»   » 'ನೀರ್ ದೋಸೆ' ಚೆನ್ನಾಗಿದ್ರೆ ನೋಡಿ, ಇಷ್ಟಾಗ್ದಿದ್ರೆ ಮಕ್ಉಗ್ದು ಹೋಗಿ!

'ನೀರ್ ದೋಸೆ' ಚೆನ್ನಾಗಿದ್ರೆ ನೋಡಿ, ಇಷ್ಟಾಗ್ದಿದ್ರೆ ಮಕ್ಉಗ್ದು ಹೋಗಿ!

Posted By:
Subscribe to Filmibeat Kannada

'ನೀರ್ ದೋಸೆ' ಟ್ರೈಲರ್ ನಲ್ಲಿ ಇರುವ ಕಾಯಿ, ಹಣ್ಣು, ಸಿಪ್ಪೆ, ಮಾತ್ರೆ ಡೈಲಾಗ್ ಗಳನ್ನು ಕೇಳಿ ಹಲವರು ಮುಸಿ ಮುಸಿ ನಕ್ಕಿದ್ರೆ, ಕೆಲವರು ಕಿವಿ ಮುಚ್ಕೊಂಡು, ಮೂತಿ ತಿರುಗಿಸಿದ್ದಾರೆ.

'ನೀರ್ ದೋಸೆ' ಚಿತ್ರದಲ್ಲಿ ಮಾತು ಕಥೆ ಹಾಗಿದೆ, ಹೀಗಿದೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ['ನೀರ್ ದೋಸೆ'ಯಲ್ಲಿ ಎಂತೆಂಥಾ ಡೈಲಾಗುಗಳಿವೆ ಗೊತ್ತಾ?]

ಬರೀ ಟ್ರೈಲರ್ ನೋಡಿ, ಸಿನಿಮಾ ಚೆನ್ನಾಗಿಲ್ಲ. ಸದಭಿರುಚಿಯ ಚಿತ್ರ ಅಲ್ಲ ಅಂತ ತೀರ್ಪು ನೀಡುವುದು ತಪ್ಪು. 'ನೀರ್ ದೋಸೆ' ಚಿತ್ರದ ಆಶಯ ಏನಿದ್ಯೋ, ಪೂರ್ತಿ ಸಿನಿಮಾ ನೋಡಿದಾಗಲೇ ಗೊತ್ತಾಗೋದು. ಅದಕ್ಕೂ ಮುನ್ನವೇ ಪ್ರಶ್ನೆ ಕೇಳಿ, ಕಾಮೆಂಟ್ ಮಾಡುವವರಿಗೆ ನವರಸ ನಾಯಕ ಜಗ್ಗೇಶ್ ತಮ್ಮ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ. ಮುಂದೆ ಓದಿ.....

ಮಕ್ ಉಗ್ದು ಹೋಗಿ!

''ನೀರ್ ದೋಸೆ' ನೋಡಿ, ಚೆನ್ನಾಗಿದ್ರೆ ಮತ್ತೆ ನೋಡಿ, ಇಷ್ಟ ಆಗ್ದಿದ್ರೆ ಮಕ್ ಉಗ್ದು ಹೋಗಿ'' ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ನಿರ್ಣಯ ಹೇಳುವುದು ಸರಿಯಿಲ್ಲ.!

ಟ್ರೈಲರ್ ಮಾತ್ರ ನೋಡಿ ನಿರ್ಣಯಕ್ಕೆ ಬರುವುದು ಸರಿಯಿಲ್ಲ ಅಂತ ಅಭಿಪ್ರಾಯ ವ್ಯಕ್ತಪಡಿಸಿರುವ ಜಗ್ಗೇಶ್ ಮಾಡಿರುವ ಟ್ವೀಟ್ ಇದು.

ಅಭಿಮಾನಿ ಕೇಳಿದ ಪ್ರಶ್ನೆಗೆ ಜಗ್ಗಿ ಉತ್ತರ

ಮಹಿಳೆ ಧೂಮಪಾನ ಮಾಡುವುದನ್ನು ಹೈಲೈಟ್ ಮಾಡಿರುವುದು ತಪ್ಪು ಎಂಬ ಸಿನಿ ಪ್ರಿಯರೊಬ್ಬರ ಪ್ರಶ್ನೆಗೆ ಜಗ್ಗೇಶ್ ಉತ್ತರ ನೀಡಿರುವುದು ಹೀಗೆ. [ಚಿತ್ರಗಳು : 'ನೀರ್ ದೋಸೆ' ಚಿತ್ರದಲ್ಲಿ ಹರಿಪ್ರಿಯಾ ಹಸಿ ಬಿಸಿ]

ಸಿನಿಮಾ ನೋಡಿದ ಮೇಲೆ ಪಶ್ಚಾತ್ತಾಪ ಪಡುತ್ತಾರೆ.!

''ಮುಖವಾಡದಲ್ಲಿನ ಇನ್ನೊಂದು ಮುಖ ಅನಾವರಣ ಆದಾಗ ಸಿನಿಮಾ ನೋಡಿದ ಬಹುತೇಕರು ಪಶ್ಚಾತ್ತಾಪ ಪಡುತ್ತಾರೆ'' ಅಂತ ಜಗ್ಗೇಶ್ ಟ್ವೀಟಿಸಿದ್ದಾರೆ.

ಹುಚ್ಚ ವೆಂಕಟ್ ಮಾನಸಿಕ ಅಸ್ವಸ್ಥ

'ನೀರ್ ದೋಸೆ' ಚಿತ್ರದ ಬಗ್ಗೆ ಹುಚ್ಚ ವೆಂಕಟ್ ಮಾತನಾಡಿರುವ ಬಗ್ಗೆ ಸಿನಿ ಪ್ರಿಯರೊಬ್ಬರು ಜಗ್ಗೇಶ್ ರವರ ಅಭಿಪ್ರಾಯ ಕೇಳಿದಾಗ, ಅವರಿಂದ ಬಂದ ಪ್ರತಿಕ್ರಿಯೆ ಇದು. [ಹರಿಪ್ರಿಯಾಗೆ ನಾಚಿಕೆ ಆಗಲ್ವಾ? 'ನೀರ್ ದೋಸೆ' ರುಬ್ಬಿದ್ದು ದುಡ್ಡಿಗಾಗಿ?]

ರವಿಚಂದ್ರನ್ ಮೆಚ್ಚಿದ್ದಾರಂತೆ.!

'ನೀರ್ ದೋಸೆ' ಟ್ರೈಲರ್ ಕ್ರೇಜಿ ಸ್ಟಾರ್ ರವಿಚಂದ್ರನ್ ರವರಿಗೆ ಇಷ್ಟವಾಗಿರುವ ಕುರಿತು ಜಗ್ಗೇಶ್ ಮಾಡಿರುವ ಟ್ವೀಟ್ ಇದು.

English summary
Kannada Actor Jaggesh has taken his twitter account to respond to the fans reaction based on 'Neer Dose' trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada