»   » ನಟ-ನಿರ್ದೇಶಕನ ನಂತರ ನಿರ್ಮಾಪಕರಾಗಿ ಶೆಟ್ರ ಹೊಸ ವರಸೆ

ನಟ-ನಿರ್ದೇಶಕನ ನಂತರ ನಿರ್ಮಾಪಕರಾಗಿ ಶೆಟ್ರ ಹೊಸ ವರಸೆ

By Suneetha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಸಿಂಪಲ್ಲಾಗಿ ಒಂದು ಲವ್ ಸ್ಟೋರಿ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಾಯಕ ನಟನಾಗಿ ಬ್ರೇಕ್ ಪಡೆದುಕೊಂಡ ನಟ ರಕ್ಷಿತ್ ಶೆಟ್ಟಿ ಅವರು 'ಉಳಿದವರು ಕಂಡಂತೆ' ಸಿನಿಮಾವನ್ನು ನಿರ್ದೇಶಿಸಿ-ನಟಿಸಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿಕೊಂಡು ಗಾಂಧಿನಗರದಲ್ಲಿ ಫೇಮಸ್‌ ಆದರು.

  ನಟ ಆಯ್ತು, ನಿರ್ದೇಶಕ ಆಯ್ತು, ಇದೀಗ ನಿರ್ಮಾಪಕರಾಗಿ ಹೊಸ ಅವತಾರ ಎತ್ತಲು ರಕ್ಷಿತ್ ಶೆಟ್ಟಿ ಅವರು ತಯಾರಾಗಿದ್ದಾರೆ. ಹೌದು ಸದ್ಯಕ್ಕೆ 'ರಿಕ್ಕಿ' [ಪ್ರೀತಿ-ಸಮರಗಳ ನಡುವೆ ನಜ್ಜುಗುಜ್ಜಾಗುವ 'ರಿಕ್ಕಿ'ಗೆ ಸಲಾಂ] ಸಿನಿಮಾದ ಯಶಸ್ಸಿನಲ್ಲಿರುವ ನಟ ರಕ್ಷಿತ್ ಅವರು ತಮ್ಮದೇ ಸ್ವಂತ ಪ್ರೊಡಕ್ಷನ್ಸ್ ಹೌಸ್ ಆರಂಭಿಸುವ ತಯಾರಿಯಲ್ಲಿದ್ದಾರೆ.

  'ರಿಕ್ಕಿ' ಅಲಿಯಾಸ್ ರಕ್ಷಿತ್ ಶೆಟ್ಟಿ ಪ್ರಾರಂಭಿಸಿರುವ ಚಿತ್ರ ನಿರ್ಮಾಣ ಸಂಸ್ಥೆಯ ಹೆಸರು 'ಪರಂವಾ ಸ್ಟುಡಿಯೋಸ್'. ಸೃಷ್ಟಿಯ ಆದಿಯಲ್ಲಿ ಶಿವನ ಡಮರುಗದಿಂದ ಹೊರಟ ಮೊದಲ ಸದ್ದನ್ನು 'ಪರಂವಾ' ಎನ್ನುತ್ತಾರೆ. ಆ ಮೊದಲ ಸದ್ದಿಗೆ ಶಿವ ನೃತ್ಯ ಮಾಡಲು ತೊಡಗಿದನಂತೆ. ಅದಕ್ಕಾಗಿ ರಕ್ಷಿತ್ ಅವರು ವಿಭಿನ್ನ ಹೆಸರಿನ ತಮ್ಮ ನೂತನ ಸ್ಟುಡಿಯೋದಲ್ಲಿ ಹೊಸ ಪ್ರತಿಭೆಗಳನ್ನು ಹೊರ ತೆಗೆಯಲಿದ್ದಾರೆ.[ಥಿಯೇಟರ್ ಸಮಸ್ಯೆ ಎದುರಿಸುತ್ತಿದ್ದಾನೆ 'ರಿಕ್ಕಿ', ರಿಶಬ್ ಗೆ ಭಾರಿ ಕಳವಳ]

  'ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಅದ್ಭುತ ಎನಿಸುವ ಪ್ರತಿಭಾವಂತರಿಗೆ ಒಂದು ಅವಕಾಶ ಬೇಕಾಗಿರುತ್ತದೆ. ಆದ್ದರಿಂದ 'ಪರಂವಾ' ಸ್ಟುಡಿಯೋಸ್ ಮೂಲಕ ಸಾದ್ಯವಾದಷ್ಟು ಅವಕಾಶಗಳನ್ನು ಕ್ರಿಯೇಟ್ ಮಾಡೋದು ನಮ್ಮ ಉದ್ದೇಶ ಎಂದು ರಕ್ಷಿತ್ ನುಡಿಯುತ್ತಾರೆ.

  ಇನ್ನು ರಕ್ಷಿತ್ ಅವರ ನಿರ್ಮಾಣ ಸಂಸ್ಥೆಯಿಂದ ಹೊರ ಬರುತ್ತಿರುವ ಮೊದಲ ಚಿತ್ರ 'ಕಿರಿಕ್ ಪಾರ್ಟಿ'. ಈ ಸಿನಿಮಾದ ಕಥೆ ಮತ್ತು ಚಿತ್ರಕಥೆಯನ್ನು ಖುದ್ದು ನಟ ರಕ್ಷಿತ್ ಶೆಟ್ಟಿ ಅವರೇ ಬರೆಯುತ್ತಿದ್ದಾರೆ. ರಕ್ಷಿತ್ ಅವರ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಘಟನೆಯೇ 'ಕಿರಿಕ್ ಪಾರ್ಟಿ' ಸಿನಿಮಾವಂತೆ.['ಕಿರಿಕ್ ಪಾರ್ಟಿ' ಮಾಡ್ತಾರೆ ರಿಶಬ್ ಮತ್ತು ರಕ್ಷಿತ್ ಶೆಟ್ಟಿ.!]

  ಒಟ್ನಲ್ಲಿ 'ರಿಕ್ಕಿ' ನಂತರ ತಮ್ಮ ಸ್ನೇಹಿತ ರಿಶಬ್ ಶೆಟ್ಟಿ ಮತ್ತು ರಕ್ಷಿತ್ ಅವರು ಸೇರಿಕೊಂಡು ಮಾಡುತ್ತಿರುವ 'ಕಿರಿಕ್ ಪಾರ್ಟಿ' ಪ್ರೇಕ್ಷಕರಿಗೆ ಮನರಂಜನೆ ನೀಡೋದು ಗ್ಯಾರಂಟಿ.

  English summary
  Actor-director Rakshit Shetty knows the difference and the similarity between business and art quite well. Seemingly hasty, the six films-old actor and one film- old director has already started his own production house, 'Paramvah' Studios and he asserts that it is intended so as to be in a creative space with complete freedom.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more