed by KM Chaithanya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada