For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಸ್ಟಾರ್ ರವಿಚಂದ್ರನ್ ತೆಗೆದುಕೊಂಡ ಮೊಟ್ಟ ಮೊದಲ ಸೆಲ್ಫಿ ಇದು

  By Naveen
  |
  ಇದು ರವಿ ಮಾಮನ ಮೊಟ್ಟ ಮೊದಲ ಸೆಲ್ಫಿ...! | Filmibeat Kannada

  ಈಗಂತೂ ಸೆಲ್ಫಿ ಕಾಲ. ಎಲ್ಲಿಯೇ ಹೊದರು, ಯಾವುದೇ ಜಾಗವಾದರೂ ಒಂದು ಸೆಲ್ಫಿ ತೆಗೆದುಕೊಳ್ಳುವುದು ಇಂದಿನ ಜನತೆಯ ಟ್ರೆಂಡ್. ಆದರೆ ನಟ ರವಿಚಂದ್ರನ್ ಮಾತ್ರ ಈ ಸೆಲ್ಫಿ ಕ್ರೇಜ್ ನಿಂದ ದೂರ ಇದ್ದರು.

  ರವಿಚಂದ್ರನ್ ಅವರ ಜೊತೆಗೆ ಒಂದೇ ಒಂದು ಫೋಟೋ ತೆಗೆದುಕೊಳ್ಳಬೇಕು ಎನ್ನುವುದು ಎಷ್ಟೋ ಅಭಿಮಾನಿಗಳ ಆಸೆ. ಆದರೆ, ರವಿಚಂದ್ರನ್ ಈಗ ಒಬ್ಬರ ಜೊತೆಗೆ ತಾವೇ ಸೆಲ್ಫಿ#mce_temp_url# ತೆಗೆದುಕೊಂಡಿದ್ದಾರೆ. ವಿಶೇಷ ಅಂದರೆ, ಇದು ಅವರ ಮೊದಲ ಸೆಲ್ಫಿ ಆಗಿದೆ. ಅಂದಹಾಗೆ, ರವಿಚಂದ್ರನ್ ಸದ್ಯ ಸೆಲ್ಫಿ ತೆಗೆದುಕೊಂಡಿರುವುದು ತಮ್ಮ ಪ್ರೀತಿಯ ಪತ್ನಿ ಸುಮತಿ ಅವರೊಂದಿಗೆ.

  Someone who never takes a selfie has finally taken for his wife! #powerofawoman

  A post shared by Manoranjan Ravichandran (@mano_ravichandran) on

  ಮಕ್ಕಳ ಕಡೆಯಿಂದ ರವಿಚಂದ್ರನ್ ಅವರಿಗೆ ಸಿಕ್ಕಿದೆ ಸ್ಪೆಷಲ್ ಗಿಫ್ಟ್ ಮಕ್ಕಳ ಕಡೆಯಿಂದ ರವಿಚಂದ್ರನ್ ಅವರಿಗೆ ಸಿಕ್ಕಿದೆ ಸ್ಪೆಷಲ್ ಗಿಫ್ಟ್

  ಈ ವಿಷಯವನ್ನು ರವಿಚಂದ್ರನ್ ಪುತ್ರ ಮನೋರಂಜನ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಪ್ಪ ಮತ್ತು ಅಮ್ಮ ತೆಗೆದುಕೊಂಡ ಸೆಲ್ಫಿ ಮನೋರಂಜನ್ ಗೆ ಮನರಂಜನೆ ನೀಡಿದೆ. ''ಎಂದಿಗೂ ಸೆಲ್ಫಿ ತೆಗೆದುಕೊಳ್ಳದ ಅಪ್ಪ ಇಂದು ಅಮ್ಮನಿಗಾಗಿ ಸೆಲ್ಫಿ ತೆಗೆದುಕೊಂಡಿದ್ದಾರೆ'' ಎಂದು ಮನೋರಂಜನ್ ತಿಳಿಸಿದ್ದಾರೆ.

  ಅಂದಹಾಗೆ, ರವಿಚಂದ್ರನ್ ಸದ್ಯ 'ರಾಜೇಂದ್ರ ಪೊನ್ನಪ್ಪ' ಸಿನಿಮಾದ ನಿರ್ಮಾಣದಲ್ಲಿ ಬಿಜಿ ಇದ್ದಾರೆ. ಅವರ ಪುತ್ರ ಮನೋರಂಜನ್ 'ಚಿಲ್ಲಂ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದು ಅವರ ಮೂರನೇ ಸಿನಿಮಾವಾಗಿದೆ.

  English summary
  Kannada actor Ravichandran took his first selfie with his wife Sumathy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X