»   » ಇದಪ್ಪಾ ಕಿಚ್ಚ ಸುದೀಪ್ ಅವರ ಅಭಿಮಾನ ಅಂದ್ರೆ

ಇದಪ್ಪಾ ಕಿಚ್ಚ ಸುದೀಪ್ ಅವರ ಅಭಿಮಾನ ಅಂದ್ರೆ

Posted By:
Subscribe to Filmibeat Kannada

ಇದೇ ನೋಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವಿಶಾಲ ಹೃದಯ ಅಂದರೆ, ಅವರು ತಮ್ಮ ಅಭಿಮಾನಿ ದೇವರುಗಳಿಗೂ ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ ಅನ್ನೋದಕ್ಕೆ ಈ ನಿದರ್ಶನವೇ ಸಾಕ್ಷಿ.

ಹೌದು ಇತ್ತೀಚೆಗೆ ಹಾಸನದ ನಗರದಲ್ಲಿ ಹಲವು ವರ್ಷಗಳಿಂದ ಬೀದಿ ಬೀದಿಯಲ್ಲಿ ಚಿಂದಿ ಆಯುತ್ತಿದ್ದ 33 ವರ್ಷ ವಯಸ್ಸಿನ ಮಂಜುನಾಥ್ ಎಂಬುವವರಿಗೆ ಕೆಲ ದಿನಗಳ ಹಿಂದೆ ಹೃದಯಾಘಾತವಾಗಿತ್ತು. ತಕ್ಷಣ ಅಸ್ವಸ್ಥತನನ್ನು ಆತನ ಜೊತೆಗಿದ್ದ ಸ್ನೇಹಿತರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು.[ಆರಂಭಿಕ ಹಂತದಲ್ಲಿಯೇ ರೆಕಾರ್ಡ್ ಬ್ರೇಕ್ ಮಾಡಿದ 'ಕಲಿ']

Kannada Actor Kichcha Sudeep Proud Of His Fans

ಇದೇ ಸಂದರ್ಭದಲ್ಲಿ ಸುದ್ದಿ ತಿಳಿದ ಕಿಚ್ಚ ಸುದೀಪ್ ಅಭಿಮಾನಿ ಬಳಗದ ಸದಸ್ಯರು ಆತನನ್ನು ಉಳಿಸಲು ಪ್ರಯತ್ನಪಟ್ಟರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಅನಾಥ ವ್ಯಕ್ತಿ ಮೃತಪಟ್ಟಿದ್ದಾರೆ.

ಆ ಅನಾಥ ವ್ಯಕ್ತಿಗೆ ಆಗಾಗ ಫಿಟ್ಸ್ ಬರುತ್ತಿತ್ತಂತೆ, ಇದರಿಂದ ಹೃದಯದ ರೋಗ ಉಲ್ಬಣಗೊಂಡು ಚಿಕಿತ್ಸೆಗೆ ಆತನ ದೇಹ ಸ್ಪಂದಿಸಲಿಲ್ಲ. ಆದ್ದರಿಂದ ಮೃತಪಟ್ಟ ಅನಾಥ ವ್ಯಕ್ತಿ ಮಂಜುನಾಥ ಅವರಿಗೆ ಯಾರೂ ಸಂಬಂಧಿಕರು ಇಲ್ಲದ ಕಾರಣ ಕಿಚ್ಚ ಸುದೀಪ್ ಅಭಿಮಾನಿ ಬಳಗದವರು ನಗರದ ಬಿಟ್ಟಗೌಡನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.[ಪುನೀತ್ ಕಟ್ಟಾ ಅಭಿಮಾನಿಗಳಿಗೆ 'ಕಿಚ್ಚು' ಹಚ್ಚಿಸುವ ಸುದ್ದಿ ಇದು!]

ಇದನ್ನು ತಿಳಿದ ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರ್ ಮೂಲಕ ಅಭಿಮಾನಿಗಳನ್ನುದ್ದೇಶಿಸಿ 'ನಿಮ್ಮಂತಹ ಅಭಿಮಾನಿಗಳನ್ನು ಪಡೆದ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ', ಅವರ ಆತ್ಮಕ್ಕೆ ಶಾಂತಿ ಸಿಗಲಿ, ನಿಮ್ಮ ಈ ಸಮಾಜ ಸೇವೆಯನ್ನು ಕಂಡು ನನಗೆ ಖುಷಿ ಎನಿಸಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಒಟ್ನಲ್ಲಿ ಕಿಚ್ಚನ ಅಭಿಮಾನಿಗಳು ಸುದೀಪ್ ಅವರ ಮೇಲೆ ಎಷ್ಟರಮಟ್ಟಿಗೆ ಪ್ರೀತಿ ಅಭಿಮಾನ ಇಟ್ಟುಕೊಂಡಿದ್ದಾರೋ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ತಮ್ಮ ಅಭಿಮಾನಿಗಳ ಮೇಲೆ ಅಷ್ಟೇ ಪ್ರೀತಿ-ಸ್ನೇಹ, ಅಭಿಮಾನ ಇಟ್ಟುಕೊಂಡಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ.

English summary
Abhinaya Chakravarthy Sudeep is proud of his fans. Kannada Actor Sudeep has taken to his official Twitter page to thank the brave work done by his fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada