»   » ಡೈನಾಮಿಕ್ ಪ್ರಿನ್ಸ್ 'ಅರ್ಜುನ' ನಿಗೆ ಸೆನ್ಸಾರ್ ಆಯ್ತು

ಡೈನಾಮಿಕ್ ಪ್ರಿನ್ಸ್ 'ಅರ್ಜುನ' ನಿಗೆ ಸೆನ್ಸಾರ್ ಆಯ್ತು

Posted By:
Subscribe to Filmibeat Kannada

'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ಅವರ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಅರ್ಜುನ' ಚಿತ್ರೀಕರಣ ಪೂರ್ತಿಯಾಗಿ ಬಿಡುಗಡೆ ಹಂತಕ್ಕೆ ಬಂದಿದ್ದು, ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸಿದೆ.

ಸುಮಾರು 145 ನಿಮಿಷಗಳ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡುವ ಮೂಲಕ ಚಿತ್ರ ಬಿಡುಗಡೆ ಮಾಡಲು ಅಸ್ತು ಎಂದಿದೆ.

Kannada Actor Prajwal devaraj starrer 'Arjuna' gets U/A certificate

ನಿರ್ದೇಶಕ ಪಿ.ಸಿ ಶೇಖರ್ ಅವರು ಆಕ್ಷನ್-ಕಟ್ ಹೇಳಿರುವ 'ಅರ್ಜುನ' ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ತೆರೆಯ ಮೇಲೆ ಕಮಾಲ್ ಮಾಡಲಿದ್ದಾರೆ. [ತಪ್ಪಿಗೆ ಶಿಕ್ಷೆ ಕೊಡೋಕೆ ಬರ್ತಾವ್ನೆ 'ಅರ್ಜುನ']

ಈ ಮೊದಲು ಪ್ರಜ್ವಲ್ ದೇವರಾಜ್ ಅವರ 'ಅರ್ಜುನ' ಚಿತ್ರ 'ಕ್ಷತ್ರಿಯ' ಎಂದು ಟೈಟಲ್ ಆಗಿತ್ತು ತದನಂತರ ನಿರ್ದೇಶಕ ಪಿ.ಸಿ ಶೇಖರ್ ಅವರು 'ಅರ್ಜುನ' ಎಂದು ಬದಲಾವಣೆ ಮಾಡಿದರಂತೆ.

ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಅವರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಜೊತೆಗೆ ಕುಮಾರನ್ ಸಿನಿಮಾಟೋಗ್ರಫಿ 'ಅರ್ಜುನ'ನಿಗಿದೆ.

'ಅರ್ಜುನ' ನನ್ನು ಸೆಪ್ಟೆಂಬರ್ 4 ಕ್ಕೆ ತೆರೆ ಮೇಲೆ ತರಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ 4 ರಂದು ದುನಿಯಾ ವಿಜಯ್ ಅವರ 'ಆರ್ ಎಕ್ಸ್ ಸೂರಿ' ಬಿಡುಗಡೆಯಾಗುತ್ತಿರುವುದರಿಂದ ಸೆಪ್ಟೆಂಬರ್ 11 ಅಥವಾ 18 ರಂದು ಬಿಡುಗಡೆ ಮಾಡಲು ನಿರ್ದೇಶಕ ಪಿ.ಸಿ ಶೇಖರ್ ನಿರ್ಧರಿಸಿದ್ದಾರೆ.

Kannada Actor Prajwal devaraj starrer 'Arjuna' gets U/A certificate

ಇದುವರೆಗೂ ಹೆಚ್ಚಿನ ಚಿತ್ರಗಳಲ್ಲಿ ಚಾಕಲೇಟ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪ್ರಜ್ವಲ್ ದೇವರಾಜ್ 'ಅರ್ಜುನ' ಚಿತ್ರದಲ್ಲಿ ರೋಮ್ಯಾಂಟಿಕ್ ಜೊತೆಗೆ ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಇನ್ನೂ ಆಕ್ಷನ್-ಥ್ರಿಲ್ಲರ್ ಚಿತ್ರದಲ್ಲಿ ಅಪ್ಪ ಮಗನ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಲಿದೆ.

ಚಿತ್ರದಲ್ಲಿ ಮಲ್ಲು ಕುಟ್ಟಿ ಭಾಮಾ ಅವರು 'ಅರ್ಜುನ'ನ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ಶೀತಲ್ ಶೆಟ್ಟಿ ಮಿಂಚಿದ್ದಾರೆ.

ಅದೇನೇ ಇರಲಿ ತುಂಬಾ ಚಿತ್ರಗಳು ಮಕಾಡೆ ಮಲಗಿದ ನಂತರ ಇದೀಗ 'ಅರ್ಜುನ'ನ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವ ಡೈನಾಮಿಕ್ ಪ್ರಿನ್ಸ್ ಗೆ 'ಅರ್ಜುನ' ಕೈ ಹಿಡಿದು ಮೇಲೆತ್ತುತ್ತಾನ ಅಂತ ಚಿತ್ರ ಬಿಡುಗಡೆಯಾದ ಮೇಲೆ ನೋಡಬೇಕಿದೆ.

English summary
Kannada Movie 'Arjuna' gets U/A certificate from the Censor Board. 'Arjuna' features Kannada actor Prajwal devaraj, Actress Bhama, in the lead role. The movie is directed by PC Shekhar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada