For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗದಲ್ಲಿ ಉ.ಕ ಪ್ರತಿಭೆಗಳಿಗೆ ಈಗಲೂ ಬೆಲೆಯಿದೆ: ಜಶ್ವಂತ್

  By ನಿತಿನ್ ಕಾಗಲಕರ್
  |

  ಇಂದಿನ ಡಿಜಿಟಲ್ ಯುಗದ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಬರುವ ಕಲಾವಿದರು ಕೇವಲ ರಾಜ್ಯದ ರಾಜಧಾನಿ ಬೆಂಗಳೂರಿಗರಿಗೆ ಮಾತ್ರ ಸೀಮಿತವಾಗಿಲ್ಲ, ಪ್ರತಿಭೆಯಿದ್ದರೆ ಎಲ್ಲರೂ ಚಿತ್ರರಂಗದಲ್ಲಿ ಮಿಂಚಬಹುದು ಎಂದು "ದ್ರೋಹಿ" ಚಲನಚಿತ್ರದ ನಾಯಕ ನಟ ಜಶ್ವಂತ್ ಜಾಧವ್ ಹೇಳಿದರು.

  ಅವರು ತಮ್ಮ ತವರೂರು ಹುಬ್ಬಳ್ಳಿಯಲ್ಲಿ ಮಾ.14 ಗುರುವಾರ ಸಂಜೆ ಅಭಿಮಾನಿಗಳು ಆಚರಿಸಿದ ತಮ್ಮ 30ನೇ ಜನ್ಮದಿನದಲ್ಲಿ ಪಾಲ್ಗೊಂಡು ಸಿನಿಮಾ ರಂಗದ ಕನಸು ಕಾಣುವ ತಮ್ಮ ಅಭಿಮಾನಿ ಬಳಗಕ್ಕೆ ಕಿವಿಮಾತು ಹೇಳಿ, ಪ್ರತಿಭೆಯಿದ್ದರೆ ಕಲಾ ಸರಸ್ವತಿ ಕೈ ಬಿಡಲ್ಲ, ಇದಕ್ಕೆ ಉತ್ತರ ಕರ್ನಾಟಕ ಹಳ್ಳಿ ಸೊಗಡಿನ ಗಾಯಕರಾದ ಗಂಗಮ್ಮ, ಹನುಮಂತಪ್ಪ ಸೇರಿದಂತೆ ಅನೇಕ ಕಲಾವಿದರೇ ಸಾಕ್ಷಿ ಎಂದು ಕಿವಿಮಾತು ಹೇಳಿದರು.

  ಕಲಾವಿದರ ಸಂಘದಲ್ಲೇ ಅಂಬರೀಶ್ ಬಿರುದು ತಪ್ಪಾಗಿದೆ

  ಸದ್ಯ ನಾನು ಚಿತ್ರರಂಗದಲ್ಲಿ ಕೆಲಸ ಮಾಡುತ್ತ, ಜನಸೇವೆಗೆ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಈಗಾಗಲೇ ಹುಬ್ಬಳ್ಳಿ ಶಹರದ ಬಿಜೆಪಿ ಪಕ್ಷದ ಕಾರ್ಯದರ್ಶಿಯಾಗಿ ನನ್ನ ಸೇವೆಯನ್ನು ಜನರಿಗಾಗಿ ಮೀಸಲಾಗಿಟ್ಟಿದ್ದೇನೆ ಎಂದರು.

  ಇದೇ ಸಂದರ್ಭದಲ್ಲಿ ಅಭಿಮಾನಿಗಳು ನೀಡಿದ ಸನ್ಮಾನ ಸ್ವೀಕರಿಸಿದ ಜಶ್ವಂತ್, ನನ್ನ ಜನ್ಮದಿನವನ್ನು ಸರಳವಾಗಿ ಆಚರಿಸಿ ಇತರರಿಗೆ ಮಾದರಿಯಂತಾಗುವಂತೆ ಸಹಕರಿಸಿದ ಎಲ್ಲ ಅಭಿಮಾನಿಗಳ ಬಳಗಕ್ಕೆ ನನ್ನ ತುಂಬು ಹೃದಯದ ಅಭಿನಂದನೆ ಎಂದರು.

  ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ತಿರುಪತಿ, ಬಸವರಾಜ್, ಕಿರಣ್,ಕುಮಾರ್, ಅನಿಲ್, ಮಂಜುನಾಥ್, ವಿನಾಯಕ, ರಮೇಶ, ನಾಗರಾಜ್, ಮಂಜು ಪೂಜಾರ್, ಮಂಜು ಯರಗಟ್ಟಿ, ಹನುಮಂತ, ಫಕ್ಕೀರಯ್ಯ, ಮಹಾಂತೇಶ, ಬಸು ಪೂಜಾರ, ಈರಣ್ಣ, ರೆಹಮಾನ್, ಶ್ಯಾಮ್ ಜೋಸೆಫ್, ಕೈಲಾಶ ಅಗ್ನಿಹೋತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಚಿತ್ರರಂಗದ ಹಲವಾರು ಗಣ್ಯರು ನಾಯಕ ನಟ ಜಶ್ವಂತ್ ಅವರಿಗೆ ಶುಭ ಹಾರೈಸಿದರು.

  English summary
  Kannada actor Jaswanth celebrated his birthday with his fans in hubballi yesterday (March 14th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X