»   » 33ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಜಗ್ಗೇಶ್-ಪರಿಮಳಾ

33ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಜಗ್ಗೇಶ್-ಪರಿಮಳಾ

Posted By:
Subscribe to Filmibeat Kannada

ಇತ್ತೀಚೆಗಷ್ಟೆ ತಮ್ಮ ಹುಟ್ಟಿದ ಹಬ್ಬದ ಸಂಭ್ರಮವನ್ನು ಆಚರಿಸಿಕೊಂಡ 'ನವರಸ ನಾಯಕ' ಜಗ್ಗೇಶ್, ಇಂದು ಮೊತ್ತೊಂದು ಸಂಭ್ರಮದಲ್ಲಿದ್ದಾರೆ. ಆ ಸಂತೋಷದ ವಿಷಯ ಏನಂದ್ರೆ ಇಂದು ಅವರ ದಾಂಪತ್ಯ ಜೀವನಕ್ಕೆ 33 ವರ್ಷಗಳು ತುಂಬಿವೆ.['ಕನ್ನಡದ ಕಂದ' ಜಗ್ಗೇಶ್ ರವರಿಗಿಂದು 54ನೇ ಹುಟ್ಟುಹಬ್ಬದ ಸಂಭ್ರಮ]

ಜಗ್ಗೇಶ್ ತಾವು ಪ್ರೀತಿಸುತ್ತಿದ್ದ ಪರಿಮಳಾ ಅವರೊಂದಿಗೆ 1984 ರ ಮಾರ್ಚ್ 22 ರಂದು ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಇಂದಿಗೆ ಅವರ ವಿವಾಹವಾಗಿ 33 ವರ್ಷಗಳಾಗಿದ್ದು, ವಿವಾಹ ವಾರ್ಷಿಕೋತ್ಸವವನ್ನು ಸಂತೋಷದಿಂದ ಆಚರಿಸಿಕೊಂಡಿದ್ದಾರೆ. ಜಗ್ಗೇಶ್ ಮತ್ತು ಪರಿಮಳಾ ಜಗ್ಗೇಶ್ ದಾಂಪತ್ಯ ಜೀವನಕ್ಕೆ ಬೆಳ್ಳಿತೆರೆ ನಟ-ನಟಿಯರು ಮತ್ತು ಹಲವು ರಾಜಕಾರಣಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.

Kannada Actor Jaggesh Celebrated his 33rd marriage anniversary

33 ವರ್ಷ ಯಶಸ್ವಿಯಾಗಿ ಸಂತೋಷದಿಂದ ಜೀವನ ನಡೆಸಿರುವ ಜಗ್ಗೇಶ್ ಮತ್ತು ಪರಿಮಳಾ ಜಗ್ಗೇಶ್ ಅವರಿಗೆ ಗುರುರಾಜ್ ಮತ್ತು ಯತಿರಾಜ್ ಇಬ್ಬರು ಮಕ್ಕಳಿದ್ದಾರೆ.[ಜಗ್ಗೇಶ್ ದೊಡ್ಡತನಕ್ಕೆ ತಲೆಬಾಗಿ ಮುಗುಳ್ನಕ್ಕ ನಿರ್ದೇಶಕ ಯೋಗರಾಜ್ ಭಟ್.! ]

Kannada Actor Jaggesh Celebrated his 33rd marriage anniversary

ಜಗ್ಗೇಶ್ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್ 3' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಶೂಟಿಂಗ್ ವೇಳೆ ಜಗ್ಗೇಶ್ ಅವರಿಗೆ, ಅವರ ಮದುವೆ ಪ್ರಮಾಣಪತ್ರ ನೀಡಲಾಗಿತ್ತು. ಅದನ್ನು ನೋಡಿದ ತಕ್ಷಣ ಜಗ್ಗೇಶ್, ತಾವು ಮೂಕವಿಸ್ಮಿತನಾದೆ ಎಂದು ಟ್ವೀಟ್ ಮಾಡಿದ್ದರು. ಅಂತೂ ಅವರ 33 ನೇ ವಿವಾಹ ವಾರ್ಷಿಕೋತ್ಸವಕ್ಕೆ ಮ್ಯಾರೇಜ್ ಸರ್ಟಿಫಿಕೇಟ್ ಸಿಕ್ಕಿರುವ ಖುಷಿಯು ಅವರಿಗಿದೆ. ಜಗ್ಗೇಶ್ ಮತ್ತು ಪರಿಮಳಾ ಜಗ್ಗೇಶ್ ಅವರಿಗೆ ನಮ್ಮ ಕಡೆಯಿಂದಲೂ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸೋಣ...

English summary
Navarasa Nayaka Jaggesh and his wife Parimala Jaggesh Celebrated their 33rd Marriage Anniversary.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada