For Quick Alerts
  ALLOW NOTIFICATIONS  
  For Daily Alerts

  ಬೈ ಎಲೆಕ್ಷನ್ ಪ್ರಚಾರಕ್ಕೆ ಪ್ರಥಮ್ ಗೆ ದೊಡ್ಡ ಮೊತ್ತ ಆಫರ್

  |
  ಹಣದ ಅವಶ್ಯಕತೆ ಇದ್ರೂ ಪ್ರಥಮ್ ಪ್ರಚಾರಕ್ಕೆ ಯಾಕೆ ಹೋಗಿಲ್ಲ? | FILMIBEAT KANNADA

  ಕರ್ನಾಟಕದಲ್ಲಿ ಉಪ ಚುನಾವಣಾ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿದೆ. ಡಿಸೆಂಬರ್ 5 ರಂದು ಕರ್ನಾಟಕದಲ್ಲಿ ಉಪಚುನಾವಣೆ ನಡೆಯಲಿದೆ. ಅನರ್ಹರಾಗಿದ್ದ ಹದಿನೈದು ವಿಧಾನಸಭೆ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆಯುತ್ತಿದ್ದು, ಎಲ್ಲಾ ಕಡೆ ಅಬ್ಬರದ ಪ್ರಚಾರ ಸಾಗಿದೆ.

  ಈಗಾಗಲೆ ಬೈ ಎಲೆಕ್ಷನ್ ಅಖಾಡಕ್ಕೆ ಸ್ಟಾರ್ ನಟರ ಎಂಟ್ರಿಯಾಗಿದೆ. ತೆಲುಗು ಹಾಸ್ಯ ನಟ ಬ್ರಹ್ಮಾನಂದಂ ಸೇರಿದಂತೆ ಕನ್ನಡ ಹಾಸ್ಯ ನಟ ಸಾಧುಕೋಕಿಲಾ, ನಟಿ ಹರಿಪ್ರಿಯಾ ಮತ್ತು ಹರ್ಷಿಕಾ ಪೂಣಚ್ಚ ಸೇರಿದಂತೆ ಅನೇಕ ಕಲಾವಿದರು ಪ್ರಚಾರ ಅಖಾಡಕ್ಕೆ ಧುಮುಕಿದ್ದಾರೆ.

  ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಬ್ರಹ್ಮಾನಂದಂ ಮತ್ತು ಸಾಧುಕೋಕಿಲಾಬೈ ಎಲೆಕ್ಷನ್ ಅಖಾಡಕ್ಕೆ ಧುಮುಕಿದ ಬ್ರಹ್ಮಾನಂದಂ ಮತ್ತು ಸಾಧುಕೋಕಿಲಾ

  ಪ್ರಚಾರದ ಅಬ್ಬರದ ನಡುವೆಯೂ ನಟ ಪ್ರಥಮ್ ಹೇಳಿಕೆ ಈಗ ವೈರಲ್ ಆಗಿದೆ. ಬೈ ಎಲೆಕ್ಷನ್ ಪ್ರಚಾರಕ್ಕೆ ನಟ ಪ್ರಥಮ್ ಗೆ ದೊಡ್ಡ ಮೊತ್ತಕ್ಕೆ ಆಫರ್ ಮಾಡಿದ್ರಂತೆ. ಆದರೆ ಪ್ರಚಾರಕ್ಕೆ ಹೋಗಲು ಪ್ರಥಮ್ ಹಿಂದೇಟು ಹಾಕಿದ್ದಾರೆ. ಹಣದ ಅವಶ್ಯಕತೆ ಇದ್ದರು ಹೋಗಿಲ್ಲ ಯಾಕೆ ಎನ್ನುವುದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  "ಬೈ ಎಲೆಕ್ಷನ್ ಪ್ರಚಾರ ಮಾಡೋಕೆ ನನ್ನ ಭಾಷಣಕ್ಕೆ ದೊಡ್ಡ ಮೊತ್ತಕ್ಕೆ ನನಗೆ ಆಫರ್ ಬಂತು. ಯಾರಿಗೂ ಬೇಡವಾದ ಚುನಾವಣೆ ಇದು‌. ವೈಯುಕ್ತಿಕ ಹಿತಾಸಕ್ತಿಗೆ ನಡೀತಿರೋ ಚುನಾವಣೆ. ನನಗೆ ದುಡ್ಡಿನ ಅಗತ್ಯ ಇದ್ರು, ಯಾಕೋ ಮನಸ್ಸು ಒಪ್ಪಲಿಲ್ಲ. 1 ಕೆಲಸ ಮಾಡಿ. ಅದೇ ಓಟ್ ಅನ್ನು ಪ್ರಜಾಕೀಯಕ್ಕೆ ಹಾಕಿ, ಬುದ್ಧಿ ಬರಲಿ ರಾಜಕಾರಣಿಗಳಿಗೆ" ಎಂದು ಹೇಳಿದ್ದಾರೆ.

  ವೈಯುಕ್ತಿಕ ಹಿತಾಸಕ್ತಿಗೆ ನಡೀತಿರೋ ಚುನಾವಣೆ. ಇದು ಯಾರಿಗೂ ಬೇಡವಾಗಿದೆ. ಹಾಗಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕಿಯಕ್ಕೆ ಮತ ಹಾಕಿ ಎಂದು ಕೇಳಿಕೊಂಡಿದ್ದಾರೆ. ಆಗಲಾದರು ರಾಜಕಾರಣಿಗಳಿಗೆ ಬುದ್ದಿ ಬರುತ್ತಾ ಎಂದು ನೋಡೋಣ ಪ್ರಥಮ್ ಹೇಳಿದ್ದಾರೆ.

  English summary
  Kannada actor Pratham said that vote for Prajakiya. Kannada actor pratham is not campaign for by election.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X