For Quick Alerts
  ALLOW NOTIFICATIONS  
  For Daily Alerts

  ನಿಮ್ಮ ಮನೆ ಪಾಯಿಖಾನೆ ತೊಳೆದು ಸೇವೆ ಮಾಡುವೆ; ನಟ ಜಗ್ಗೇಶ್ ಸವಾಲು ಹಾಕಿದ್ದು ಯಾರಿಗೆ

  |

  ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಮತ್ತೆ ಡಬ್ಬಿಂಗ್ ಬಗ್ಗೆ ಮಾತನಾಡಿದ್ದಾರೆ. ಡಬ್ಬಿಂಗ್ ತಂದು ಕನ್ನಡವನ್ನು ಸರ್ವನಾಶ ಮಾಡಿಬಿಟ್ಟರು ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

  ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳು ಪ್ರಭಾವ ಹೆಚ್ಚಾಗುತ್ತಿದೆ. ಪರಭಾಷೆ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಥಿಯೇಟರ್‌ನಲ್ಲಿ ತೆರೆಕಾಣುತ್ತಿವೆ. ಇದನ್ನು ಪ್ರೇಕ್ಷಕರು ಸಹ ಸ್ವಾಗತಿಸಿದ್ದರು. ಆದ್ರೆ, ಲಾಕ್‌ಡೌನ್ ಬಳಿಕ ಟಿವಿಯಲ್ಲೂ ಡಬ್ಬಿಂಗ್ ಚಿತ್ರಗಳ ಪ್ರಸಾರ ಹೆಚ್ಚಾಗುತ್ತಿರುವ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  ಟಿವಿಯಲ್ಲಿ ಡಬ್ಬಿಂಗ್ ಚಿತ್ರಗಳ ಪ್ರಸಾರ ಹೆಚ್ಚಾಯ್ತಾ? ಕನ್ನಡ ಪ್ರೇಕ್ಷಕರು ಏನಂತಿದ್ದಾರೆ?ಟಿವಿಯಲ್ಲಿ ಡಬ್ಬಿಂಗ್ ಚಿತ್ರಗಳ ಪ್ರಸಾರ ಹೆಚ್ಚಾಯ್ತಾ? ಕನ್ನಡ ಪ್ರೇಕ್ಷಕರು ಏನಂತಿದ್ದಾರೆ?

  ಇತ್ತೀಚಿಗೆ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸಾಲು ಸಾಲು ಡಬ್ಬಿಂಗ್ ಸಿನಿಮಾಗಳ ಬಗ್ಗೆ ಮತ್ತು ಇಂದಿನ ಸ್ಥಿತಿ ಗತಿ ಬಗ್ಗೆ ಪ್ರದೀಪ್ ದೊಡ್ಡಯ್ಯ ಎನ್ನುವವರು ಮಾಡಿರುವ ವಿಡಿಯೋಗೆ ನಟ ಜಗ್ಗೇಶ್ ಕಾಮೆಂಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. 'ಡಬ್ಬಿಂಗ್ ಬಗ್ಗೆ ಮಾತಾಡಿದಕ್ಕೆ ಕಾನೂನು ನನಗೆ 3 ಲಕ್ಷ ದಂಡ ವಿಧಿಸಿತು ನನ್ನ ಉದ್ಯಮದ ಪ್ರೀತಿಗೆ ನನಗೆ ಸಿಕ್ಕ ಬಳುವಳಿ ಅದು ಇಂದು ಕನ್ನಡ ಚಿತ್ರರಂಗವಲ್ಲ ಕನ್ನಡಿಗನೇ ಮುಂದೆ ಮಸಣಸೇರುವ ಸ್ಥಿತಿ ತಲುಪುತ್ತಾನೆ' ಎಂದಿದ್ದಾರೆ.

  'ಈ ವಿಚಾರಕ್ಕೆ ಕೈ ಜೋಡಿಸಿದಾಗ ನನ್ನನ್ನು ಕನ್ನಡ ದ್ರೋಹಿ ಎಂದು ಜರಿದರು. ಕಾನೂನಿನ ಮುಂದೆ ಕನ್ನಡಚಿತ್ರತಂಡ ಕಂಡವರ ಪಾಲಾಯಿತು. ಆ ಕಾರ್ಯ ಮಾಡಿ ಗೆದ್ದವರಿಗೆ ಒಂದು ಪ್ರಶ್ನೆ ಕೇಳಿ, ಅವರ ನೆಲದಲ್ಲಿ ನಮ್ಮ ಕನ್ನಡ ಚಿತ್ರರಂಗ ಸೇರಿಸಲು ಹೋರಾಟ ಮಾಡುವ ದಾರಿ ಸಮಯ ಇದೆಯಾ? ಒಂದು ವೇಳೆ ನೀವುಗಳು ಕನ್ನಡ ಚಿತ್ರವನ್ನು ಅಲ್ಲಿಯೂ ಬೇರು ಊರಿಸಿದರೆ, ನನ್ನ ತಾಯಿ ಆಣೆ ನನ್ನ 40 ವರ್ಷದ ಕಲಾ ಸೇವೆ ಬದಿಗೊತ್ತುವೆ. ನಿಮ್ಮ ಮನೆಯ ಪಾಯಿಕಾನೆ 1ವರ್ಷ ತೊಳೆದು ನಿಮ್ಮ ಸೇವೆ ಮಾಡುವೆ.' ಎಂದು ಸವಾಲು ಹಾಕಿದ್ದಾರೆ.

  ಗೊಳಾಡುತ್ತಿದ್ದಾರೆ ಒಂದು ಕಾಲದ ಸ್ಟಾರ್ ನಟ | Filmibeat Kannada

  'ಡಬ್ಬಿಂಗ್ ತಂದು ಕನ್ನಡವನ್ನ ಸರ್ವನಾಶ ಮಾಡಿಬಿಟ್ಟರು ಎಂದಿರೋ ಜಗ್ಗೇಶ್ ಪರಭಾಷಿಗರು ಮೆಲ್ಲಗೆ ನಮ್ಮ ಮೇಲೆ ಸವಾರಿ ಶುರುಮಾಡಿದ್ದಾರೆ ಸ್ವಾಭಿಮಾನವಿದ್ದವರು ಈ ಹುನ್ನಾರ ತಡೆಯಿರಿ ನನ್ನ ಕಾಳಜಿ ಮುಂದಿನ ಪೀಳಿಗೆ' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

  English summary
  Kannada Actor Jaggesh Talks About Dubbing.He says Kannada film industry is Destroy from dubbing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X