»   » ಪುನೀತ್ ಅವರ 'ರಾಜಕುಮಾರ'ದಲ್ಲಿ ಎರಡು ಕಥೆ ಇದೆಯಂತೆ

ಪುನೀತ್ ಅವರ 'ರಾಜಕುಮಾರ'ದಲ್ಲಿ ಎರಡು ಕಥೆ ಇದೆಯಂತೆ

Written By:
Subscribe to Filmibeat Kannada

ಯಶ್ ಮತ್ತು ರಾಧಿಕಾ ಜೋಡಿಯಾಗಿ ಕಾಣಿಸಿಕೊಂಡಿದ್ದ 'ಮಿ.ಅಂಡ್ ಮಿಸಸ್' ರಾಮಾಚಾರಿ ಎಂಬ ಸಿನಿಮಾವನ್ನು ಸ್ಯಾಂಡಲ್ ವುಡ್ ಗೆ ಕೊಟ್ಟು ಭರವಸೆಯ ನಿರ್ದೇಶಕ ಎನಿಸಿಕೊಂಡ ಸಂತೋಷ್ ಆನಂದ್ ರಾಮ್ ಅವರ 'ರಾಜಕುಮಾರ' ಸಿನಿಮಾ ಸಖತ್ ಸದ್ದು ಮಾಡುತ್ತಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾ ಆನಂದ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ 'ರಾಜಕುಮಾರ' ಚಿತ್ರದಲ್ಲಿ ಒಂದಲ್ಲಾ ಎರಡೆರಡು ಕಥೆ ಇದೆಯಂತೆ.[ಪುನೀತ್ ರ 'ರಾಜಕುಮಾರ' ಚಿತ್ರದ ಬಗ್ಗೆ ಜಗ್ಗೇಶ್ ಹೇಳಿದ್ದೇನು?]


Kannada Actor Puneeth's 'Rajakumara' To Portray Two Different Stories

ಸಾಮಾನ್ಯವಾಗಿ ಯಾವುದೇ ಸಿನಿಮಾದಲ್ಲಿ ಮಧ್ಯಂತರ ಆದಾಗ ಕಥೆಗೆ ಟ್ವಿಸ್ಟ್ ಇಟ್ಟು ಪ್ರೇಕ್ಷಕರಿಗೆ ಗೊಂದಲ ಮೂಡಿಸಿದರೆ, 'ರಾಜಕುಮಾರ' ಚಿತ್ರದಲ್ಲಿ ಮಾತ್ರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಚಿತ್ರದ ಮೊದಲರ್ಧ ಭಾಗದಲ್ಲಿ ಒಂದು ಕಥೆಯಾದರೆ, ಎರಡನೇ ಭಾಗದಲ್ಲಿ ಇನ್ನೊಂದು ಕಥೆ ಸೃಷ್ಟಿಸಿ ಪ್ರೇಕ್ಷಕರ ಮನಸ್ಸನ್ನು ಗೊಂದಲದ ಗೂಡಾಗಿಸಲಿದ್ದಾರೆ.[ಸದ್ದಿಲ್ಲದೆ ಮುಹೂರ್ತ ಆಚರಿಸಿಕೊಂಡ ಪುನೀತ್ ರ 'ರಾಜಕುಮಾರ']


Kannada Actor Puneeth's 'Rajakumara' To Portray Two Different Stories

ಚಿತ್ರದ ಮೊದಲರ್ದ ಮತ್ತು ದ್ವಿತೀಯಾರ್ಧದಲ್ಲಿ ಬೇರೆ ಬೇರೆ ಕಥೆಗಳು ತೆರೆದುಕೊಳ್ಳುತ್ತದೆ. ಆ ಎರಡೂ ಕಥೆಗಳನ್ನು ಪುನೀತ್ ಅವರ ಪಾತ್ರ ಒಂದುಗೂಡಿಸುತ್ತದೆ. ಪೂರ್ತಿ ಸಿನಿಮಾ ನೋಡಿದವರಿಗೆ ಮಾತ್ರ ಅಸಲಿ ವಿಷಯ ಗೊತ್ತಾಗುತ್ತದೆ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಿಳಿಸಿದ್ದಾರೆ.['ರಾಜಕುಮಾರ'ನ ಜೊತೆ ಡ್ಯುಯೆಟ್ ಹಾಡೋ ರಾಣಿ ಯಾರು ಗೊತ್ತಾ?]


Kannada Actor Puneeth's 'Rajakumara' To Portray Two Different Stories

ಅಂದಹಾಗೆ 'ಮಿ.ಅಂಡ್.ಮಿಸಸ್ ರಾಮಾಚಾರಿ' ಚಿತ್ರಕ್ಕೂ ಮುಂಚೆಯೇ 'ರಾಜಕುಮಾರ' ಚಿತ್ರ ತಯಾರಾಗಿತ್ತಂತೆ. ಆದರೆ ಮೊದಲ ಪ್ರಯತ್ನದಲ್ಲಿ ಕೈ ಸುಟ್ಟುಕೊಳ್ಳುವುದು ಬೇಡ ಅಂತ ತಮ್ಮ 2ನೇ ಚಿತ್ರದಲ್ಲಿ ಪುನೀತ್ ಅವರ ಜೊತೆ ಸೇರಿಕೊಂಡು ವಿಭಿನ್ನ ಸಾಹಸಕ್ಕೆ ಕೈ ಹಾಕಿದ್ದಾರೆ.['ರಾಜಕುಮಾರ' ಪುನೀತ್ ರವರ ಯುವರಾಣಿ 'ಇವರೇ'..!]


Kannada Actor Puneeth's 'Rajakumara' To Portray Two Different Stories

ಕಳೆದ ಶುಕ್ರವಾರ (ಮಾರ್ಚ್ 11) ದಂದು ಮುಹೂರ್ತ ನೆರವೇರಿಸಿಕೊಂಡ 'ರಾಜಕುಮಾರ' ಸಿನಿಮಾ ಎಪ್ರಿಲ್ ತಿಂಗಳಿನಿಂದ ಶೂಟಿಂಗ್ ಆರಂಭಿಸಲಿದೆ. ವಿದೇಶದಲ್ಲಿ ಸೇರಿದಂತೆ ಗೋವಾ, ಮೈಸೂರು ಹಾಗೂ ವಾರಣಾಸಿಯಲ್ಲಿ ಚಿತ್ರೀಕರಣ ನಡೆಯಲಿದೆ. ತಮಿಳು ನಟ ಶರತ್ ಕುಮಾರ್ ಅವರು ಪುನೀತ್ ಅವರ ತಂದೆಯ ಪಾತ್ರದಲ್ಲಿ ಮಿಂಚಲಿದ್ದಾರೆ.

English summary
Puneeth Rajkumar's next titled 'Rajakumara' has went on floors. The movie is directed by Santhosh Anandram, who previously gave blockbuster movie Mr And Mrs Ramachari. The film-maker has revealed a few interesting facts about the film. "Rajakumara is a different subject which portrays two different stories & the two stories is bridged between Appu's character", said Santhosh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada