»   » ಪ್ರಿಯಾಮಣಿ, ಕಿಚ್ಚ ಸುದೀಪ್ ಗೆ ಆಕ್ಷನ್-ಕಟ್ ಹೇಳ್ತಾರಂತೆ!!

ಪ್ರಿಯಾಮಣಿ, ಕಿಚ್ಚ ಸುದೀಪ್ ಗೆ ಆಕ್ಷನ್-ಕಟ್ ಹೇಳ್ತಾರಂತೆ!!

Posted By:
Subscribe to Filmibeat Kannada

ಮಲ್ಲು ಕುಟ್ಟಿ ಪ್ರಿಯಾಮಣಿ ನಿರ್ದೇಶನ ಮಾಡ್ತಾರಂತೆ, ಅದು ಯಾರಿಗೆ ಗೊತ್ತಾ? ನಮ್ಮ ಕಿಚ್ಚ ಸುದೀಪ್ ಅವರಿಗೆ. ಹೌದು ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಅವರು ತಮ್ಮ ನಿರ್ದೇಶನದಲ್ಲಿ ಕಿಚ್ಚ ಅವರಿಗೆ ಒಂದು ಚಿತ್ರ ಮಾಡುತ್ತಾರಂತೆ.

ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಬಾಲಿವುಡ್ ಹಾಗೂ ತಮಿಳು-ತೆಲುಗು ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಪ್ರಿಯಾಮಣಿ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಬಿಗ್ ಬಾಸ್ 3' ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಸಂದರ್ಭದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

Kannada Actor Kichcha Sudeep to act in movie directed by Actress Priya Mani

'ಬಿಗ್ ಬಾಸ್ 3' ನ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಅಗಮಿಸಿದ್ದ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರು ನಿರ್ದೇಶಕಿಯಾಗುವ ಬಯಕೆ ಇದೆಯೇ?, ಎಂದು ಪ್ರಶ್ನಿಸಿದಾಗ,['ಹುಚ್ಚ ವೆಂಕಟ್ ಸೇನೆ'ಗೆ ಬಲಗಾಲಿಟ್ಟು ಬಂದ ಪ್ರಿಯಾಮಣಿ]

ನಟಿ ಪ್ರಿಯಾಮಣಿ ಅವರು 'ಹೌದು, ನನಗೂ ನಿರ್ದೇಶನದ ಬಗ್ಗೆ ತುಂಬಾ ಆಸಕ್ತಿ ಇದೆ, ನೀವು ಯೆಸ್ ಎಂದರೆ ನಿಮ್ಮೊಂದಿಗೆ ಒಂದು ರೊಮ್ಯಾಂಟಿಕ್-ಕಾಮಿಡಿ ಸಿನಿಮಾ ಮಾಡಬೇಕೆಂದಿದ್ದೇನೆ ಎಂದು ಹಾಸ್ಯಮಯ ಉತ್ತರ ನೀಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಅವರು ನೀವು ಪೇಮೆಂಟ್ ಕೊಟ್ಟರೆ ಓಕೆ ಎಂದು ಹಾಸ್ಯಮಯವಾಗಿಯೇ ಟಾಂಗ್ ನೀಡಿದ್ದಾರೆ.

Kannada Actor Kichcha Sudeep to act in movie directed by Actress Priya Mani

ಎಲ್ಲಾ ಕ್ಷೇತ್ರಗಳಲ್ಲೂ ಕಾಲಾಡಿಸುತ್ತಿರುವ ನಟಿ ಪ್ರಿಯಾಮಣಿ ಅವರು ಇತ್ತೀಚೆಗೆ ಕನ್ನಡದ ಹಲವಾರು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಮಿಂಚಿದ್ದು, ಅಲ್ಲೂ ತಮ್ಮ ಟ್ಯಾಲೆಂಟ್ ಅನ್ನು ಅನಾವರಣ ಮಾಡಿದ್ದಾರೆ.

English summary
Kannada Actress Priyamani has her eyes set on becoming a director. This she revealed on the latest episode of 'Bigg Boss 3'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada