»   » ಜೂನಿಯರ್ ಕ್ರೇಜಿಸ್ಟಾರ್ ಗೆ ರವಿಚಂದ್ರನ್ 'ಭಾರಿ' ಉಡುಗೊರೆ

ಜೂನಿಯರ್ ಕ್ರೇಜಿಸ್ಟಾರ್ ಗೆ ರವಿಚಂದ್ರನ್ 'ಭಾರಿ' ಉಡುಗೊರೆ

Posted By:
Subscribe to Filmibeat Kannada

ರೀಲ್ ನಲ್ಲೂ ರಿಯಲ್ ನಲ್ಲೂ ರವಿಚಂದ್ರನ್ ಸಿಕ್ಕಾಪಟ್ಟೆ ಕ್ರೇಜಿ. ಸಿನಿಮಾ ಚೆನ್ನಾಗಿ ಮೂಡಿಬರಬೇಕು ಅಂತ ರವಿಚಂದ್ರನ್ ಹೆಚ್ಚು ಹಣ ಹೇಗೆ ಸುರಿಯುತ್ತಾರೋ ಹಾಗೆ, ಮಕ್ಕಳು ಖುಷಿಯಾಗಿರುವುದಕ್ಕೆ ಏನು ಬೇಕಾದರೂ ಮಾಡುತ್ತಾರೆ.

ಇವತ್ತು ರವಿಚಂದ್ರನ್ ಪುತ್ರ ವಿಕ್ರಮ್ ಹುಟ್ಟುಹಬ್ಬ. ಮಗನ ಬರ್ತಡೆಗೆ ಅಪ್ಪ ಕೊಟ್ಟ ಕಾಣಿಕೆ ಏನು ಗೊತ್ತಾ? ಈಗಷ್ಟೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಬ್ರ್ಯಾಂಡ್ ನ್ಯೂ ಎಸ್.ಯು.ವಿ ಕಾರ್ ಕ್ರೇಟಾ.! [ಕ್ರೇಜಿಸ್ಟಾರ್ ಜನ್ಮದಿನಕ್ಕೆ ಇಂದ್ರಜಿತ್ ಲಂಕೇಶ್ ಕೊಟ್ಟ ಕಾಣಿಕೆ]

ravichandran

ಹೌದು, ವಿಕ್ರಮ್ ಇಷ್ಟ ಪಟ್ಟಿದ್ದ ಕ್ರೇಟಾ ಕಾರ್ ನ ಬರ್ತಡೆ ಸರ್ ಪ್ರೈಸ್ ಗಿಫ್ಟ್ ಆಗಿ ರವಿಚಂದ್ರನ್ ನೀಡಿದ್ದಾರೆ. ಇಷ್ಟ ಪಟ್ಟಿದ್ದ ಕಾರನ್ನ ರಾಜಾಜಿನಗರದ ತಮ್ಮ ಮನೆ ಮುಂದೆ ಇಂದು ಮುಂಜಾನೆ ನೋಡಿ ವಿಕ್ರಮ್ ಫುಲ್ ಖುಷ್ ಆಗಿದ್ದಾರೆ. ಅಪ್ಪನಿಗೆ ಹೃದಯಪೂರ್ವಕ ವಂದನೆ ಸಲ್ಲಿಸಿದ್ದಾರೆ. [ನಿನ್ನಂಥ ಅಪ್ಪ ಇಲ್ಲ...ಬಾಳಲ್ಲಿ ನೀನೇ ಎಲ್ಲಾ...]

ಅಂದ್ಹಾಗೆ, ವಿಕ್ರಮ್ ಈಗಾಗಲೇ ನಿಮಗೆಲ್ಲರಿಗೂ ಪರಿಚಿತ. 'ಮಲ್ಲ', 'ಹಠವಾದಿ' ಮತ್ತು 'ಕ್ರೇಜಿ ಸ್ಟಾರ್' ಚಿತ್ರಗಳಲ್ಲಿ ವಿಕ್ರಮ್ ಮಿಂಚಿದ್ದಾರೆ.

English summary
Kannada Actor Ravichandran has gifted Creta Car to his son Vikram Ravichandran on the occasion of his birthday today (Aug 16th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada