For Quick Alerts
  ALLOW NOTIFICATIONS  
  For Daily Alerts

  'ಕವಲುದಾರಿ'ಯ ನಟ ರಿಷಿ ಈಗ 'ಸಕಲಕಲಾವಲ್ಲಭ'

  |

  'ಕವಲುದಾರಿ' ಚಿತ್ರದ ಸಕ್ಸಸ್ ನ ಖುಷಿಯಲ್ಲಿ ನಟ ರಿಷಿ ಮತ್ತೊಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಈಗಾಗಲೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರಕ್ಕೆ ಸದ್ಯ ಟೈಟಲ್ ಫಿಕ್ಸ್ ಆಗಿದೆ.

  ಹೌದು, ರಿಷಿ ಅಭಿನಯದ ಹೊಸ ಚಿತ್ರಕ್ಕೆ 'ಸಕಲಕಲಾವಲ್ಲಭ' ಎಂದು ನಾಮಕರಣ ಮಾಡಲಾಗಿದೆ. 'ಸಕಲಕಲಾವಲ್ಲಭ' ಎಂದಾಕ್ಷಣ ಕಮಲ್ ಹಾಸನ್ ನೆನಪಾಗುತ್ತಾರೆ. ಆದ್ರೆ ಈ 'ಸಕಲಕಲಾವಲ್ಲಭ' ನಟ ರಿಷಿ. ಅಂದ್ಹಾಗೆ ಚಿತ್ರಕ್ಕೆ ಜಾಕೋಬ್ ವರ್ಗೀಸ್ ಆಕ್ಷನ್ ಕಟ್ ಹೇಳಿದ್ದಾರೆ.

  ಮತ್ತೊಂದು ಮದುವೆಗೆ ಸಜ್ಜಾದ ಸ್ಯಾಂಡಲ್ ವುಡ್: ರಿಷಿಗೆ ನಿಶ್ಚಿತಾರ್ಥದ ಸಂಭ್ರಮ

  ಈ ಮೊದಲು 'ಪೃಥ್ವಿ', 'ಚಂಬಲ್' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರು ವರ್ಗೀಸ್ ಸೈಲೆಂಟ್ ಆಗಿ 'ಸಕಲಕಲಾವಲ್ಲಭ' ಚಿತ್ರ ಮಾಡಿ ಮುಗಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಇರುವ ಚಿತ್ರತಂಡ ಸಧ್ಯದಲ್ಲೇ ಪೋಸ್ಟರ್ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದೆ.

  ಇನ್ನು ಚಿತ್ರದಲ್ಲಿ ನಟ ಸಾಯಿ ಕುಮಾರ್ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ರಿಷಿಗೆ ನಾಯಕಿಯಾಗಿ ಮಲಯಾಳಿ ಬೆಡಗಿ ರಿಬಾ ಮೋನಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂ ನಟ ನಿವೀನ್ ಪೌಲಿ ಜೊತೆ ನಾಯಕಿಯಾಗಿ ಮಿಂಚಿರುವ ರಿಬಾ ಮೊದಲ ಬಾರಿಗೆ ಕನ್ನಡಕ್ಕೆ ಕಾಲಿಟ್ಟಿದ್ದಾರೆ.

  ಈಗಾಗಲೆ ಚಿತ್ರೀಕರಣ ಮುಗಿಸಿರುವ ಚಿತ್ರದ ರಿಲೀಸ್ ಪ್ಲಾನ್ ಮಾಡುತ್ತಿದೆ. ಎಲ್ಲವು ಅಂದು ಕೊಂಡಂತೆ ಆದ್ರೆ ಆಗಸ್ಟ್ ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ವಿಭಿನ್ನ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿರುವ ರಿಷಿ ಸಕಲಕಲಾವಲ್ಲಭ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಚಿತ್ರಾಭಿಮಾನಿಗಳ ಕುತೂಹಲ.

  English summary
  Kannada actor Rishi upcoming film titled 'Skalakala Vallabha'. This movie is directed by Jacob Vaghese.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X