For Quick Alerts
ALLOW NOTIFICATIONS  
For Daily Alerts

  ಹೆದರಿಕೊಂಡೇ 'ಅಪೂರ್ವ' ನೋಡಿದವರು ಬರೆದಿರುವ ಅಪರೂಪದ ಪತ್ರ.!

  By Harshitha
  |

  ಕ್ರೇಜಿ ಸ್ಟಾರ್ ರವಿಚಂದ್ರನ್ ರವರ 'ಅಪೂರ್ವ' ಚಿತ್ರದ ಬಗ್ಗೆ ತರಹೇವಾರಿ ವಿಮರ್ಶೆಗಳು ಬಂದಿರಬಹುದು. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ 'ಅಪೂರ್ವ' ಬಗ್ಗೆ ಅವಹೇಳನ ಮಾಡುತ್ತಿರಬಹುದು. ಆದ್ರೆ, ಸಿನಿಮಾ ಭಾಷ್ಯ ಗೊತ್ತಿರುವ ಮಂದಿಗೆ 'ಅಪೂರ್ವ' ಒಂದು ಅಪರೂಪದ ಕಲಾಕೃತಿ ಅಂತ ಮನದಟ್ಟಾಗಿದೆ. ಬೇಕಾದ್ರೆ, ಹೆಸರಾಂತ ನಟ, ರಂಗಭೂಮಿ ಕಲಾವಿದ ರಾಜೇಂದ್ರ ಕಾರಂತ್ ರವರನ್ನ ಕೇಳಿ....

  'ಅಪೂರ್ವ' ಚಿತ್ರವನ್ನು ಕಣ್ತುಂಬಿಕೊಂಡಿರುವ ರಮೇಶ್ ಅರವಿಂದ್ ರವರ 'ಆಕ್ಸಿಡೆಂಟ್' ಖ್ಯಾತಿಯ ರಾಜೇಂದ್ರ ಕಾರಂತ್, ತಮ್ಮ ಅಭಿಪ್ರಾಯವನ್ನ ಫೇಸ್ ಬುಕ್ ನಲ್ಲಿ ವ್ಯಕ್ತಪಡಿಸಿದ್ದಾರೆ. ಅದರ ಕಾಪಿ ಇಲ್ಲಿದೆ, ಅವರ ಮಾತುಗಳಲ್ಲೇ ಓದಿರಿ....

  ''ಹೆದರಿಕೊಂಡೇ ಹೋಗಿದ್ದು...ಹೆದರಿಕೊಂಡೇ ನೋಡಲು ಆರಂಭಿಸಿದ್ದು...ಏಕೆಂದರೆ ನಾನೆಂದೂ ರವಿಚಂದ್ರನ್ ಅಭಿಮಾನಿಯಲ್ಲ. ಅವರ ಅಭಿನಯದ ಅಭಿಮಾನಿಯೂ ಅಲ್ಲ. ಆದರೆ 'ಅಪೂರ್ವ' ನೋಡಿ ದಂಗಾಗಿ ಹೋದೆ. ನೋಡದಿದ್ದರೆ ಸಿನಿಮಾದ ವಿದ್ಯಾರ್ಥಿ ಆಗಿ ಏನೋ ಕಳೆದುಕೊಂಡುಬಿಡ್ತಿದ್ದೆ. [ರವಿಚಂದ್ರನ್ ಕೆಣಕಿದ ರಾಘವ ದ್ವಾರ್ಕಿಗೆ ಅಭಿಮಾನಿಯ ಛಡಿಯೇಟು.!]

  ಇಡೀ ಸಿನಿಮವನ್ನು ಯಾವ ಕಮರ್ಷಿಯಲ್ ಆಲೋಚನೆಗಳನ್ನೂ ಮಾಡದೆ ತಮ್ಮ ಕ್ರಿಯೇಟಿವ್ ಸಂಸ್ಕಾರ, ಅಭಿರುಚಿ ತೋರಿಸಿದ ಹಾದಿಯಲ್ಲಿ ಯಾವ ಪ್ರೇಕ್ಷಕನನ್ನು ಮೆಚ್ಚಿಸುವ ಆಸೆಗೆ ಬಲಿ ಬೀಳದೆ ತಮ್ಮಿಂದ ಮಾತ್ರ ಸಾಧ್ಯವಿರುವ ಸಿನಿಮಾ ಒಂದನ್ನು ರವಿ ಸಾರ್ ಕೊಟ್ಟಿದ್ದಾರೆ.

  ಚಿಕ್ಕಣ್ಣ, ಸಾಧುಕೋಕಿಲ ಕಾಮಿಡಿ, ಐಟಂ ನಂಬರ್, ಅಣ್ಣನಿಗೆ ಲವ್ ಆಯಿತು, ಕಾಲಿ quarter ಬಾಟಲುಗಳ ಜೊತೆಗೆ ಬೆಳೆದ ಪ್ರೇಕ್ಷಕನಿಗೆ ಅಪ್ಪನಾಣೆ ಇಷ್ಟ ಆಗಲ್ಲ. ಆದರೆ ಕನ್ನಡ ಸಿನಿಮಾ ಇದರಾಚೆಗೂ ಬೆಳೀಬೇಕು ಅನ್ನೋ ಆಸೆ ಇರೋರಿಗೆ ಇದು ಅಭಿಮಾನ ತುಂಬಿಸುತ್ತೆ.

  ನೂರಾರು ಪ್ರಶಸ್ತಿ ಗಳಿಸಿರೋ ಒಬ್ಬ ಕಾಸರವಳ್ಳಿಯವರಿಗೂ ನಿದ್ದೆಗೆಡಿಸಬಲ್ಲಂತ ರೀತಿಯಲ್ಲಿ frameಗಳನ್ನು ತುಂಬಿದ್ದಾರೆ. ಪ್ರತಿ frame ಅನ್ನು ಆಲೋಚಿಸಿರುವ ರೀತಿ. ಅದನ್ನು ತುಂಬಿರುವ ರೀತಿ ಅಸಾಧಾರಣ. ['ಅಪೂರ್ವ' ಎರಡನೇ ಆವೃತ್ತಿ ಬಿಡುಗಡೆ: ಚಿತ್ರಮಂದಿರ ತುಂಬಿದೆ.!]

  ಎಲ್ಲೋ ಹೇಳಿದ್ದೇ ಹೇಳಿದ ಹಾಗೆ ಅನ್ನಿಸಬಹುದು. ಮುಂದೆ ಹೋಗ್ತಿಲ್ಲ ಅಂತಲೂ ಅನ್ನಿಸಬಹುದು. ಅದೇ ಕ್ಲೀಷೆಗಳು, ನೋಡಿದ್ದೇ ನೋಡ್ತಿದ್ದೀವಿ ಎಂದೂ ಅನ್ನಿಸಬಹುದು. ಅದನ್ನೆಲ್ಲ ಮೀರಿ ರವಿ ಸಾರ್ ಬಣ್ಣ ತುಂಬುತ್ತಾರೆ. ಇನ್ನೊಬ್ಬರಿಗೆ ಇಷ್ಟ ಆಗೋ ರೀತಿಯೇ ಸಿನಿಮಾ ಮಾಡಬೇಕಂದಿಲ್ಲ, ಅಥವಾ ಇನ್ನೊಬ್ಬರ ತಲೆಯಲ್ಲಿರುವುದನ್ನು ನಾವು ತೆಗೀಬೇಕೆಂದಿಲ್ಲ. ಸಿನಿಮಾವನ್ನು ನಾವು ನಂಬಿರುವ ರೀತಿ, ಆಲೋಚಿಸುವ ರೀತಿಯಲ್ಲಿ ಸಾಯುವ ಮುನ್ನ ಒಮ್ಮೆ ಆದರೂ ಹೇಳದೆ ಹೋದರೆ creative field ಅಲ್ಲಿ ಏನು ಪ್ರಯೋಜನ? ರವಿ ಸಾರ್ ಅದನ್ನೇ ಮಾಡಿದ್ದಾರೆ.!

  International festivalಗಳಲ್ಲಿ ಹೆಸರು ಮಾಡಬಲ್ಲ ಸಿನಿಮಾ ಇದು. ಒಂದು commercial ಕಥೆಯನ್ನೇ commercial canvas ಒಳಗೆ ಕಲೆಯಾಗಿಸಿದ್ದಾರೆ. ಇಷ್ಟ ಆಗೋದು ಬಿಡೋದು ಅವರವರ ಅಭಿರುಚಿ, ಓದಿಗೆ ಬಿಟ್ಟದ್ದು. [ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ]

  ಸುಮ್ಮನೆ International releaseಗಳ ಪ್ರಚಾರದೊಡನೆ ಸಾಮಾನ್ಯ ಸಿನಿಮಾ ಮಾಡೋ ಮಂದಿಗಳ ನಡುವೆ ರವಿ ಸಾರ್ ಭಿನ್ನವಾಗಿ ನಿಲ್ಲುತ್ತಾರೆ. ಎಷ್ಟೋ ಬೇರೆ ಭಾಷೆಯ ನಾಟಕಗಳನ್ನು ಗಂಟೆಗಟ್ಟಲೆ ಕೂತು ನೋಡಿದ್ದೇನೆ. ಮಾತಿನ ಭಾಷೆ ಅರ್ಥ ಆಗದಿದ್ದರೂ ನಾಟಕದ ಭಾಷೆಯೊಡನೆ ಅರ್ಥಮಾಡಿಕೊಂಡಿದ್ದೇವೆ. ಹಾಗೆ 'ಅಪೂರ್ವ'ದಲ್ಲಿ ಬರುವ screen space ಉಪಯೋಗ ಅರ್ಥ ಆಗದಿರಬಹುದು. ಯಾಕೆ ಬೇಕಿತ್ತು ಎಂದು ಅನ್ನಿಸಲೂ ಬಹುದು. ಆದರೆ ಅದೇ creative freedom. ಇಷ್ಟ ಆದರೆ ಸಂತೋಷ, ಇಲ್ಲದಿದ್ದರೆ ನೋ ಪ್ರಾಬ್ಲಮ್.

  ಬೇಂದ್ರೆಯವರ ಕವನ ಅರ್ಥ ಆಗದಿದ್ದರೆ ಅವರ ತಪ್ಪಲ್ಲ. ನಮ್ಮ ಓದಿನ ಮಟ್ಟದ್ದು. ಈ ಸಿನಿಮಾ ಗೆಲ್ಲಲಿ ಎಂದು ಪ್ರಾಮಾಣಿಕವಾಗಿ ಬಯಸುತ್ತಾ..........Hats Off to Ravichandran Sir'' (ರಾಜೇಂದ್ರ ಕಾರಂತ್ ಫೇಸ್ ಬುಕ್)

  English summary
  Kannada Actor Rajendra Karanth has taken his facebook to appreciate Crazy Star V.Ravichandran's One Man Show 'Apoorva'.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more