For Quick Alerts
  ALLOW NOTIFICATIONS  
  For Daily Alerts

  'ಎಲ್ಲರಿಗು ಇವರು ನಟ ನನಗೆ ಆತ್ಮೀಯ': ಶಂಕ್ರಣ್ಣನ ನೆನೆದ ಜಗ್ಗೇಶ್

  |

  ಶಂಕರ್ ನಾಗ್ ಇದ್ದಿದ್ರೆ ಕನ್ನಡ ಇಂಡಸ್ಟ್ರಿ ಇನ್ನೊಂದು ಹಂತಕ್ಕೆ ಇರ್ತಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಶಂಕ್ರಣ್ಣ ಆಲೋಚನೆಗಳು, ಅವರ ಯೋಜನೆಗಳನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತಿದು. ದುರಾದೃಷ್ಟವಶಾತ್ ಶಂಕರ್ ನಾಗ್ ಬಹಳ ಬೇಗ ನಮ್ಮನಗಲಿದರು.

  ಆದರೂ, ಶಂಕರ್ ನಾಗ್ ಅವರ ಸಿನಿಮಾಗಳು, ಅವರ ತೋರಿದ ಮಾರ್ಗಗಳು ಇಂದು ಅದೇಷ್ಟೋ ಯುವಕರಿಗೆ ಸ್ಫೂರ್ತಿ. ಆಟೋ ಡ್ರೈವರ್‌ಗಳಿಗಂತೂ ಶಂಕರ್ ನಾಗ್ ಆರಾಧ್ಯ ಧೈವವೇ ಸರಿ. ಅಂದ್ಹಾಗೆ, ಶಂಕರ್ ನಾಗ್ ಅವರಿಗೆ ಇಂದು 66ನೇ ಹುಟ್ಟುಹಬ್ಬ.

  'ಶಂಕ್ರಣ್ಣ'ನನ್ನ ಮೊದಲ ಸಲ ಆಶ್ಚರ್ಯದಿಂದ ನೋಡಿದ್ದರಂತೆ ಜಗ್ಗೇಶ್.! ಯಾಕೆ?

  ಶಂಕ್ರಣ್ಣನ ಹುಟ್ಟುಹಬ್ಬದಂದು ಸ್ಯಾಂಡಲ್ ವುಡ್ ಇಂಡಸ್ಟ್ರಿ ಕಲಾಬಂಧುಗಳು ಸಹ ನೆನಪಿಸಿಕೊಂಡಿದ್ದಾರೆ. ಅವರ ಜೊತೆಗಿನ ನೆನಪು, ಅವರ ಜೊತೆಗಿನ ಒಡನಾಟ, ಅವರ ಆಲೋಚನೆಗಳ ಕುರಿತು ಹಂಚಿಕೊಂಡಿದ್ದಾರೆ.

  ನವರಸ ನಾಯಕ ಜಗ್ಗೇಶ್ ಅವರು, ಶಂಕರ್ ನಾಗ್ ಬರ್ತಡೇಗೆ ವಿಶ್ ಮಾಡಿದ್ದು, ''ಹಲವರು ಸತ್ತ ಮೂರು ದಿನಕ್ಕೆ ಮರೆವು..!! ಕೆಲವರು ಸತ್ತ ನೂರುವರ್ಷಕ್ಕು ನೆನಪು..!! ಎಲ್ಲರಿಗು ಇವರು ನಟ ನನಗೆ ಆತ್ಮೀಯ..!! ಇವರ ತಮ್ಮನ ಪಾತ್ರ ಮಾಡಿದ ಹೆಮ್ಮೆಯಿದೆ..!! ಮಾಸದೆ ಮಾನಸದಲ್ಲಿ ಇವರ ಒಡನಾಟದ ನೆನಪು ಉಳಿದಿದೆ..!! ಮಹನೀಯರ ಹುಟ್ಟುಹಬ್ಬದ ಶುಭಕಾಮನೆ.........'' ಎಂದಿದ್ದಾರೆ.

  ಶಂಕರ್ ನಾಗ್ ಹುಟ್ಟುಹಬ್ಬ: 'ಆಟೋರಾಜ'ನನ್ನು ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  ಅಂದ್ಹಾಗೆ, 1983ರಲ್ಲಿ ಶಂಕರ್ ನಾಗ್ ಅವರನ್ನ ಜಗ್ಗೇಶ್ ಅವರು ಮೊದಲ ನೋಡಿದ್ದರಂತೆ. ಕೆ.ವಿ ಜಯರಾಂ ನಿರ್ದೇಶನದ 'ಇಬ್ಬನಿ ಕರಗಿತು' ಚಿತ್ರದ ಚಿತ್ರೀಕರಣ ಸೋಫಿಯಾ ಸ್ಕೂಲ್ ನಲ್ಲಿ ನಡೆಯುತ್ತಿತ್ತಂತೆ. ಆಗ ಅನಂತ್ ನಾಗ್ ಮತ್ತು ಶಂಕರ್ ನಾಗ್ ಇಬ್ಬರು ಫಿಯೇಟ್ ಕಾರ್ ನಲ್ಲಿ ಬಂದಿದ್ದರು. ಈ ಸಹೋದರರನ್ನ ಆಶ್ಚರ್ಯದಿಂದ ನೋಡಿದ್ದರಂತೆ ಜಗ್ಗೇಶ್.

  'ಇಬ್ಬನಿ ಕರಗಿತು' ಅನಂತ್ ನಾಗ್ ನಾಯಕನಾಗಿ ಕಾಣಿಸಿಕೊಂಡಿದ್ದ ಸಿನಿಮಾ. ಜಗ್ಗೇಶ್ ಅವರು ಮೊದಲು ಬಣ್ಣ ಹಚ್ಚಿದ ಸಿನಿಮಾ ಕೂಡ ಇದೇ. ಈ ಚಿತ್ರದಲ್ಲಿ ಜಗ್ಗೇಶ್ ಅವರು ಒಂದು ಸಣ್ಣ ಪಾತ್ರವನ್ನ ನಿರ್ವಹಿಸಿದ್ದರಂತೆ. ಇದು ಇದಾದ ನಂತರ 'ಶ್ವೇತಾ ಗುಲಾಬಿ' ಚಿತ್ರದ ಮೂಲಕ ಅಧಿಕೃತವಾಗಿ ಜಗ್ಗೇಶ್ ಚಿತ್ರರಂಗ ಪ್ರವೇಶ ಮಾಡಿದರಂತೆ.

  ಇವನ ಬೆನ್ನು ತಟ್ಟಿ ಆಶೀರ್ವಾದ ಮಾಡಿ | NodidavaruEnantare | Umapathy Srinivas | Filmibeat Kannada

  ಶಂಕರ್ ನಾಗ್ ಅವರು ನಮ್ಮನಗಲಿ 30 ವರ್ಷ ಕಳೆದಿದೆ. 1990ರ ಸೆಪ್ಟೆಂಬರ್ 30 ರಂದು ಶಂಕ್ರಣ್ಣ ಅಪಘಾತದಲ್ಲಿ ಮೃತಪಟ್ಟರು.

  English summary
  Kannada Actor Jaggesh has wish to late actor Shankar nag's Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X