For Quick Alerts
  ALLOW NOTIFICATIONS  
  For Daily Alerts

  ಹೃದಯಾಘಾತ: 'ನೆನಪಿನಂಗಳ'ಕ್ಕೆ ಜಾರಿದ ನಟ ಹೇಮಂತ್

  By Srinath
  |

  ಬೆಂಗಳೂರು, ಜುಲೈ 3: ಯುವ ನಟ ಹೇಮಂತ್ ಅವರು ಹೃದಯಾಘಾತದಿಂದ ಇಂದು ಬೆಳಗಿನ ಜಾವ ನಿಧನ ಹೊಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ನೆನಪಿನಂಗಳ' ಚಿತ್ರದಲ್ಲಿ ಅವರು ನಾಯಕನಟನಾಗಿದ್ದರು. ಅವರಿಗೆ 27 ವರ್ಷ ವಯಸ್ಸಾಗಿತ್ತು.

  ನಟ ಹೇಮಂತ್ ಅವರಿಗೆ ಹೆಬ್ಬಾಳದಲ್ಲಿರುವ ಸ್ವಂತದ ಜಿಮ್ ಸೆಂಟರ್ ನಲ್ಲಿ ಅಭ್ಯಾಸನಿರತರಾಗಿದ್ದಾಗ ಸೋಮವಾರ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 3.30ರಲ್ಲಿ ಕೊನೆಯುಸಿರೆಳೆದಿದ್ದಾರೆ.

  ಇಂದು ಸಂಜೆ ದೊಡ್ಡಬಳ್ಳಾಪುರದಲ್ಲಿ ಹೇಮಂತ್ ಅಂತ್ಯಕ್ರಿಯೆ ನೆರವೇರಲಿದೆ.

  ತಮ್ಮ ಮೊದಲ ಚಿತ್ರ 'ನೆನಪಿನಂಗಳ' ನಂತರ ಹೇಮಂತ್ ಅವರು ಮತ್ತೊಂದು ದೊಡ್ಡ ಬ್ಯಾನರ್‌ನ ಚಿತ್ರಕ್ಕೆ ಸಿದ್ಧತೆ ನಡೆಸಿದ್ದರು. ಹೇಮಂತ್ ಅವರು 'ನೆನಪಿನಂಗಳ' ಚಿತ್ರದ ನಿರ್ಮಾಪಕ, ದೊಡ್ಡಬಳ್ಳಾಪುರ ನಗರಸಭೆಯ ಮಾಜಿ ಸದಸ್ಯ ಜಿ ರಾಮಕೃಷ್ಣ ಅವರ ಪುತ್ರ.

  English summary
  Banaglore Kannada actor Nenapinangala Hemanth dead heart attack. The Sandalwood Actor Hemanth of age 27 died today morning at 3:15am in M S Ramaiah hospital in Banglore.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X