For Quick Alerts
  ALLOW NOTIFICATIONS  
  For Daily Alerts

  'ಮಸಲ್ ಪ್ಲಾನೆಟ್'ಗೆ ನೀವೂ ಬನ್ನಿ ನಿಮ್ಮವರನ್ನು ಕರೆತನ್ನಿ: ಪ್ರೇಮ್

  By Suneetha
  |

  ಗಾಂಧಿನಗರದ ಎಲ್ಲಾ ನಟರಿಗೂ ಬಾಡಿ ಬಿಲ್ಡ್ ಮಾಡುವುದರಲ್ಲಿ ಫೇಮಸ್ ಆಗಿರುವ ಪಾನಿಪೂರಿ ಕಿಟ್ಟಿ ಅವರು ವಿದ್ಯಾರಣ್ಯಪುರದಲ್ಲಿ 'ಮಸಲ್ ಪ್ಲಾನೆಟ್' ಎಂಬ ಹೊಸ ಜಿಮ್ ಒಂದನ್ನು ಇದೇ ತಿಂಗಳ 24 ನೇ ತಾರೀಖಿನಂದು ಓಪನ್ ಮಾಡುತ್ತಿದ್ದಾರೆ ಎಂದು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೆ.

  ಸ್ಯಾಂಡಲ್ ವುಡ್ ನ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್, ರಾಕಿಂಗ್ ಸ್ಟಾರ್ ಯಶ್, ಲವ್ಲಿ ಸ್ಟಾರ್ ಪ್ರೇಮ್ ಮುಂತಾದವರಿಗೆ ಬಾಡಿ ಬಿಲ್ಡ್ ಮಾಡಲು ತರಬೇತಿ ನೀಡಿರುವ ಬಾಡಿ ಬಿಲ್ಡರ್ ಕೋಚ್ ಪಾನಿ ಪೂರಿ ಕಿಟ್ಟಿ ಅವರ 'ಮಸಲ್ ಪ್ಲಾನೆಟ್' ಉದ್ಘಾಟನಾ ಕಾರ್ಯಕ್ರಮಕ್ಕೆ ನಟ ಲವ್ಲಿ ಸ್ಟಾರ್ ಪ್ರೇಮ್ ಅವರು ನಿಮ್ಮನ್ನು ಕೂಡ ಆದರದಿಂದ ಆಮಂತ್ರಿಸಿದ್ದಾರೆ.[ಅಂದು ದುಷ್ಮನ್, ಇಂದು ಫ್ರೆಂಡ್; ದುನಿಯಾ ವಿಜಿ ಹೇಳ್ತಿರೋದು ಯಾರ ಬಗ್ಗೆ?]

  'ಹಾಯ್ ಫ್ರೆಂಡ್ಸ್ ಇದೇ ತಿಂಗಳು 24 ರಂದು ನನ್ನ ಫ್ರೆಂಡ್ , ನನ್ನ ಫಿಟ್ನೆಸ್ ಗುರು ಪಾನಿ ಪೂರಿ ಕಿಟ್ಟಿ ಅವರು ಹೊಸದಾಗಿ ವಿದ್ಯಾರಣ್ಯಪುರದಲ್ಲಿ ''ಮಸಲ್ ಪ್ಲಾನೆಟ್' ಎಂಬ ಜಿಮ್ ಸೆಂಟರ್ ಆರಂಭ ಮಾಡುತ್ತಿದ್ದಾರೆ. ನಾನು ಸೇರಿ ತುಂಬಾ ಜನ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಅದರ ಜೊತೆಗೆ ನಿಮ್ಮ ಉಪಸ್ಥಿತಿ ಕೂಡ ಅತ್ಯಗತ್ಯ' ಎಂದು ನಟ ಪ್ರೇಮ್ ಅವರು ತಮ್ಮ ಫೇಸ್‌ ಬುಕ್ಕಿನಲ್ಲಿ ಅಭಿಮಾನಿಗಳಿಗೆ ಆಮಂತ್ರಣ ನೀಡಿದ್ದಾರೆ'.

  Hi friends this month 24th my friend my fitness Guru Pani puri Kitty opening one more branch (Muscle planet) in...

  Posted by Prem Nenapirali on Thursday, February 18, 2016

  ಈ ಉದ್ಘಾಟನಾ ಸಮಾರಂಭಕ್ಕೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಯಶ್, ನಟ ದುನಿಯಾ ವಿಜಯ್, ನಟ ಧನಂಜಯ್ ಮತ್ತು ಲವ್ಲಿ ಸ್ಟಾರ್ ಪ್ರೇಮ್ ಅವರು ಆಗಮಿಸುತ್ತಿದ್ದಾರೆ.['ಆಕ್ಷನ್ ಹೀರೋ' ಆಗ್ಬೇಕೆನ್ನೋ ಆಸೆ ನಿಮಗೂ ಇದ್ಯಾ?]

  ಎರಡು ಅಂತಸ್ತಿನ 'ಮಸಲ್ ಪ್ಲಾನೆಟ್' ನಲ್ಲಿ ಏರೋಬಿಕ್ಸ್, ಝುಂಬಾ ಸೇರಿದಂತೆ ಬಾಡಿ ವರ್ಕೌಟ್ ಗೆ ಬೇಕಾದ ಎಲ್ಲಾ ತರಬೇತಿ ನೀಡಲಾಗುತ್ತೆ. 35 ಸ್ಪೆಷಲ್ ಟ್ರೇನರ್ಸ್ ನೀಡುವ ಮಾರ್ಗದರ್ಶನದಲ್ಲಿ ನಿಮಗೆ ಬೇಕಾದ ತರಬೇತಿ ಪಡೆಯಬಹುದು.

  English summary
  Kannada Actor Prem has taken his facebook account to promote 'Muscle Planet' gym which is owned by his friend Pani Puri Kitty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X