twitter
    For Quick Alerts
    ALLOW NOTIFICATIONS  
    For Daily Alerts

    ಮದಕರಿ ನಾಯಕನ ನಾಡಲ್ಲಿ 'ಪೈಲ್ವಾನ್' ಆಡಿಯೋ ರಿಲೀಸ್ ಮಾಡಲು ಕಾರಣ ಇದೆ

    |

    Recommended Video

    Pailvan Movie: ಮದಕರಿ ನಾಯಕನ ನಾಡಲ್ಲಿ 'ಪೈಲ್ವಾನ್' ಆಡಿಯೋ ರಿಲೀಸ್ ಮಾಡಲು ಕಾರಣ ಇದೆ | FILMIBEAT KANNADA

    ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ 'ಪೈಲ್ವಾನ್' ಚಿತ್ರದ ಆಡಿಯೋ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಇದೆ ತಿಂಗಳು 27ಕ್ಕೆ ಅಬ್ಬರಿಸಲಿರುವ 'ಪೈಲ್ವಾನ್' ಹಾಡುಗಳಿಗೆ ವೀರ ಮದಕರಿ ನಾಯಕನ ನಾಡು ಸಾಕ್ಷಿಯಾಗಲಿದೆ. ಆದ್ರೆ 'ಪೈಲ್ವಾನ್' ಚಿತ್ರತಂಡವೇಕೆ ಕೋಟೆ ನಾಡಲ್ಲಿ ಆಡಿಯೋ ರಿಲೀಸ್ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದ್ರೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ.

    ಚಿತ್ರದುರ್ಗ ಕರ್ನಾಟಕದ ಮಧ್ಯಭಾಗದಲ್ಲಿ ಬರುವ ಜಿಲ್ಲೆ. ಅಲ್ಲದೆ ಯಾವಾಗಲು ಸಿನಿಮಾ ಕಾರ್ಯಕ್ರಮಗಳು ಬೆಂಗಳೂರಿನಲ್ಲೆ ನಡೆಯುತ್ತಿರುತ್ತೆ. ಕರ್ನಾಟಕದ ಮಧ್ಯ ಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೆ ರಾಜ್ಯದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳೂ ಭಾಗಿಯಾಗಲು ಸಾಧ್ಯವಾಗುತ್ತೆ. ಹಾಗಾಗಿ ಅಭಿಮಾನಿಗಳ ಅನುಕೂಲಕ್ಕಾಗಿ ದೊಡ್ಡ ಪೀಲ್ಡ್ ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ನಡುವೆ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಚಿತ್ರತಂಡ.

    ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಂದು ಚಿತ್ರದ ಟೈಟಲ್ ಸಾಂಗ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಮನ ತಣಿಸಲಿದೆ ಚಿತ್ರತಂಡ. ಅಂದ್ಹಾಗೆ ಚಿತ್ರ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಆಡಿಯೋ ರಿಲೀಸ್ ಆಗುತ್ತಿದ್ದಂತೆ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಲಿದೆ. ಐದು ಭಾಷೆಯಲ್ಲೂ 'ಪೈಲ್ವಾನ್' ಟ್ರೈಲರ್ ರಿಲೀಸ್ ಮಾಡಲಿದೆ ಚಿತ್ರತಂಡ.

    Kannada actor Kiccha Sudeep starrer Pailwan audio will relese in Chitradurga

    ಈ ಮೊದಲು 'ಪೈಲ್ವಾನ್' 8 ಭಾಷೆಯಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ಬೆಂಗಾಲಿ, ಮರಾಠಿ ಮತ್ತು ಬೋಜ್ ಪುರಿ ಭಾಷೆಯಲ್ಲಿ ರಿಲೀಸ್ ಆಗಬೇಕಿದ್ದ 'ಪೈಲ್ವಾನ್' ಸಿನಿಮಾವನ್ನು ನಿಲ್ಲಿಸಲಾಗಿದೆ. ಸದ್ಯ ಐದು ಭಾಷೆಯಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಸುಮಾರು 2000 ಸಾವಿರ ಚಿತ್ರಮಂದಿರಗಳಲ್ಲಿ ಪೈಲ್ವಾನ್ ಅಬ್ಬರಿಸಲಿದೆ.

    ವಿಶೇಷ ಅಂದ್ರೆ 'ಪೈಲ್ವಾನ್' ನೇಪಾಲ ಮತ್ತು ಭೂತಾನ್ ನಲ್ಲೂ ತೆರೆಗೆ ಬರುತ್ತಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ಚಿತ್ರಕ್ಕೆ ಸೆನ್ಸಾರ್ ಆಗುವ ಸಾಧ್ಯತೆ ಇದೆ. ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದ್ದು ಚಿತ್ರ ಆಗಸ್ಟ್ 29ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ. ಸುದೀಪ್ ಹುಟ್ಟುಹಬ್ಬದ ಸಮಯದಲ್ಲಿ ರಿಲೀಸ್ ಆಗುತ್ತಿರುವುದು ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಲಿದೆ.

    English summary
    Kannada actor Kiccha Sudeep starrer Pailwan audio will relese in Chitradurga. Since Chitradurga is the center of the state so audio is being released there.
    Thursday, July 11, 2019, 12:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X