For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷ ಹೇಗಿರಬೇಕೆಂದು ಹೇಳಿದ ನಟ ರಮೇಶ್ ಅರವಿಂದ್

  |

  ಇಂದು 2020ರ ಕೊನೆಯ ದಿನ. ಹೊಸ ವರ್ಷಾಚರಣೆಗೆ ಇನ್ನೇನು ಕ್ಷಣಗಣನೆ ಬಾಕಿ ಇದೆ. ಈ ವರ್ಷ ಸಿಹಿಗಿಂತ ಹೆಚ್ಚಾಗಿ ಕಹಿ ಅನುಭವಿಸಿದ್ದೇ ಜಾಸ್ತಿ. ಕೊರೊನಾ ವೈರಸ್ ಈ ವರ್ಷದ ಎಲ್ಲರ ಸಂತೋಷ, ನೆಮ್ಮದಿಯನ್ನೆ ನಾಶ ಮಾಡಿದೆ. ಅಂತೂ ಈ ವರ್ಷ ಕಳೆಯಿತು ಹೊಸ ವರ್ಷವಾದರೂ ಅದ್ಭುತವಾಗಿರಲಿ, ಮೊದಲು ಕೊರೊನಾ ತೊಲಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

  2021ನ್ನು ಅದ್ದೂರಿಯಾಗಿ ಸ್ವಾಗತ ಮಾಡಲು ಇಡೀ ವಿಶ್ವ ಎದುರು ನೋಡುತ್ತಿದೆ. ಹೊಸ ಯೋಜನೆಗಳೊಂದಿಗೆ, ಹೊಸ ಹೊಸ ಕನಸುಗಳೊಂದಿಗೆ ಎಲ್ಲರೂ ಹೊಸ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅನೇಕರು ಹೊಸ ವರ್ಷಕ್ಕೆ ಶುಭಾಶಯ ಕೋರುತ್ತಿದ್ದಾರೆ. ಇದೀಗ ನಟ ರಮೇಶ್ ಅರವಿಂದ್ ಹೊಸ ವರ್ಷಕ್ಕೆ ಉತ್ತಮ ಸಂದೇಶ ರವಾನಿಸಿದ್ದಾರೆ.

  ಮಗಳ ಮದುವೆ ಸಂಭ್ರಮ; ನಿಮ್ಮ ಪ್ರೀತಿಯ ಆಶೀರ್ವಾದ ಬೇಕೆಂದ ರಮೇಶ್ ಅರವಿಂದ್ಮಗಳ ಮದುವೆ ಸಂಭ್ರಮ; ನಿಮ್ಮ ಪ್ರೀತಿಯ ಆಶೀರ್ವಾದ ಬೇಕೆಂದ ರಮೇಶ್ ಅರವಿಂದ್

  2021ಕ್ಕೆ ಶುಭಾಕೋರುವ ಜೊತೆಗೆ ಹೊಸ ವರ್ಷ ಹೇಗಿರಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ರಮೇಶ್ ಅರವಿಂದ್ ಆಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  'ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷದಲ್ಲಿ ಪ್ರತಿಕ್ಷಣ, ಪ್ರತಿದಿನ, ನೀವು ಒಳ್ಳೆಯ ಮೂಡ್ ನಲ್ಲಿ, ಅಧ್ಬುತವಾದ ಮನಸ್ಥಿತಿಯಲ್ಲಿ ಇರುವ ಹಾಗೆ ಆಗಲಿ, ಪ್ರತೀಕ್ಷಣ ಹಿತವಾದ ವಾತಾವರಣದಲ್ಲಿ, ಹಿತವಾದ ವ್ಯಕ್ತಿಗಳ ಜೊತೆ, ಹಿತವಾದ ವಿಷಯಗಳಲ್ಲಿ ತೊಡಗಿಸಿಕೊಳ್ಳುವ ಹಾಗೆ ಆಗಲಿ, ಎಲ್ಲರ ಕನಸುಗಳು ನನಸಾಗಲಿ. ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳು' ಎಂದು ಹೇಳಿದ್ದಾರೆ.

  ಅಂದಹಾಗೆ ಈ ಆಡಿಯೋದಲ್ಲಿ ಮಗಳ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿದ್ದಾರೆ. ರಮೇಶ್ ಅರವಿಂದ್ ಇತ್ತೀಚಿಗಷ್ಟೆ ಮಗಳ ಮದುವೆಯನ್ನು ಮಾಡಿ ಮುಗಿಸಿದ್ದಾರೆ. ಮಗಳು ನಿಹಾರಿಕಾ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಮೇಶ್ ಅರವಿಂದ್ ಮುದ್ದಿನ ಮಗಳ ಮದುವೆಗೆ ತೀರಾ ಆಪ್ತರು ಮಾತ್ರ ಭಾಗಿಯಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ.

  ಬಾಯ್ ಫ್ರೆಂಡ್ ಜೊತೆ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ ಗೊಗ್ಲಿ ಬೆಡಗಿ | Filmibeat Kannada

  ಇನ್ನು ಜನವರಿ 16ರಂದು ಆರತಕ್ಷತೆ ಸಮಾರಂಭ ಇಟ್ಟುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಈ ಸಮಾರಂಭದಲ್ಲಿ ಕುಟುಂಬದವರ ಜೊತೆಗೆ ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಗೂ ಆಹ್ವಾನ ನೀಡಲಾಗಿದ್ದು, ಎಲ್ಲರೂ ಭಾಗಿಯಾಗುವ ಸಾಧ್ಯತೆ ಇದೆ

  English summary
  Kannada Actor Ramesh Aravind happy new year wish for his fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion