'ಅಲೆದಿಲ್ಲಾ, ನಿರ್ಮಾಪಕರ ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿದವರು ನಾವು'
ಅದೊಂದು ಸಮಯವಿತ್ತು....ಸಿನಿಮಾದಲ್ಲಿ ಅವಕಾಶ ಬೇಕು ಅಂದ್ರೆ ತಿಂಗಳುಗಳ ಕಾಲ, ವರ್ಷಗಳ ಕಾಲ ನಿರ್ದೇಶಕ-ನಿರ್ಮಾಪಕರ ಹಿಂದೆ ಅಲೆದಾಡಿ, ಕಷ್ಟಪಟ್ಟು ಒಂದು ಸಣ್ಣ ಪಾತ್ರ ಗಿಟ್ಟಿಸಿಕೊಳ್ಳಬೇಕಿತ್ತು.
Recommended Video
ಹೀಗೆ ಕಷ್ಟಪಟ್ಟು ಅವಕಾಶಗಳನ್ನು ಪಡೆದುಕೊಂಡು ಬೆಳೆದ ಬಹಳ ಜನರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಈ ಪೈಕಿ ನಟ ಜಗ್ಗೇಶ್, ದೇವರಾಜ್, ಅವಿನಾಶ್ ಸಹ ಒಬ್ಬರು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ತಮ್ಮ ಹಳೆಯ ದಿನಗಳ ಕುರಿತು, ತಾವು ಪಾತ್ರಕ್ಕಾಗಿ, ಸಿನಿಮಾಗಾಗಿ ಅಲೆದಾಡಿದ ದಿನಗಳ ಕುರಿತು ಜಗ್ಗೇಶ್ ಅನೇಕ ಸಲ ಹೇಳಿದ್ದಾರೆ. ಇದೀಗ, ದೇವರಾಜ್ ಅವರ ಹುಟ್ಟುಹಬ್ಬದ ದಿನ ತಮ್ಮ ಸಹಕಲಾವಿದನಿಗೆ ಶುಭಕೋರಿದ್ದಾರೆ ಜಗ್ಗೇಶ್. ಮುಂದೆ ಓದಿ...

ಗೆಳೆಯನಿಗೆ ಶುಭಕೋರಿದ ಜಗ್ಗೇಶ್
ಹಿರಿಯ ನಟ ದೇವರಾಜ್ ಅವರಿಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜಗ್ಗೇಶ್ ಮತ್ತಿ ದೇವರಾಜ್ ಒಟ್ಟಿಗಿರುವ ಫೋಟೋ ಹಂಚಿಕೊಂಡಿರುವ ಜಗ್ಗೇಶ್ ಫ್ಯಾನ್ಸ್ ಕ್ಲಬ್ ಖಾತೆ ಡೈನಾಮಿಕ್ ಸ್ಟಾರ್‌ಗೆ ಜನುಮದಿನಕ್ಕೆ ವಿಶ್ ಮಾಡಿದೆ. ಇದಕ್ಕೆ ಕಾಮೆಂಟ್ ಮಾಡಿರುವ ಜಗ್ಗೇಶ್ ''ಓಂಕಾರದಿಂದ ಜೊತೆಯಲ್ಲಿ ಕೆ.ವಿ.ರಾಜು ರವರ ಗರಡಿಯಲ್ಲಿ ಬೆಳೆದವರು..!! ಶುಭಮಸ್ತು.........'' ಎಂದಿದ್ದಾರೆ.

ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿದವರು
''ಕಷ್ಟ ಪಟ್ಟು ಒಂದೊಂದು ಪಾತ್ರಕ್ಕೂ ಅಲೆದರು... ಸಿಕ್ಕಾಗ ತಮ್ಮ ಟ್ಯಾಲೆಂಟನ್ನು ಅಡವಿಟ್ಟು..ಪರದೆ ಮೇಲೆ ಮಿಂಚಿದರು... ಜಗ್ಗೇಶ್, ದೇವರಾಜ್ , ಅವಿನಾಶ್ ಇನ್ನೂ ಅನೇಕ ಪ್ರತಿಭಾವಂತರು ಬೆಳೆದು ಬಂದ ದಾರಿ ಇಂದಿನ ಪೀಳಿಗೆಗೆ ಮಾದರಿಯಾಗಲಿ'' ಎಂದು ವ್ಯಕ್ತಿಯೊಬ್ಬ ಜಗ್ಗೇಶ್-ದೇವರಾಜ್ ಒಟ್ಟಿಗೆ ಇರುವ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್ ''ಅಲೆದಿಲ್ಲಾ, ನಿರ್ಮಾಪಕರ ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿದವರು ನಾವು'' ಎಂದು ಕಷ್ಟದ ದಿನ ನೆನಪಿಸಿಕೊಂಡಿದ್ದಾರೆ.

ಪ್ರೀತಿಗಾಗಿ ಬದುಕಿದ ತಲೆಮಾರು
''ತಿನ್ನಲು ಅನ್ನವಿಲ್ಲದಿದ್ದರು ಮುಖದಲ್ಲಿ ನಗು ಮಾಸುತ್ತಿರಲಿಲ್ಲಾ! ಗೆದ್ದಮೇಲೆ ಯಶಸ್ಸು ತಲೆಗೆ ಏರಲಿಲ್ಲಾ! ಸ್ವಾಭಿಮಾನಕ್ಕೆ ಪಡೆದದ್ದು ಏನು ಬೇಕಾದರು ಬಿಸಾಕಿ ಗೌರವದಿಂದ ಬದುಕಿದವರು! ಬದುಕನ್ನ ಪ್ರೀತಿಸಿ ಬೆಳೆದವರು! ಪ್ರೀತಿಗಾಗಿ ಬದುಕಿದ ತಲೆಮಾರು! ಸ್ವಲ್ಪ ಸಿಟ್ಟು ಜಾಸ್ತಿ.!'' ಎಂದು ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ರಾಬರ್ಟ್ ಚಿತ್ರತಂಡದಿಂದ ಶುಭಾಶಯ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರತಂಡ ಡೈನಾಮಿಕ್ ಹೀರೋ ದೇವರಾಜ್ ಹುಟ್ಟುಹಬ್ಬಕ್ಕೆ ಶುಭಕೋರಿದೆ. ನಟ ದರ್ಶನ್ ಸಹ ದೇವರಾಜ್ ಅವರಿಗೆ ಶುಭಕೋರಿದ್ದಾರೆ.


Click it and Unblock the Notifications











