»   » 'ಕನ್ನಡದ ಕಂದ' ಜಗ್ಗೇಶ್ ರವರಿಗಿಂದು 54ನೇ ಹುಟ್ಟುಹಬ್ಬದ ಸಂಭ್ರಮ

'ಕನ್ನಡದ ಕಂದ' ಜಗ್ಗೇಶ್ ರವರಿಗಿಂದು 54ನೇ ಹುಟ್ಟುಹಬ್ಬದ ಸಂಭ್ರಮ

Posted By:
Subscribe to Filmibeat Kannada

ಒಂದ್ಕಡೆ ಅಪ್ಪು ಬರ್ತಡೇಗಾಗಿ ಇಂದು ಪವರ್ ಸ್ಟಾರ್ ಅಭಿಮಾನಿಗಳು ಸಡಗರ-ಸಂಭ್ರಮ ಪಡುತ್ತಿದ್ದರೆ, ಇನ್ನೊಂದ್ಕಡೆ 'ನವರಸ ನಾಯಕ'ನ ಕಟ್ಟಾ ಭಕ್ತರೂ ಕೂಡ ಹಬ್ಬದ ಮೂಡ್ ನಲ್ಲಿದ್ದಾರೆ. ಯಾಕಂದ್ರೆ, ಇವತ್ತು ಕನ್ನಡದ ಹೆಮ್ಮೆಯ ನಟ ಜಗ್ಗೇಶ್ ರವರ 54ನೇ ಹುಟ್ಟುಹಬ್ಬ.

ಮನಸ್ಸು ಮತ್ತು ನಾಲಿಗೆ ಮಧ್ಯೆ ಫಿಲ್ಟರ್ ಇಲ್ಲದೇ.. ಅನಿಸಿದ್ದನ್ನ ನೇರವಾಗಿ ಹೇಳುವ 'ಭಂಡ'.. ಕಾಮಿಡಿ ಕಚಗುಳಿ ಇಡುವ 'ಕಿಲಾಡಿ' ಜಗ್ಗೇಶ್ ಇವತ್ತು ತಮ್ಮ 54ನೇ ಜನ್ಮದಿನದ ಪ್ರಯುಕ್ತ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. [ಜಗ್ಗೇಶ್'ರ ನಡೆ ಅವರ ಬಂಧುಗಳಿಗೆ ಹೇಸಿಗೆ ಉಂಟುಮಾಡಿತ್ತಂತೆ]

Kannada Actor Jaggesh celebrates his 54th Birthday

''ನನ್ನ ಹರಸಿದ ಎಲ್ಲಾ ಉಸಿರಿನಲ್ಲಿ ಬೆರೆತ ಕನ್ನಡ ಕಲಾಭಿಮಾನಿಗಳ ಪಾದಾರವಿಂದಕ್ಕೆ ಜಗ್ಗೇಶನ ಸಹಸ್ರಾರು ಶರಣಾರ್ಥಿ'' ಅಂತ ತಮಗೆ ಶುಭಾಶಯ ಕೋರಿದ ಎಲ್ಲರಿಗೂ ಟ್ವೀಟ್ ಮೂಲಕ ಜಗ್ಗೇಶ್ ಧನ್ಯವಾದ ಸಲ್ಲಿಸಿದ್ದಾರೆ.

'ನಂಜನಗೂಡು ನಂಜುಂಡೇಶ್ವರ'ನ ವರ ಪ್ರಸಾದದಿಂದ ಹುಟ್ಟಿದ 'ಈಶ್ವರ್' ಸ್ಯಾಂಡಲ್ ವುಡ್ ನಲ್ಲಿ 'ನವರಸ ನಾಯಕ' ಜಗ್ಗೇಶ್ ಅಂತಲೇ ಚಿರಪರಿಚಿತ.

Kannada Actor Jaggesh celebrates his 54th Birthday

ಭಿನ್ನ-ವಿಭಿನ್ನ ಚಿತ್ರಗಳಿಂದ ದಶಕಗಳಿಂದ ಎಲ್ಲರನ್ನೂ ರಂಜಿಸುತ್ತಿರುವ ಜಗ್ಗೇಶ್ ರವರಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

English summary
Kannada Actor Jaggesh is celebrating his 54nd Birthday today (March 17th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada