For Quick Alerts
  ALLOW NOTIFICATIONS  
  For Daily Alerts

  ನೈಜ ಘಟನೆ ಆಧಾರಿತ ಚಿತ್ರಕ್ಕೆ ನಾಯಕನಾದ ನಿಖಿಲ್ ಕುಮಾರ್

  |
  Nikhil Kumar next movie will be Based on real story.Directed by Hebbuli fame 'Krishna'

  ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರ್ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ. 'ಸೀತಾರಾಮ ಕಲ್ಯಾಣ' ಸಿನಿಮಾದ ನಂತರ ನಿಖಿಲ್ ಯಾರ ನಿರ್ದೇಶನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. 'ಪೈಲ್ವಾನ್' ನಿರ್ದೇಶಕರ ಜೊತೆ ಸೇರಿಕೊಳ್ಳುವ ಮೂಲಕ ಇದ್ದ ಕುತೂಹಲಕ್ಕೆ ತೆರೆ ಎಳೆದಿದ್ದರು. ಆದರೆ ಯಾವ ಸಿನಿಮಾ, ಯಾವಾಗ ಸೆಟ್ಟೇರಲಿದೆ ಎನ್ನುವ ಮಾಹಿತಿ ಬಹಿರಂಗವಾಗಿರಲಿಲ್ಲ.

  ಸದ್ಯ ಬಂದ ಮಾಹಿತಿ ಪ್ರಕಾರ ನಿರ್ದೇಶಕ ಕೃಷ್ಣ ನೈಜ ಘಟನೆ ಆಧಾರಿತ ಕಥೆಯನ್ನು ಕೈಗೆತ್ತಿಕೊಂಡಿದ್ದಾರಂತೆ. ಆದರೆ ಯಾವ ತರಹದ ಸಿನಿಮಾ ಎನ್ನುವ ಮಾಹಿತಿ ಬಹಿರಂಗವಾಗಿಲ್ಲ. ಕೃಷ್ಣ ಇದುವರೆಗು ಮಾಡಿದ ಸಿನಿಮಾಗಳಿಗಿಂದ ತುಂಬ ವಿಭಿನ್ನವಾದ ಸಿನಿಮಾ ಇದಾಗಿದೆಯಂತೆ. ಚಿತ್ರದಲ್ಲಿ ನಿಖಿಲ್ ಗೆಟಪ್ ಕೂಡ ಸಂಪೂರ್ಣವಾಗಿ ಬದಲಾಗಲಿದೆಯಂತೆ. ವಿಭಿನ್ನವಾದ ಲುಕ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೆ ನಿಖಿಲ್ ಪಾತ್ರಕ್ಕೆ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ.

  'ಪೈಲ್ವಾನ್' ಸಿನಿಮಾಗೆ ಹಣಕಾಸಿನ ಸಹಾಯ ಮಾಡಿದ್ದರು ಈ ಇಬ್ಬರು ನಟರು'ಪೈಲ್ವಾನ್' ಸಿನಿಮಾಗೆ ಹಣಕಾಸಿನ ಸಹಾಯ ಮಾಡಿದ್ದರು ಈ ಇಬ್ಬರು ನಟರು

  ಇನ್ನು ವಿಶೇಷ ಅಂದರೆ ಚಿತ್ರ ಮುಂದಿನ ವರ್ಷ ಜನವರಿಯಲ್ಲಿ ಸೆಟ್ಟೇರಲಿದೆಯಂತೆ. ಸದ್ಯ ಚಿತ್ರತಂಡ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ನಿಖಿಲ್ ಮತ್ತು ನಿರ್ದೇಶಕ ಕೃಷ್ಣ ಬಿಟ್ಟರೆ ಚಿತ್ರದ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

  ಕೃಷ್ಣ ಮತ್ತು ನಿಖಿಲ್ ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. ಈ ಮೊದಲು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ '2.0' ಸಿನಿಮಾ ಲೈಕಾ ಸಂಸ್ಥೆಯಡಿ ನಿರ್ಮಾಣವಾಗಿದೆ, ಇನ್ನು ಕಮಲ್ ಹಾಸನ್ ಅಭಿನಯದ 'ಇಂಡಿಯನ್-2 'ಸಿನಿಮಾ ಲೈಕಾ ಬ್ಯಾನರ್ ನಲ್ಲಿ ತಯಾರಾಗುತ್ತಿದೆ. ಸದ್ಯ ಕೃಷ್ಣ ಮತ್ತು ನಿಖಿಲ್ ಸಿನಿಮಾದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

  English summary
  Kannada actor Nikhil Kumar will hero for real Based story. This movie is directed by Hebbuli fame Krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X