For Quick Alerts
  ALLOW NOTIFICATIONS  
  For Daily Alerts

  ನಟ ನಿರಂಜನ್ ಶೆಟ್ಟಿ ಸಖತ್ 'ಜಗತ್ ಖಿಲಾಡಿ' ಕಣ್ರೀ....

  By Suneetha
  |

  'ಕೇಸ್ ನಂ.18/9' ಸಿನಿಮಾ ನೋಡಿರುವ ಕನ್ನಡ ಸಿನಿಪ್ರೀಯರು ನಟ ನಿರಂಜನ್ ಶೆಟ್ಟಿ ಅವರ ನಟನೆಯನ್ನು ಖಂಡಿತ ಮರೆಯಲು ಸಾಧ್ಯವಿಲ್ಲ. ತದನಂತರ 'ಪೈಪೋಟಿ', 'ರಣಕಹಳೆ, 'ಎವರೆಸ್ಟ್', 'ಸಿಗ್ರಿ ನಿಮ್ ಜೊತೆ ಮಾತಾಡಬೇಕು' ಹೀಗೆ ಹಲವಾರು ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದ ನಟ ನಿರಂಜನ್ ಶೆಟ್ಟಿ ಅವರು ಮತ್ತೆ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.

  'ಕೇಸ್ ನಂ.18/9' ಚಿತ್ರದ ನಂತರ ಮತ್ತೆ ಈ ಬಾರಿ ಕೂಡ ನಿರಂಜನ್ ಅವರು ರೀಮೇಕ್ ಮೊರೆ ಹೋಗಿದ್ದಾರೆ. ತಮಿಳು ಚಿತ್ರ 'ಸತುರಂಗ ವೆಟ್ಟೈ' (Sathuranga Vettai) ಕನ್ನಡಕ್ಕೆ 'ಜಗತ್ ಖಿಲಾಡಿ' ಎಂಬ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ನಿರಂಜನ್ ಅವರು ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.['ಚಾಂಪಿಯನ್' ಆಗಲು ಹೋಗಿ ತಾಚಿಕೊಂಡ 'ಪೈಪೋಟಿ']

  'ಜಗತ್ ಖಿಲಾಡಿ' ಈ ತಿಂಗಳಾಂತ್ಯಕ್ಕೆ ಮುಹೂರ್ತ ನೆರವೇರಿಸಿಕೊಂಡು, ಸೆಟ್ಟೇರಲಿದೆ. ಚಿತ್ರಕ್ಕೆ ಧೀರೆಂದ್ರ ಮತ್ತು ಸಾಧಿತನ್ ಎಂಬುವವರು ಆಕ್ಷನ್-ಕಟ್ ಹೇಳಲಿದ್ದು, ರಮೇಶ್ ಬಾಬು ಅವರು ಬಂಡವಾಳ ಹೂಡಲಿದ್ದಾರೆ. ನಟ ರಂಗಾಯಣ ರಘು ಅವರು ನಿರಂಜನ್ ಅವರ ಜೊತೆ ಬಹಳ ಪ್ರಮುಖ ಪಾತ್ರ ವಹಿಸಲಿದ್ದಾರೆ.

  Kannada Actor Niranjan Shetty's next movie is 'Jagath Khiladi'

  'ಜಾಲಿಡೇಸ್' ಚಿತ್ರದಲ್ಲಿ ಬಹಳ ವಿಭಿನ್ನ ಪಾತ್ರ ಮಾಡಿ ಗಮನ ಸೆಳೆದಿದ್ದ ನಟ ನಿರಂಜನ್ ಅವರು, ಜಗತ್ ಖಿಲಾಡಿ' ಚಿತ್ರದಲ್ಲಿ 'ಗಾಂಧಿಬಾಬು' ಎಂಬ ಪಾತ್ರ ಪೋಷಣೆ ಮಾಡಲಿದ್ದಾರೆ. ಇನ್ನು ಈ ಸಿನಿಮಾ ತಮಿಳು ರೀಮೇಕ್ ಅದ್ರೂ ಕೂಡ ಯಥವತ್ತಾಗಿ ಅದನ್ನೇ ಫ್ರೇಂ ಟು ಫ್ರೇಂ ಕಾಪಿ ಮಾಡಲಾಗಿಲ್ಲವಂತೆ. ಬದ್ಲಾಗಿ ಆ ಚಿತ್ರದ ಸ್ಫೂರ್ತಿ ಅಷ್ಟೇ ಅನ್ನೋದು ಚಿತ್ರತಂಡದ ಅಭಿಪ್ರಾಯ.

  ಅಂದಹಾಗೆ ಈ ಹಿಂದೆ ನವರಸ ನಾಯಕ ಜಗ್ಗೇಶ್ ಅವರ ನಟನೆಯ 'ಜಗತ್ ಖಿಲಾಡಿ' ಎಂಬ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಇದೀಗ ಬಹಳ ಅದ್ಧೂರಿ ಬಜೆಟ್ ನಲ್ಲಿ ಮತ್ತೆ ಅದೇ ಹೆಸರಿನಲ್ಲಿ ಸಿನಿಮಾ ಮೂಡಿಬರುತ್ತಿದೆ.

  English summary
  Kannada Actor Niranjan Shetty is back with a new film after 'Paipoti'. This time the actor Niranjan will be seen in the remake of Tamil hit 'Sathuranga Vettai'. The Kannada version is titled as 'Jagath Khiladi' and will be launched in the month end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X