For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಅಭಿನಯದ 'ದೇವಕಿ' ಚಿತ್ರದಲ್ಲಿ ಉಪೇಂದ್ರ

  |

  ಸ್ಯಾಂಡಲ್ ವುಡ್ ನಲ್ಲಿ ಸದ್ಯ 'ದೇವಕಿ' ಚಿತ್ರದ್ದೆ ಹವಾ. ಟ್ರೈಲರ್ ಮತ್ತು ಟೀಸರ್ ಮೂಲಕ ಸದ್ದು ಮಾಡುತ್ತಿರುವ 'ದೇವಕಿ' ಚಿತ್ರ ರಿಲೀಸ್ ಗೆ ಸಜ್ಜಾಗಿದೆ. ಇದೆ ತಿಂಗಳು 5ಕ್ಕೆ ತೆರೆಗೆ ಬರುತ್ತಿರುವ 'ದೇವಕಿ' ಚಿತ್ರದಿಂದೀಗ ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಬಹಿರಂಗವಾಗಿದೆ.

  ಪ್ರಿಯಾಂಕ ಉಪೇಂದ್ರ ಅಭಿನಯದ ಈ ಚಿತ್ರಕ್ಕೀಗ ಪ್ರಿಯಾಂಕಾ ಪತಿ ಉಪೇಂದ್ರ ಕೂಡ ಸೇರ್ಪಡೆಯಾಗಿದ್ದಾರೆ. ಹೌದು, ಈಗಾಗಲೆ ಪ್ರಿಯಾಂಕಾ ಜೊತೆ ಮಗಳು ಐಶ್ವರ್ಯ ಮತ್ತು ತಾಯಿ ಕೂಡ ಇದೇ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅಜ್ಜಿ, ಮಗಲು, ಮೊಮ್ಮಗಳು ಈ ಮೂವರು ಒಟ್ಟಿಗೆ ಕಾಣಿಸಿಕೊಂಡಿದ್ದ ದೇವಕಿ ಚಿತ್ರಕ್ಕೀಗ ಉಪೇಂದ್ರ ಕೂಡ ಸೇರ್ಪಡೆಯಾಗಿದ್ದಾರೆ.

  ಕನ್ನಡದ ಈ ಚಿತ್ರದಲ್ಲಿ ಅಜ್ಜಿ, ಮಗಳು, ಮೊಮ್ಮಗಳು ಒಟ್ಟಿಗೆ ಅಭಿನಯಿಸಿದ್ದಾರೆ

  ಅಂದ್ಹಾಗೆ ಉಪೇಂದ್ರ ಈ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ ಅಂತ ಅಂದ್ಕೋಬೇಡಿ. ಬದಲಿಗೆ ಚಿತ್ರಕ್ಕೆ ಹಿನ್ನಲೆ ಧ್ವನಿ ನೀಡಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ದೃಶ್ಯಕ್ಕೆ ಉಪೇಂದ್ರ ಧ್ವನಿ ನೀಡಿದ್ದಾರಂತೆ. ತಾಯಿ ಪ್ರೀತಿ ಮತ್ತು ತ್ಯಾಗದ ಬಗ್ಗೆ ಇರುವ ಸಾಲುಗಳುಗಳಿಗೆ ಉಪೇಂದ್ರ ವಾಯ್ಸ್ ನೀಡಿರುವುದು ವಿಶೇಷ.

  ಉಪೇಂದ್ರ ಎಂಟ್ರಿಯಿಂದ 'ದೇವಕಿ' ಸಿನಿಮಾದಲ್ಲೀಗ ಪ್ರಿಯಾಂಕಾ ಅವರ ಇಡೀ ಕುಟುಂಬವೆ ಇದ್ದಹಾಗಾಗಿದೆ. ಸಾಕಷ್ಟು ಹೊಸ ವಿಚಾರಗಳಿಂದ ಸದ್ದು ಮಾಡುತ್ತಿರುವ 'ದೇವಕಿ' ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಚಿತ್ರಕ್ಕೆ ಮಮ್ಮಿ ಖ್ಯಾತಿಯ ನಿರ್ದೇಶಕ ಲೋಹಿತ್ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Kannada actor Real star Upendra joins his wife's Devaki film. Upendra gave the background voice for the film Devaki.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X