For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿ ಒಂದಾದ ಯುವರತ್ನ ಮತ್ತು ರಾಕಿ ಭಾಯ್

  |
  ಮೈಸೂರಿನಲ್ಲಿ ನಡೀತಿದೆ ಯುವರತ್ನ ಶೂಟಿಂಗ್ | FILMIBEAT KANNADA

  ಸ್ಯಾಂಡಲ್ ವುಡ್ ನ ಅನೇಕ ಚಿತ್ರಗಳು ಮೈಸೂರಿನಲ್ಲಿ ಚಿತ್ರೀಕರಣ ಮಾಡುತ್ತಿವೆ. ಇತ್ತೀಚಿಗಷ್ಟೆ ಶ್ರೀಮುರಳಿ ಅಭಿನಯದ 'ಭರಾಟೆ', ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಚಿತ್ರೀಕರಣ ಮುಗಿಸಿ ವಾಪಸ್ ಆಗುತ್ತಿದ್ದಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇದರ ಜೊತೆಗೀಗ ಬಹು ನಿರೀಕ್ಷೆಯ 'ಕೆಜಿಎಫ್ ಚಾಪ್ಟರ್-2' ಚಿತ್ರೀಕರಣ ಕೂಡ ಮೈಸೂರಿನಲ್ಲಿ ನಡೆಯುತ್ತಿದೆ.

  ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಮತ್ತು 'ಕೆಜಿಎಪ್-2' ಚಿತ್ರೀಕರಣ ಭರ್ಜರಿಯಾಗಿ ನೆಡೆಯುತ್ತಿದೆ ಈ ಸಮಯದಲ್ಲಿ ಸ್ಯಾಂಡಲ್ ವುಡ್ ನ ಉತ್ತಮ ಗೆಳೆಯರಾದ ಪುನೀತ್ ಮತ್ತು ಯಶ್ ಇಬ್ಬರು ಭೇಟಿಯಾಗಿ ಮಾತುಕೆತೆ ನಡೆಸಿದ್ದಾರೆ.

  'ಯುವರತ್ನ' ಚಿತ್ರತಂಡ ಸೇರಿಕೊಂಡ ಕಾನ್ ಸ್ಟೇಬಲ್ ಸರೋಜ

  ಚಿತ್ರೀಕರಣದ ಬ್ಯುಸಿಯ ನಡುವೆಯು ಬಿಡುವು ಮಾಡಿಕೊಂಡು ಇಬ್ಬರು ಗೆಳೆಯರು ಭೇಟಿಯಾಗಿದ್ದಾರೆ. ಇಬ್ಬರ ಭೇಟಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಯುವರತ್ನ' ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತ ಅನೇಕ ದಿನಗಳಾಗಿವೆ.

  ಜೂನ್ 6 ರಿಂದ ಕೆಜಿಎಫ್-2 ಚಿತ್ರದ ಚಿತ್ರೀಕರಣದಲ್ಲಿ ಯಶ್ ಭಾಗಿಯಾಗಿದ್ದಾರೆ. ಮೊದಲ ಪಾರ್ಟ್ ಗಿಂತ ಎರಡನೆ ಭಾಗ ಮತ್ತಷ್ಟು ರೋಚಕವಾಗಿರಲಿದ್ದು ಅದ್ಧೂರಿಯಾಗಿ ಮೂಡಿ ಬರಲಿದೆಯಂತೆ. 'ಯುವರತ್ನ' ಚಿತ್ರ ಕೂಡ ಭಾರಿ ನಿರೀಕ್ಷೆಯನ್ನು ಮೂಡಿಸಿದೆ.

  ಒಟ್ನಲ್ಲಿ ಇತ್ತೀಚಿನವರೆಗೂ ಮೈಸೂರು ಮತ್ತು ಮಂಡ್ಯದಲ್ಲಿ ಜೋಡೆತ್ತುಗಳಾದ ಯಶ್ ಮತ್ತು ದರ್ಶನ್ ಇಬ್ಬರ ಹವಾ ಜೋರಾಗಿತ್ತು. ಈಗ ಚುನಾವಣೆ ಮುಗಿಸಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಯಶ್ ಮತ್ತು ದರ್ಶನ್. ಸದ್ಯ ಯಶ್ ಈಗ ಪುನೀತ್ ಜೊತೆ ಮೈಸೂರಿನಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ.

  English summary
  Kannada actor Puneeth Rajkumar met Actor rocking star Yash in Mysure. Yash busy in KGF-2 film and Puneeth Rajkumar busy in Yuvaratna film both are in Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X