ಹಾಸ್ಯನಟ ಸಾಧು ಕೋಕಿಲಾ ತಾಯಿ ವಿಧಿವಶ

ಕನ್ನಡದ ಖ್ಯಾತ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರ ತಾಯಿ ವಿಧಿವಶರಾಗಿದ್ದಾರೆ. ಈ ಸುದ್ದಿಯನ್ನ ಸ್ವತಃ ಸಾಧು ಕೋಕಿಲಾ ಅವರ ಸಹೋದರಿ ಉಷಾ ಕೋಕಿಲಾ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಸಾಧು ಕೋಕಿಲಾ ಅವರ ಅಮ್ಮನ ಹೆಸರು ಮಂಗಳ. ಮಂಗಳ ಅವರು ಯಾವಾಗ ಮತ್ತು ಹೇಗೆ ನಿಧನರಾದರು ಎಂಬ ಮಾಹಿತಿ ತಿಳಿಸದ ಉಷಾ ಅವರು ''ನಮ್ಮ ತಾಯಿಯನ್ನ ಕಳೆದುಕೊಂಡೆವು'' ಎಂಬುದನ್ನಷ್ಟೇ ಹೇಳಿದ್ದಾರೆ.

ಮಂಗಳ ಅವರು ವೃತ್ತಿಯಲ್ಲಿ ಆರ್ಕೇಸ್ಟ್ರಾ ಸಿಂಗರ್ ಆಗಿದ್ದರು. ತಂದೆ ನಟೇಶ್ ಅವರು ಪಿಟೀಲು ವಾದ್ಯ ನುಡಿಸುತ್ತಿದ್ದರು. ಒಂದೇ ಆರ್ಕೇಸ್ಟ್ರಾ ಇಬ್ಬರು ಸಾಕಷ್ಟು ವರ್ಷ ಕೆಲಸ ಮಾಡಿದ್ದಾರೆ.

kannada actor sadhu kokila mother is no more

2016 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಸಾಧುಕೋಕಿಲಾ ಅವರು ತಂದೆ-ತಾಯಿ ಕೂಡ ಬಂದಿದ್ದರು. ಆ ವೇಳೆ ತಂದೆ-ತಾಯಿಯ ಬಗ್ಗೆ ಸಾಧುಕೋಕಿಲಾ ಅವರು ತುಂಬಾ ಭಾವುಕರಾಗಿದ್ದರು.

''ನಮ್ಮ ತಂದೆ-ತಾಯಿ ಹೇಗೆಲ್ಲಾ ನಮ್ಮನ್ನ ಸಾಕಿದ್ದಾರೆ ಅಂದ್ರೆ, ಮದುವೆ ಮನೆಯಲ್ಲಿ ಆರ್ಕೇಸ್ಟ್ರಾ ಮುಗಿಸಿ, ಮೊದಲು ತಾಂಬೂಲ ತೆಗೆದುಕೊಂಡು, ತಾಂಬೂಲದ ಕವರ್ ನಲ್ಲಿ ಮದುವೆ ಮನೆ ಊಟ ಹಾಕಿಸಿಕೊಂಡು ಮನೆಗೆ ತರೋರು. ಅವರಿಬ್ಬರು ಊಟ ಮಾಡ್ತಿರ್ಲಿಲ್ಲ. ಮನೆಗೆ ತಂದು, ನಾವು ತಿಂದು ಬಿಟ್ಟಿದ್ದನ್ನ ಅವರು ತಿನ್ನೋರು. ಅಂತಹ ತಂದೆ-ತಾಯಿ'' - ಸಾಧು ಕೋಕಿಲ

More from Filmibeat

English summary
kannada actor and music director sadhu kokila mother is no more. sadhu kokila sister shares this news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X