Don't Miss!
- Sports
ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್ಪ್ರೀತ್ ಕೌರ್
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ದಿ ವಿಲನ್' ಸಿನಿಮಾ ಶಿವಣ್ಣ ಅಭಿಮಾನಿಗಳಿಗೆ ಖುಷಿ ಕೊಟ್ಟಿಲ್ಲ: ಸುದೀಪ
Recommended Video
ಕಿಚ್ಚ ಸುದೀಪ ಸದ್ಯ 'ಪೈಲ್ವಾನ್' ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಮಾಧ್ಯಮ ಗೋಷ್ಠಿಯಲ್ಲಿ ಭಾಗಿಯಾಗಿದ್ದ ಸುದೀಪ 'ಪೈಲ್ವಾನ್' ಚಿತ್ರದ ಬಗ್ಗೆ ಮಾತನಾಡುತ್ತಲೆ ಮಲ್ಟಿ ಸ್ಟಾರ್ ಚಿತ್ರ ಮಾಡುವ ಬಗ್ಗೆ ಇರುವ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ. ಸುದೀಪ ಅವರ ಈ ಮಾತುಗಳು ಕಿಚ್ಚ ಇನ್ಮುಂದೆ ಸ್ಯಾಂಡಲ್ ವುಡ್ ನಲ್ಲಿ ಮಲ್ಟಿ ಸ್ಟಾರ್ ಸಿನಿಮಾ ಮಾಡುವುದಿಲ್ಲವಾ ಎನ್ನುವ ಅನುಮಾನ ಚಿತ್ರಾಭಿಮಾನಿಗಳನ್ನು ಕಾಡುತ್ತಿದೆ.
"ಇಬ್ಬರು ಸ್ಟಾರ್ ನಟರನ್ನು ಹಾಕಿಕೊಂಡು ಸಿನಿಮಾ ಮಾಡುವುದು ಅಷ್ಟು ಸುಲಭದ ಮಾತಲ್ಲ. ಒಬ್ಬರಿಗೆ ಸ್ವಲ್ಪ ಮೈಲೇಜ್ ಸಿಕ್ಕರು ಅದು ಸರಿ ಎನಿಸುವುದಿಲ್ಲ. ಆದ್ರೆ ಇದೆಲ್ಲ ಗೊತ್ತಿದ್ದು ಸಿನಿಮಾ ಮಾಡಿದ್ರೆ ಸಮಸ್ಯೆ ಆಗುವುದಿಲ್ಲ. ಇಲ್ಲ ಅಂದ್ರೆ ಇದು ತುಂಬ ದೊಡ್ಡ ಸಮಸ್ಯೆ ಆಗುತ್ತೆ" ಎಂದು ಸುದೀಪ ಹೇಳಿದ್ದಾರೆ.
ನಟಿ
ಮಡೋನ್ನಾ
ಜೊತೆ
ಐಸ್
ಕ್ರೀಮ್
ಪಾರ್ಲರ್
ನಲ್ಲಿ
'ಕೋಟಿಗೊಬ್ಬ'
ಸುದೀಪ
"ದಿ ವಿಲನ್ ಸಿನಿಮಾ ಮಡಿದಾಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ" ಎಂದು ಸುದೀಪ ಇದೆ ಸಮಯದಲ್ಲಿ ಹೇಳಿದ್ದಾರೆ. "ಆದ್ರೆ ಹೀಗೆ ಆಗುತ್ತೆ ಅಂತ ಶಿವಣ್ಣ ಆಗಲಿ ಅಥವಾ ಪ್ರೇಮ್ ಅವರಾಗಲಿ ಊಹೆ ಮಾಡಿರಲಿಲ್ಲ. ಕಾಲ್ಪನಿಕವಾಗಿ ಹೀಗೆ ಆಗುತ್ತೆ ಅಂತ ಹೇಳುವುದು ಕಷ್ಟ. ಆದ್ರೆ ಮಲ್ಟಿ ಸ್ಟಾರ್ ಸಿನಿಮಾ ಮಾಡಬೇಕಾದ್ರೆ ಹುಷಾರಾಗಿ ಇರಬೇಕಾಗುತ್ತೆ"
"ಬೇರೆಯವರು ಮಾಡುವ ಸಿನಿಮಾದಲ್ಲಿ ನಮ್ಮ ಅವಶ್ಯಕತೆ ಇದೇ ಅಂದರೆ ಅದೂ 10 ದಿನವಾದರು ಮಾಡುತ್ತೇನೆ, ಅದನ್ನ ಗೆಸ್ಟ್ ಅಪಿಯರೆನ್ಸ್ ಅಂದರು ನನಗೇನು ಅನಿಸುವುದಿಲ್ಲ" ಎಂದು ಸುದೀಪ ಮಲ್ಟಿ ಸ್ಟಾರ್ ಸಿನಿಮಾ ಮಾಡುವ ಬಗ್ಗೆ ಅವರ ಅಭಿಪ್ರಾಯವನ್ನು ಹೇಳಿದ್ದಾರೆ.
ಸ್ಯಾಂಡಲ್ ವುಡ್ ಮಾಣಿಕ್ಯ ಟಾಲಿವುಡ್ ನಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇರುವ 'ಸೈರಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್-3 'ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಆದ್ರೆ ಇನ್ಮುಂದೆ ಸ್ಯಾಂಡಲ್ ವುಡ್ ನಲ್ಲಿ ಮಲ್ಟಿಸ್ಟಾರ್ ಸಿನಿಮಾದಲ್ಲಿ ಕಿಚ್ಚ ಕಾಣಿಸಿಕೊಳ್ಳುತ್ತಾ ಎನ್ನುವುದು ಅನುಮಾನ ಮೂಡಿಸಿದೆ.