Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಪಾಳಕ್ಕೆ ಹೊಡೆದರು, ಕೀಳಾಗಿ ನೋಡಿದರು, ಆಡಿಕೊಂಡರು ಆದರೂ ಎದ್ದು ಬಂದ್ರು ಕೋಮಲ್
ಸಿನಿಮಾ ಬಣ್ಣದ ಪ್ರಪಂಚ. ಇಲ್ಲಿನ ಬದುಕು ನೀರಿನ ಮೇಲಿನ ಗುಳ್ಳೆಯ ಹಾಗೆ. ಒಬ್ಬ ಕಲಾವಿದನ ಜೀವನ ಯಾವಗ ಬೇಕಾದರೂ ಏಳಬಹುದು, ಯಾವಾಗ ಬೇಕಾದರೂ ಬೀಳಬಹುದು.
ಅದೇ ರೀತಿ ಗೆಲುವು, ಸೋಲು ಎರಡರ ರುಚಿಯನ್ನು ಸವಿದ ನಟ ಕೋಮಲ್, ಈಗ ಮತ್ತೆ ಹೊಸ ಚಿತ್ರ ಬದುಕು ಶುರು ಮಾಡಿದ್ದಾರೆ. ಮೂರು ವರ್ಷಗಳ ಬಳಿಕ 'ಕೆಂಪೇಗೌಡ 2' ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಸಾಕಷ್ಟು ಕಷ್ಟಗಳ ನಡುವೆ ಈ ಸಿನಿಮಾ ಮಾಡಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಮಲ್ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
'ಇಬ್ಬರು ಕೆಂಪೇಗೌಡ ಇದರಲ್ಲಿ ಒರಿಜಿನಲ್ ಯಾರು'?
ಸೀರಿಯಸ್ ನಟನೆಯಿಂದ, ಕಾಮಿಡಿ ನಟನಾಗಿದ್ದು, ಕಾಮಿಡಿಯಿಂದ ಹೀರೋ ಆಗಿದ್ದು, ಸತತ ಸೋಲುಗಳು, ಅವಮಾನ ಹೀಗೆ ತಮ್ಮ ಮನಸ್ಸಿನ ಮಾತನ್ನು ಕೋಮಲ್ ಹಂಚಿಕೊಂಡರು. ಮುಂದೆ ಓದಿ..

17 - 18 ವರ್ಷ ಇರುವಾಗಲೇ ಚಿತ್ರರಂಗಕ್ಕೆ ಬಂದೆ
''17 - 18 ವರ್ಷ ಇರುವಾಗಲೇ ನಾನು ಚಿತ್ರರಂಗಕ್ಕೆ ಬಂದೆ. ಮೊದ ಮೊದಲು ಸೀರಿಯಸ್ ಪಾತ್ರಗಳು ಬಂತು. ನಾಲ್ಕೈದು ಸಿನಿಮಾ ವಿಲನ್ ಪಾತ್ರ ಮಾಡಿದೆ. ಆಮೇಲೆ ಅವಕಾಶಗಳೆ ಇಲ್ಲದಂತೆ ಆಗಿತ್ತು. ಬಳಿಕ ಮೂರ್ನಾಲ್ಕು ವರ್ಷಗಳ ನಂತರ 'ಕುರಿಗಳು ಸಾರ್ ಕುರಿಗಳು' ಎಂಬ ಸಿನಿಮಾ ಶುರು ಆಯ್ತು. ಆಗ ನನಗೆ ಒಂದು ಪಾತ್ರ ಸಿಕ್ತು.'' - ಕೋಮಲ್, ಹಾಸ್ಯ ನಟ
ವರ್ಷಗಳ ಬಳಿಕ ಕೋಮಲ್ ಕಮ್ ಬ್ಯಾಕ್ : ತಮ್ಮನಿಗೆ ಜೈ ಎಂದ ಜಗ್ಗೇಶ್

ಕಾಮಿಡಿ ಅಂದರೇ ಏನು ಅಂತಲೇ ಗೊತ್ತಿರಲಿಲ್ಲ
''ಕುರಿಗಳು ಸಾರ್ ಕುರಿಗಳು' ಚಿತ್ರಕ್ಕೂ ಮುಂಚೆ ಕಾಮಿಡಿ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಮೊದಲ ದಿನ ಶೂಟಿಂಗ್ ನಲ್ಲಿ ಸಣ್ಣ ದೃಶ್ಯಕ್ಕೆ ಐದಾರು ಟೇಕ್ ತೆಗೆದುಕೊಂಡೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ತುಂಬ ಕೋಪ ಮಾಡಿಕೊಂಡರು. ಎಲ್ಲ ನಟರು, ನಟಿಯರು ಇದ್ದರು. ಕೊನೆಗೆ ನಟನೆ ಮಾಡಲು ಬರಲ್ಲ ಓಡಿಸಿ ಎಂದು ಹೇಳಿದ್ದರು. ಆ ಕ್ಷಣ ಸಿಕ್ಕಾಪಟ್ಟೆ ಬೇಸರ ಆಯ್ತು.'' - ಕೋಮಲ್, ಹಾಸ್ಯ ನಟ

ಕಪಾಳಕ್ಕೆ ಹೊಡೆದು ಬುದ್ದಿ ಹೇಳಿದ ದೊಡ್ಡಣ್ಣ
''ಆ ಸಿನಿಮಾದಲ್ಲಿ ದೊಡ್ಡಣ್ಣ ಕೂಡ ಇದ್ದರು. ಜಗ್ಗೇಶಣ್ಣನ ಜೊತೆಗೆ ಅವರು ಸಿನಿಮಾ ಮಾಡಿದ್ದರಿಂದ ನನಗೂ ಪರಿಚಯ ಇದ್ದರು. ಆಗ ನನ್ನನ್ನು ಕರೆದು ಕಪಾಳಕ್ಕೆ ಹೊಡೆದರು. ನಿಮ್ಮ ಅಣ್ಣ ಅಂತಹ ದೊಡ್ಡ ಕಲಾವಿದ. ನೀನು ಕಾಮಿಡಿ ಮಾಡಲು ಬರದೆ ಇದ್ದ ಮೇಲೆ ಯಾಕೆ ಬಂದೆ ಎಂದರು. ದೊಡ್ಡಣ್ಣ ಹೇಳಿದ ಮೇಲೆ ಮನಸ್ಸು ಬಿಚ್ಚಿ ಆಕ್ಟ್ ಮಾಡಿದೆ. ಆ ಸಿನಿಮಾ ಬಿಡುಗಡೆ ಆದ ಮೇಲೆ ನಾನು ಒಂದೇ ದಿನಕ್ಕೆ ಸ್ಟಾರ್ ಆದೆ.'' - ಕೋಮಲ್, ಹಾಸ್ಯ ನಟ

ಒಂದು ದಿನಕ್ಕೆ ಮೂರು ಲಕ್ಷ ಸಂಭಾವನೆ
''ನಂತರ ಕಾಮಿಡಿ ಮಾಡಿ ಮಾಡಿ ಒಂದು ದಿನಕ್ಕೆ ಮೂರು ಲಕ್ಷ ಸಂಭಾವನೆ ಪಡೆಯುವ ಮಟ್ಟಿಗೆ ಬೆಳೆದೆ. ಆ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಮೊದಲ ನಟ ಆಗಿದ್ದೆ. ಸ್ವಲ್ಪ ಅವಕಾಶಗಳು ಕಡಿಮೆ ಆದಾಗ, 'ಗರಗಸ' ಎನ್ನುವ ಸಿನಿಮಾದಲ್ಲಿ ಹೀರೋ ಆಗಿ ಮಾಡಿದೆ. ಅದು ಹಿಟ್ ಆಯ್ತು. ಆದರೆ, ಅದರ ನಂತರ ಕೆಲವು ಸಿನಿಮಾಗಳು ಚೆನ್ನಾಗಿ ಹೋಗಲಿಲ್ಲ.'' - ಕೋಮಲ್, ಹಾಸ್ಯ ನಟ

ನನ್ನನ್ನು ಕೀಳಾಗಿ ನೋಡಲು ಶುರು ಮಾಡಿದರು
''ಸಿನಿಮಾಗಳು ಓಡದೆ ಇದ್ದಾಗ, ನನ್ನನ್ನು ಕೀಳಾಗಿ ನೋಡಲು ಶುರು ಮಾಡಿದರು. ಒಂದು ತಮಿಳು ಸಿನಿಮಾ ಶುರು ಮಾಡಿ ನಂತರ ನನ್ನನ್ನು ರಿಜೆಕ್ಟ್ ಮಾಡಿದರು. ಆಗ ನಾನು ತೂಕ ಕಡಿಮೆ ಮಾಡಬೇಕು ಎಂದು ನಿರ್ಧಾರ ಮಾಡಿದೆ. ಎರಡು ವರ್ಷ ತಯಾರಿ ಮಾಡಿಕೊಂಡೆ. ಒಮ್ಮೆ ಶಂಕರೇ ಗೌಡ ಅವರ ಬರ್ತ್ ಡೇ ಪಾರ್ಟಿಗೆ ಹೋದಾಗ ಎಲ್ಲರೂ ನನ್ನನ್ನು ನೋಡಿ ಶಾಕ್ ಆದರು. ಅವತ್ತೇ 'ಕೆಂಪೇಗೌಡ 2' ಸಿನಿಮಾ ಮಾಡುವ ನಿರ್ಧಾರ ಮಾಡಿದ್ವಿ.'' - ಕೋಮಲ್, ಹಾಸ್ಯ ನಟ

ಕಾಮಿಡಿ ಪೀಸ್ ಗೆ ಇದು ಬೇಕಾ
''ಕೆಂಪೇಗೌಡ 2 ಚಿತ್ರದ ಒಂದು ಟೀಸರ್ ಶೂಟ್ ಮಾಡಿದ್ವಿ. ಅದು ಎರಡು ಮಿಲಿಯನ್ ವ್ಯೂವ್ ಆಯ್ತು. ಆದರೆ, 80% ರಷ್ಟು ಜನ ಕಾಮಿಡಿ ಪೀಸ್ ಗೆ ಇದು ಬೇಕಾ ಎಂದು ಆಡಿಕೊಂಡರು. ನಾನು ಅದನ್ನೇ ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ. ಒಬ್ಬ ಕಲಾವಿದನಿಗೆ ಯಾವ ಪಾತ್ರ ಆದರೆ ಏನು?. ಹಿಂದೆ, 'ತವರಿಗೆ ಬಾ ತಂಗಿ' ಚಿತ್ರದಲ್ಲಿ ನಾನು ಸೆಂಟಿಮೆಂಟ್ ಪಾತ್ರ ಮಾಡಿ ರಾಜ್ಯ ಪ್ರಶಸ್ತಿ ತೆಗೆದುಕೊಂಡಿದೆ.'' ಎಂದು ಹಳೆಯ ದಿನಗಳನ್ನು ನೆನೆದರು.