Just In
Don't Miss!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- News
ಹಕ್ಕಿ ಜ್ವರ; ಜ.26ರವರೆಗೂ ಕೆಂಪು ಕೋಟೆಗೆ ಪ್ರವೇಶ ನಿರ್ಬಂಧ
- Sports
ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Lifestyle
ಕೋವಿಡ್ ವ್ಯಾಕ್ಸಿನೇಷನ್ ಗೆ ಅನುಸರಿಸಬೇಕಾದ ನಿಯಮಗಳು ಇಲ್ಲಿವೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೊಂದು ಮದುವೆಗೆ ಸಜ್ಜಾದ ಸ್ಯಾಂಡಲ್ ವುಡ್: ರಿಷಿಗೆ ನಿಶ್ಚಿತಾರ್ಥದ ಸಂಭ್ರಮ
ಸ್ಯಾಂಡಲ್ ವುಡ್ ನಟ ರಿಷಿಗೆ ನಿಶ್ಚಿತಾರ್ಥ ಆದ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗಷ್ಟೆ ರಿಷಿ ಅಭಿನಯದ 'ಕವಲುದಾರಿ' ಚಿತ್ರ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಖುಷಿಯ ಜೊತೆಗೆ ಈಗ ಬಾಳ ಸಂಗಾತಿ ಸಿಕ್ಕಿದ ಸಂತಸ ಕೂಡ ಸೇರಿಕೊಂಡು ಡಬಲ್ ಖುಷಿಯಲ್ಲಿ ತೇಲುತ್ತಿದ್ದಾರೆ ರಿಷಿ.
'ಆಪರೇಶನ್ ಅಲಮೇಲಮ್ಮ' ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಿಷಿ ಪರ್ಮಿ ಪಾತ್ರದ ಮೂಲಕ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಕಿರುತೆರೆಯ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಬಣ್ಣದ ಲೋಕದ ಜೊತೆಗಿನ ನಂಟು ಬೆಳೆಸಿಕೊಂಡಿದ್ದ ರಿಷಿ ಈಗ ಸ್ಯಾಂಡಲ್ ವುಡ್ ನ ಸಕ್ಸಸ್ ಫುಲ್ ನಾಯಕನಾಗಿ ಮಿಂಚುತ್ತಿದ್ದಾರೆ.
ಮಸಾಲೆ ದೊಸೆ, ಮೈಸೂರ್ ಪಾಕ್ ಪಾರ್ಟಿ ಮಾಡಿದ 'ಕವಲುದಾರಿ' ಟೀಮ್
ರಿಷಿ ಅಭಿನಯಿಸಿದ ಎರಡೂ ಸಿನಿಮಾಗಳು ಖ್ಯಾತಿ ತಂದುಕೊಟ್ಟಿವೆ. ಸದ್ಯ ಬಹುಕಾಲದ ಗೆಳತಿ ಸ್ವಾತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹಾಗಾದ್ರೆ ಯಾರು ಈ ಸ್ವಾತಿ? ಪರ್ಮಿಯ ನಿಶ್ಚಿತಾರ್ಥ ಯಾವಾಗ ನಡೆಯಿತು? ಮುಂದೆ ಓದಿ..

ಹೈದರಾಬಾದ್ ನಲ್ಲಿ ನಡೆದ ನಿಶ್ಚಿತಾರ್ಥ
'ಕವಲುದಾರಿ' ಸಕ್ಸಸ್ ನ ಖುಷಿಯಲ್ಲಿರುವ ರಿಷಿ ಬಹುಕಾಲದ ಗೆಳತಿ ಸ್ವಾತಿ ಜೊತೆ ಹಸೆಮೆಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ಇಬ್ಬರ ನಿಶ್ಚಿತಾರ್ಥ ಸಂಭ್ರಮ ಹೈದರಾಬಾದ್ ನಲ್ಲಿ ನೆರವೇರಿದೆ. ಸಿನಿಮಾ ರಿಲೀಸ್ ನಲ್ಲಿ ಬ್ಯುಸಿಯಿದ್ದ ರಿಷಿ ಈ ವಿಚಾರವನ್ನು ಬಹಿರಂಗ ಪಡಿಸದೆ ಸೈಲೆಂಟ್ ಆಗಿ ಗೆಳತಿ ಸ್ವಾತಿ ಜೊತೆ ಎಂಗೇಜ್ ಆಗಿದ್ದಾರೆ. ತೀರಾ ಖಾಸಗಿಯಾಗಿ ನಡೆದ ಈ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಈಗ ಎಂಗೇಜ್ ಮೆಂಟ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಿಶ್ಚಿತಾರ್ಥದ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಕವಲುದಾರಿ ಚಿತ್ರದಲ್ಲಿ ಸುನಿಗೆ ತುಂಬಾ ಇಷ್ಟವಾದ ಅಂಶವಿದು

ಮದುವೆ ವಿಚಾರ ಹಂಚಿಕೊಂಡಿದ್ದು ಹೀಗೆ
"ಧನ್ಯವಾದಗಳು, ನೀವೆಲ್ಲರೂ ನನ್ನ ಕೆಲಸವನ್ನು ನೋಡಿ ಮೆಚ್ಚಿ ಪ್ಪ್ರೋತ್ಸಾಹಿಸಿದ್ದೀರಿ. ನಿಮ್ಮ ಈ ಪ್ರೀತಿ ನನಗೆ ಇನ್ನಷ್ಟು ಒಳ್ಳೆ ಕೆಲಸಗಳ ಮೂಲಕ ನಿಮ್ಮೆಲ್ಲರನ್ನು ರಂಜಿಸಲು ಸ್ಫೂರ್ತಿ ಕೊಟ್ಟಿದೆ.
ಈ ಗೆಲುವಿನ ಬೆನ್ನಲ್ಲೇ ನನ್ನ ವೈಯಕ್ತಿಕ ಜೀವನದಲ್ಲೂ ಒಂದು ಮಹತ್ತರ ಮೈಲಿಗಲ್ಲನ್ನು ಮುಟ್ಟಿದ್ದೇನೆಂದು ನಿಮ್ಮ ಬಳಿ ಹಂಚಿಕೊಳ್ಳಲು ನನಗೆ ಬಹಳ ಸಂತಸವಿದೆ
ನನ್ನ ಸಂಗಾತಿ ನನಗೆ ಸಿಕ್ಕಿದ್ದಾಳೆ. ಸ್ವಾತಿ, ಅವಳ ಹೆಸರು"

ಬರಹಗಾರ್ತಿ ಸ್ವಾತಿ
"ಸ್ವಾತಿ ವೃತ್ತಿಯಿಂದ ಬರಹಗಾರ್ತಿ. ನನ್ನ ಎಲ್ಲ ಕೆಲಸಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದಾಳೆ. ನಮ್ಮಿಬ್ಬರ ಕುಟುಂಬದವರ ಆಶೀರ್ವಾದದಿಂದ, ಹೈದರಾಬಾದ್ ನಲ್ಲಿ ಒಂದು ಚಿಕ್ಕ ಸಮಾರಂಭದಲ್ಲಿ ನಮ್ಮಿಬ್ಬರ ನಿಶ್ಚಿತಾರ್ಥ ನೆರವೇರಿದೆ. ರಿಲೀಸ್ ಕೆಲಸಗಳಲ್ಲಿ ತೊಡಗಿದ್ದರಿಂದ ನಿಶ್ಚಿತಾರ್ಥದ ವಿಚಾರವನ್ನು ಇವಾಗ ತಿಳಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಶುಭ ಹಾರೈಕೆ ನಮ್ಮ ಮೇಲೆ ಸದಾ ಹೀಗೆ ಇರಲಿ ಎಂದು ಕೋರುತ್ತಾ, ಮದುವೆಯಲ್ಲಿ ನಿಮ್ಮನ್ನು ಭೇಟಿಯಾಗುವ ಆಶಯದೊಂದಿಗೆ ಮತ್ತೊಮ್ಮೆ ಹೃದಯಪೂರ್ವಕ ಧನ್ಯವಾದಗಳು" ಎಂದು ಸಂತಸವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

ಪಿ ಆರ್ ಕೆ ಬ್ಯಾನರ್ ನಲ್ಲಿ ರಿಷಿ ಸಿನಿಮಾ
ರಿಷಿ ಅಭಿನಯದ ಎರಡನೇ ಸಿನಿಮಾ ಕವಲುದಾರಿ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಮೂಡಿಬಂದ ಸಿನಿಮಾವಾಗಿದೆ. ಸಂಚಾರಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದ ರಿಷಿ ಸಿನಿ ಪ್ರಿಯರ ಮನಗೆದ್ದಿದ್ದಾರೆ. 'ಆಪರೇಶನ್ ಅಲಮೇಲಮ್ಮ' ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಕಾಣಿಸಿಕೊಂಡಿದ್ದ ರಿಷಿ ಸ್ಯಾಂಡಲ್ ವುಡ್ ನ ಬರವಸೆಯ ನಟನಾಗಿ ಗಮನಸೆಳೆದಿದ್ದರು.

ರಿಷಿ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು
ಎರಡು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಯಶಸ್ವಿನಟನಾಗಿರುವ ರಿಷಿ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. 'ರಾಮನ ಅವತಾರ', 'ಗಾಳಿಪಟ-2', 'ಸಾರ್ವಜನಿಕರಿಗೆ ಸುವರ್ಣಾವಕಾಶ', 'ಸಿಲ್ಕ್ ಸಿದ್ದ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನಿಶ್ಚಿತಾರ್ಥದ ವಿಷಯ ಬಹಿರಂಗ ಪಡಿಸಿರುವ ರಿಷಿ ಮದುವೆ ದಿನಾಂಕ ಕೂಡ ಸಧ್ಯದಲ್ಲೇ ಗೊತ್ತಾಗಲಿದೆ.